ತೃತೀಯ ರಂಗಕ್ಕೆ ಹೆಚ್ಚು ಅವಕಾಶ
ತುಮಕೂರು: ಈ ಬಾರಿಯ ಚುನಾವಣಾ ಸಮೀಕ್ಷೆಗಳು ಯಾವಛುದೇ ಪಕ್ಷಕ್ಕೆ ಬಹುಮತ ಬರುವಂತೆ ಹೇಳುತ್ತಿಲ್ಲ. ಆದರೆ ತೃತೀಯ ರಂಗಕ್ಕೆ ಕೇಂದ್ರದಲ್ಲಿ ಸರ್ಕಾರ ರಚಿಸುವ ಅವಕಾಶ ಹೆಚ್ಚಿದೆ ಎಂದರೆ ತಪ್ಪಾಗಲಾರದು ಎಂದು ಮಧುಗಿರಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿಪಾದಿಸಿದರು.
ಅವರು ತುಮಕೂರಿನಲ್ಲಿ ಏರ್ಪಡಿಸಿದ್ದ ಜೆಡಿಎಸ್ ರಾಜ್ಯ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಈ ಹಿಂದೆ ತೃತೀಯ ರಂಗದಿಂದ ಪ್ರಧಾನಿಯಾಗಿದ್ದ ಮಾಜಿ ಪ್ರಧಾನಿ ಹಾಗೂ ತಮ್ಮ ಮಾವ ದೇವೇಗೌಡರ ಆಡಳಿತ ವೈಖರಿ ಕುರಿತು ಮುಕ್ತ ಕಂಠದಿಂದ ಪ್ರಶಂಶಿಸಿದರು. ಜಮ್ಮು- ಕಾಶ್ಮೀರ ಭೇಟಿ, ಬಾಂಗ್ಲಾ ನದಿ ನೀರು ಹಂಚಿಕೆ ವಿವಾದ ಬಗೆಹರಿಸಿದ್ದು, ಹೆಚ್ಚುವರಿಯಾಗಿ ಬೆಂಗಳೂರಿಗೆ ಕಾವೇರಿ ನೀರು ಹರಿಸಲು ಶ್ರಮಿಸಿದ್ದು, ರೈತರು, ಮಹಿಳೆಯರ ಪರ ಕಾರ್ಯಕ್ರಮ ಜಾರಿ ಮಾಡಿದ್ದು, ಕುಡಿಯುವ ನೀರು, ನೀರಾವರಿ ವಿಷಯದಲ್ಲಿ ವಿವಿಧ ಯೋಜನೆ ಜಾರಿ ಮಾಡಿದ್ದು ದೇವೇಗೌಡರು. ಆದರೆ ಅವರನ್ನು ಪಿತೂರಿ ಮಾಡಿ ಕೆಳಗಿಳಿಸಲಾಯಿತು. ಅವರು ಆಡಳಿತ ನಡೆಸಿದ್ದು ಕೇವಲ 11 ತಿಂಗಳಷ್ಟೇ. ಆದರೆ ಆದ ಕೆಲಸ ಅಗಾಧವಾದದ್ದು ಎಂದು ವಿಶ್ಲೇಷಿಸಿದರು.
ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯಕ್ಕೆ ತಮಿಳ್ನಾಡು ಉತ್ತಮ ಉದಾಹರಣೆಯಾಗಿದ್ದು, ಯಾವುದೇ ಸರ್ಕಾರ ಕೇಂದ್ರದಲ್ಲಿದ್ದರೂ ತಮಿಳ್ನಾಡಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ತಡೆಯಲು, ಅಭಿವೃದ್ಧಿಯ ಮಹಾಪೂರವೇ ಹರಿದುಬರುವಂತೆ ಮಾಡುವಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳ ಪಾತ್ರ ಮಹತ್ವದ್ದು. ಇದೇ ರೀತಿಯ ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡ ಆಗಿದ್ದು, ಜನಪರ ಕಾಳಜಿ ಮೆರೆಯಲು ಎಂದೂ ಹಿಂದು-ಮುಂದು ನೋಡಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

