ತುಮಕೂರು

ಅನುದಾನ ಬಿಡುಗಡೆಗಾಗಿ ಪ್ರತಿಭಟನೆ

Published On :

ಕ.ಪ್ರ. ವಾರ್ತೆ    ಪಾವಗಡ    ಜ. 23
ಅನುದಾನ ಬಿಡುಗಡೆಗೆ ಒತ್ತಾಯಿಸಿ ಗುರುವಾರ ಬಿಸಿಎಂ ವಿದ್ಯಾರ್ಥಿ ನಿಲಯಗಳ ಹೆಚ್ಚುವರಿ ವಿದ್ಯಾರ್ಥಿಗಳು ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬಿಸಿಎಂ ವಿದ್ಯಾರ್ಥಿ ನಿಲಯಗಳ ಪ್ರವೇಶದ ಸಂದರ್ಭದಲ್ಲಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಸುಮಾರು 150 ಮಂದಿ ವಿದ್ಯಾರ್ಥಿಗಳಿಗೆ ಬಿಸಿಎಂ ಅಧಿಕಾರಿ ಪ್ರವೇಶಾವಕಾಶ ಕಲ್ಪಿಸಿದ್ದರು. ವಿದ್ಯಾರ್ಥಿ ನಿಲಯಗಳಲ್ಲಿ ವಸತಿ ಮತ್ತು ಊಟ ಕಲ್ಪಿಸಿ ಸುಮಾರು 8 ತಿಂಗಳು ಕಳೆದರೂ ಈ ವಿದ್ಯಾರ್ಥಿಗಳಿಗೆ ಅನುದಾನ ನೀಡುವಲ್ಲಿ ತಾಪಂ ವಂಚಿಸುತ್ತಿದ್ದ ಮೇರೆಗೆ ತಾಪಂಗೆ ಮುತ್ತಿಗೆ ಹಾಕಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಒಕ್ಕೂಟದ ಮುಖಂಡ ಮಂಜುನಾಥ್ ಮಾತನಾಡಿ, ಪ್ರವೇಶ ಪಡೆದ 150 ಮಂದಿ ಹೆಚ್ಚುವರಿ ವಿದ್ಯಾರ್ಥಿಗಳಿಗೆ ವಸತಿ ಮತ್ತು ಊಟ ತಿಂಡಿ ಕಲ್ಪಿಸಿ 8 ತಿಂಗಳು ಕಳೆದರೂ ಅನುದಾನ ನೀಡುವಲ್ಲಿ ತಾಪಂ ವಂಚಿಸಿದೆ. ಅಲ್ಲದೆ ಯೋಜನೆಯ ನಿಧಿ 3ರಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅನುದಾನ ನೀಡುವ ನಿಯಮವಿದ್ದರೂ ನಿರ್ಲಕ್ಷ್ಯಿಸಿರುವುದು ವಿಪರ್ಯಾಸ. ಹಣ ಬಿಡುಗಡೆಯಾಗದ ಕಾರಣ ಇಲಾಖೆಯ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಊಟ ತಿಂಡಿ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಬಿಸಿಎಂ ತನಿಖಾಧಿಕಾರಿ ಪಾರ್ವತಮ್ಮ ಅಡಿಗಿನಾಳ್ ಮಾತನಾಡಿ, ರಾಜಕಾರಣಿಗಳ ಶಿಫಾರಸ್ ಮೇರೆಗೆ ತೆಗೆದುಕೊಂಡ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಕಳೆದ 3 ವರ್ಷಗಳಲ್ಲಿ ಸುಮಾರು 18 ಲಕ್ಷ ಅನುದಾನ ಸರ್ಕಾರ ನೀಡಬೇಕು. ಈ ಬಗ್ಗೆ ಆನೇಕ ಬಾರಿ ಸಂಬಂಧಪಟ್ಟ ಜಿಪಂ ಹಾಗೂ ತಾಪಂಗೆ ದಾಖಲೆ ಸಮೇತ ಮನವಿ ಮಾಡಲಾಗಿದೆ. ನಿರ್ಲಕ್ಷ್ಯ ಮಾಡುತ್ತಿರುವ ಕಾರಣ ಸಾಲ ಮಾಡಿ ಹಾಸ್ಟೆಲ್ ನಿರ್ವಹಿಸಲು ಕಷ್ಟವಾಗಿದೆ ಎಂದು ತಮ್ಮ ಅಳಲು ವ್ಯಕ್ತಪಡಿಸಿದರು.
ತಾಪಂ ಇಒ ತಿಪ್ಪೇಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕಾದರೆ ಮೊದಲು ಬಿಸಿಎಂ ಅಧಿಕಾರಿಗಳು ಸರ್ಕಾರದ ಅನುಮತಿ ಪಡಬೇಕು. ಅಲ್ಲದೆ ಅನುದಾನ ಬಿಡುಗಡೆಗೆ ಸಂಬಂಧಪಟ್ಟಂತೆ ಸಮಯಕ್ಕೆ ಸರಿಯಾಗಿ ದಾಖಲೆ ನಿರ್ವಹಿಸುವಲ್ಲಿ ಬಿಸಿಎಂ ತನಿಖಾಧಿಕಾರಿ ನಿಗಾ ವಹಿಸಿಲ್ಲವೆಂದರು. ಈ ಬಗ್ಗೆ ತಾಪಂ ಸದಸ್ಯರನ್ನು ಸಭೆ ಕರೆದು ಸಭೆಯಲ್ಲಿ ಚರ್ಚಿಸಿ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳ ಅನುಕೂಲಕ್ಕೆ 3 ಲಕ್ಷ ಬಿಡುಗಡೆ ಮಾಡುವ ಭರವಸೆ ನೀಡಿದರು.
ತಾಪಂ ಸದಸ್ಯರಾದ ಚಂದ್ರಶೇಖರ್, ರಾಮಾಂಜಿನಪ್ಪ, ಮಾರಪ್ಪ, ಗುಂಡ್ಲಹಳ್ಳಿ ರಾಮಾಂಜಿನೇಯ ಮುಂತಾವರು ಅನುದಾನ ಬಿಡುಗಡೆಗೆ ಸಂಬಂಧಿಸಿದ ದಾಖಲೆಯ ವಿವರ ಕೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.