ತುಮಕೂರು

ಅವಿಶ್ವಾಸ ನಿರ್ಣಯ ರದ್ದು; ಗ್ರಾಪಂ ಅಧ್ಯಕ್ಷರ ಪುನರಾಯ್ಕೆ

Published On :

ಪಾವಗಡ: ತಾಲೂಕಿನ ಸಿ.ಕೆ.ಪುರ ಗ್ರಾಪಂನಲ್ಲಿ ಅಧ್ಯಕ್ಷರ ವಿರುದ್ಧ ತಂದಿದ್ದ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸಿಗದೇ ಅಧ್ಯಕ್ಷರಾಗಿ ಹನುಮಕ್ಕ ರಾಜಪ್ಪ ಶುಕ್ರವಾರ ಮರು ಆಯ್ಕೆಯಾಗಿದ್ದಾರೆ.
ಗ್ರಾಪಂನಲ್ಲಿ ಒಟ್ಟು 18 ಸದಸ್ಯರಿದ್ದು ಅನುದಾನ ಆಸಮರ್ಪಕ ಬಳಕೆ ಸೇರಿದಂತೆ ಆಡಳಿತದಲ್ಲಿ ಅಧ್ಯಕ್ಷರ ಕುಟುಂಬದ ಕೈವಾಡ ಹಿನ್ನೆಲೆಯಲ್ಲಿ ಬೇಸತ್ತು ಕಳೆದ ಜ.12ರಂದು ಅಧ್ಯಕ್ಷೆ ಹನುಮಕ್ಕ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ತೀರ್ಮಾನಿಸಿದ್ದರು. ಗ್ರಾಪಂನ 13 ಸದಸ್ಯರು ಸಹಿ ಹಾಕಿ ಸಂಬಂಧಪಟ್ಟ ಮಧುಗಿರಿ ಉಪವಿಭಾಗಧಿಕಾರಿಗಳಿಗೆ ಮನವಿ ನೀಡಿದ್ದರು. ಅಧ್ಯಕ್ಷರ ಆಯ್ಕೆ ಚುನಾವಣೆಗೆ ಗಡುವು ವಿಧಿಸಿದ್ದ ಉಪವಿಭಾಗಾಧಿಕಾರಿ ತಪ್ಸಮ್ ಜಾಹೇರಾ ಶುಕ್ರವಾರ ಸಿ.ಕೆ.ಪುರ ಗ್ರಾಪಂಗೆ ಭೇಟಿ ನೀಡಿ ಚುನಾವಣೆ ನಡೆಸಿದರು.ಚುನಾವಣೆ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದ 13 ಸದಸ್ಯರ ಪೈಕಿ ಡಿ.ಶ್ರೀನಿವಾಸ್ ಮತ್ತು ತಿಪ್ಪೇಸ್ವಾಮಿ ಎಂಬ ಇಬ್ಬರು ಸದಸ್ಯರು ಗೈರಾದ ಹಿನ್ನೆಲೆಯಲ್ಲಿ ಸದಸ್ಯರು ಮಂಡಿಸಿದ್ದ ಅವಿಶ್ವಾಸ ನಿರ್ಣಯ ರದ್ದಾಗಿ ಮತ್ತೆ ಅಧ್ಯಕ್ಷರಾಗಿ ಹನುಮಕ್ಕ ರಾಜಪ್ಪ ನೇಮಕಗೊಂಡಿದ್ದಾರೆ. ಅಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ರದ್ದಾದ ಹಿನ್ನೆಲೆಯಲ್ಲಿ ಇದು ವ್ಯವಸ್ಥಿತ ಪಿತೂರಿ ಎಂದು ಆರೋಪಿಸಿ ಸಿ.ಕೆ.ಪುರ ಗ್ರಾಪಂನ ಬಿಜೆಪಿ, ಜೆಡಿಎಸ್ ಬೆಂಬಲಿತ 13 ಮಂದಿ ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಆಸಮಾಧಾನಗೊಂಡ ಸದಸ್ಯರ ಪರವಾಗಿ ಮುಖಂಡ ಹಾಗೂ ಸದಸ್ಯ ಕರಿಬಸವ ಪತ್ರಿಕೆಯೊಂದಿಗೆ ಮಾತನಾಡಿ, ಗ್ರಾಪಂ ಅಭಿವೃದ್ಧಿಗೆ ಬಿಡುಗಡೆಯಾದ ಸರ್ಕಾರಿ ಅನುದಾನ ದುರ್ಬಳಕೆಯಿಂದ ಅಧ್ಯಕ್ಷೆ ಹನುಮಕ್ಕ ಅವರ ಆಡಳಿತದಲ್ಲಿ ಅಭಿವೃದ್ಧಿ ಹಿನ್ನಡೆಯಾಗಿದೆ ಎಂದು ಆರೋಪಿಸಿದರು.
ಜ.12ರಂದು ಅಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ 13 ಮಂದಿ ಸದಸ್ಯರು ಸಹಿ ಹಾಕಿದ್ದು ಸಹಿ ಹಾಕಿದ್ದ ಇಬ್ಬರು ಸದಸ್ಯರನ್ನು ಕಿಡ್ನಾಪ್ ಮಾಡಿ ಅನ್ಯಾಯ ಮಾಡಿದ್ದಾರೆ. ಗ್ರಾಪಂ ಅಭಿವೃದ್ಧಿಯಲ್ಲಿ ಅಧ್ಯಕ್ಷರ ಅವ್ಯವಹಾರಕ್ಕೆ ಕುಮ್ಮಕ್ಕು ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜ.18ರಂದು ಗ್ರಾಪಂನ 13 ಮಂದಿ ಸದಸ್ಯರು ಉಪವಿಭಾಗಾಧಿಕಾರಿಗಳಿಗೆ ಹಾಗೂ ತಹಸೀಲ್ದಾರ್ ಅವರಿಗೆ ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.