ಎಲ್ಲ ಧರ್ಮಗಳಿಗಿಂತ ದೊಡ್ಡದು ರೈತ ಧರ್ಮ
ಹುಳಿಯಾರು: ಸಮಾಜದಲ್ಲಿ ಜಾತಿ, ಮತ, ಧರ್ಮದ ಹೆಸರಿನಲ್ಲಿ ಪೈಪೋಟಿ ನಡೆಸುತ್ತಾ ದೇಶದ ಅಭಿವೃದ್ಧಿಯನ್ನು ಮರೆತಿರುವುದಲ್ಲದೆ, ತನ್ನ ಜೀವನಕ್ಕೂ ಸಂಚಕಾರ ತಂದುಕೊಳ್ಳುತ್ತಿರುವ ಸನ್ನಿವೇಶ ಎದುರಾಗಿದೆ ಎಂದು ಶಾಸಕ ಹಾಗೂ ರೈತಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹುಳಿಯಾರಿನ ರೈತಸಂಘ ಹಾಗೂ ಹಸಿರು ಸೇನೆಯವರು ಮಂಗಳವಾರ ನಡೆದ ತಾಲೂಕು, ಹೋಬಳಿ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ಎಲ್ಲಾ ಧರ್ಮಗಳಿಗಿಂತ ದೊಡ್ಡದು ರೈತ ಧರ್ಮ ಎಂದರು.
ಜಾತಿ ಜಾತಿಗಳ ನಡುವೆ ತಿಕ್ಕಾಟ ಮಾಡುವುದನ್ನು ಬಿಟ್ಟು ನಾವೆಲ್ಲ ಒಂದೇ ಎಂಬ ವಿಶಾಲ ಮನೋಭಾವನೆಯಿಂದ ದೇಶದ ಪ್ರಗತಿಯ ಬಗ್ಗೆ ಗಮನಕೊಡಬೇಕು ಹಾಗೂ ನಮ್ಮ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯ ಮಾಡಬೇಕೆಂದರು. ಕೃಷಿಬೆಳೆಗಳಿಗೆ ಸೂಕ್ತಬೆಂಬಲಬೆಲೆ ಹಾಗೂ ರೈತರ ಮೇಲಿನ ಸಾಲ ಸೇರಿದಂತೆ ಅನೇಕ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.
ಸಂಗನಹಳ್ಳಿಯ ಶ್ರೀಕಾಶಿ ಅನ್ನಪೂರ್ಣೇಶ್ವರಿ ಕ್ಷೇತ್ರದ ಶ್ರೀಬಸವಮಹಾಲಿಂಗಸ್ವಾಮಿಯವರು ಕಾರ್ಯಕ್ರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಸೋಮಗುದ್ದ ರಂಗಸ್ವಾಮಯ್ಯನವರು ಅಧ್ಯಕ್ಷತೆ ವಹಿದ್ದು, ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷರಾದ ಕೆ.ಟಿ.ಗಂಗಾಧರ್, ಎ. ಗೋವಿಂದರಾಜು, ರಾಮಸ್ವಾಮಿ, ಗುಬ್ಬಿಯ ನಿಜಾನಂದಾ ಮೂರ್ತಿ, ಶಿರಾ ಪರಮಶಿವಮೂರ್ತಿ, ಮುಖಂಡರಾದ ಶಂಕರಪ್ಪ, ನಾಗರತ್ನಮ್ಮ, ದ್ಯಾಮೇಗೌಡ, ವಕೀಲ ರಮೇಶ್, ಪಾತ್ರೆಪರಮೇಶ್, ಭಟ್ರಳ್ಳಿ ರಾಮಚಂದ್ರ, ಹೊಸಳ್ಳಿ ಚಂದ್ರಣ್ಣ ಸೇರಿದಂತೆ ಹೋಬಳಿಯ ಸುತ್ತಮುತ್ತಲಿನ ರೈತ ಮುಖಂಡರು, ರೈತರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

