ಯುವಜನತೆಯಲ್ಲಿ ದೇಶಪ್ರೇಮದ ಕೊರತೆ
ಕ.ಪ್ರ.ವಾರ್ತೆ , ಕುಣಿಗಲ್ , ಜ.15
ಯುವಜನತೆಯಲ್ಲಿ ದೇಶಪ್ರೇಮ ಕೊರತೆ, ಜೊತೆಯಲ್ಲಿ ಭ್ರಷ್ಟಾಚಾರ ವಿರೋಧಿಸುವ ಮನೋಭಾವ ಕುಂಠಿತವಾಗಿರುವ ಕಾರಣ ದೇಶವು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಜಗದೀಶ್ ಅಭಿಪ್ರಾಯಪಟ್ಟರು.
ತಾಲೂಕಿನ ಎಡೆಯೂರಿನ ಸರ್ಕಾರಿಪ.ಪೂ.ಕಾಲೇಜಿನಲ್ಲಿ ಸೋಮವಾರ, ಎಡೆಯೂರಿನ ವಿವೇಕಾನಂದ ಯುವಕ ಸಂಘ ಹಮ್ಮಿಕೊಂಡಿದ್ದ ಸ್ವಾಮಿವಿವೇಕಾನಂದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿನ ಯುವಜನತೆ ಇಂದು ಸ್ವಾರ್ಥಪರರಾಗುತ್ತಾ, ಬಹುಪಾಲು ಯುವಕರು ತಮ್ಮ ಜೀವನ ನಿರ್ವಹಣೆಯ ಬಗ್ಗೆಯೆ ಯೋಚಿಸುತ್ತಾ ಕಾಲಕಳೆಯುವಂತಾಗಿರುವುದು ಖೇದಕರ. ದೈನಂದಿನ ಜೀವನ ನಿರ್ವಹಣೆಯ ಕಾಲದಲ್ಲಿ ಕೆಲಕಾಲವಾದರೂ, ದೇಶದ ಬಗ್ಗೆ, ಸಮಾಜದಲ್ಲಿನ ಭ್ರಷ್ಟಾಚಾರಗಳ ಬಗ್ಗೆ ಅವಲೋಕಿಸಿ ಅವುಗಳ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ತೊಡಗಿಕೊಂಡಾಗ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗುತ್ತದೆ. ಸ್ವಾಮಿವಿವೇಕಾನಂದರು ದೇಶದ ಯುವಜನತೆಯಲ್ಲಿ ಸ್ವಾಭಿಮಾನ ಮೂಡುವಂತೆ ಮಾಡಿದ ಕಾರ್ಯ ಸರ್ವಕಾಲಕ್ಕೂ ಶ್ಲಾಘನೀಯ ಎಂದರು.
ಪರಿಣಾಮಕಾರಿ ನಿರ್ವಹಿಸಬೇಕಿದೆ: ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ವೀರಣ್ಣ, ಪ್ರಧಾನ ಭಾಷಣಕರರಾಗಿ ಮಾತನಾಡಿ, ಪ್ರಸ್ತುತ ಯುವಜನತೆಗೆ ಸ್ವಾಮಿ ವಿವೇಕಾನಂದರ ಬಗ್ಗೆ ಮತ್ತಷ್ಟು ಅರಿವು ಮೂಡಿಸುವಂತ ಕೆಲಸವನ್ನು ಸರ್ಕಾರ ಸೇರಿದಂತೆ ಖಾಸಗಿ ಸಂಘ, ಸಂಸ್ಥೆಗಳು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ. ಅವರು ಯುವಜನತೆಯ ಸಬಲತೆಗೆ ನೀಡಿರುವ ಹಲವು ಸಂದೇಶಗಳು ಸರ್ವಕಾಲಕ್ಕೂ ಮಾನ್ಯವಾಗಿದ್ದು ಯುವಜನತೆ ತಮ್ಮ ಜೀವನದಲ್ಲಿ ಅವರ ಸಂದೇಶದ ಸ್ವಲ್ಪವನ್ನಾದರೂ ಅಳವಡಿಸಿಕೊಂಡಲ್ಲಿ ಸಾರ್ಥಕ ಜೀವನ ನಡೆಸಬಹುದೆಂದರು.
ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ದೀಪು ಅಧ್ಯಕ್ಷತೆ ವಹಿಸಿದ್ದು, ಪ್ರಾಚಾರ್ಯ ನಂಜಪ್ಪ, ಸಂಘದ ಪದಾಧಿಕಾರಿಗಳಾದ ದೇವರಾಜ, ಮಾರುತೀಶ್, ಲೋಕೇಶ, ಭರತ, ರಾಮು, ಪ್ರಮುಖರಾದ ಚನ್ನೇಗೌಡ,ಬಸವರಾಜು, ನಾಗರಾಜು ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

