ತುಮಕೂರು

ನಿಯಮ ಉಲ್ಲಂಘಿಸಿ ಟ್ರಸ್ಟ್ ರಚನೆ; ಆರೋಪ

Published On :

ಗುಬ್ಬಿ: ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕತಿ ಇಲಾಖೆ ರಚಿಸಿರುವ ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ನಿಯಾಮಾವಳಿಯನ್ನು ಉಲ್ಲಂಘನೆ ಮಾಡಿದೆ ಎಂದು ಚನ್ನಬಸವೇಶ್ವರ ಯುವಕ ಸಂಘದ ಕಾರ್ಯದರ್ಶಿ ಸಿ.ಆರ್.ಶಂಕರ್ಕುಮಾರ್ ಹಾಗೂ ಎಚ್ಕೆಜಿಎನ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಲೀಂ ಪಾಷ ಆರೋಪಿಸಿದ್ದಾರೆ.
ರಾಜ್ಯ ಮಟ್ಟದ ಟ್ರಸ್ಟ್ ರಚಿಸುವಾಗ ಟ್ರಸ್ಟಿಗಳ ನೇಮಕದಲ್ಲಿ ಸ್ಥಳೀಯರನ್ನು ಕಡೆಗಣಿಸಲಾಗಿದೆ. ಶಿಷ್ಟಾಚಾರ ಪಾಲಿಸುವ ಸೌಜನ್ಯ ತೋರದ ಅಧಿಕಾರಿಗಳು ಪದ ನಿಮಿತ್ತ ಸದಸ್ಯರಾಗಿ ಸ್ಥಳೀಯ ಶಾಸಕ ಹಾಗೂ ಪಪಂ ಅಧ್ಯಕ್ಷರನ್ನು ನೇಮಕ ಮಾಡಬೇಕಿದೆ. ಈ ಸಾಮಾನ್ಯ ಸಂಗತಿ ಅರಿಯದೆ ಟ್ರಸ್ಟ್ ರಚಿಸಿರುವುದು ಸರಿಯಲ್ಲ. ರಂಗಮಂದಿರ ಸ್ಥಳ, ಅನುದಾನ ಹಾಗೂ ಇತರ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲಾಗಿದೆ. 2009ರಲ್ಲಿ ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಕಾರ ಶಾಲಾ ಮೈದಾನಗಳನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ, ರಂಗಮಂಟಪಗಳಿಗಾಗಲಿ ನೀಡುವಂತಿಲ್ಲ. ಆಕ್ಷೇಪವಿಲ್ಲದೆ ಡಾ.ಗುಬ್ಬಿ ವೀರಣ್ಣ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಂತಹ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಯಾಮಾವಳಿ ಮೂಲಕ ಟ್ರಸ್ಟ್ ರಚಿಸುವಂತೆ ಆಗ್ರಹಿಸಿದ್ದಾರೆ.
 



ತ್ಯಾಗರಾಜರ ಜಯಂತ್ಯುತ್ಸವ
ತಿಪಟೂರು: ತಾಲೂಕು ಸವಿತಾ ಸಮಾಜ,ಸವಿತಾ ಕಲಾವಿದರ ಸಂಘ, ಮಹಿಳಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಸಂಗೀತ ಸಾರ್ವಭೌಮ ಶ್ರೀ ತ್ಯಾಗರಾಜರ 140ನೇ ಜಯಂತ್ಯುತ್ಸವ ಹಾಗೂ ಸವಿತ ಕಲಾವಿದರ ಸಂಘದ ಮೂರನೇ ವಾರ್ಷಿಕೋತ್ಸವ ಸಮಾರಂಭವನ್ನು ಪಟ್ಟಣದ ಸವಿತಾ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ತಾಲೂಕು ಸವಿತಾ ಸಮಾಜದ ಗೌರವಾಧ್ಯಕ್ಷ ವರದರಾಜು ಮಾತನಾಡಿ, ಸರ್ಕಾರದಿಂದ ಸಿಗಬೇಕಾದ ಸವಲತ್ತು ಪಡೆಯಲು ನಾವೆಲ್ಲ ಸಂಘಟಿತರಾಗಬೇಕಿದೆ ಎಂದರು. ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ.ಜೆ. ವಿಜಯಕುಮಾರ್ ತ್ಯಾಗರಾಜರ ಜೀವನ ಚರಿತ್ರೆ ಕುರಿತು ಮಾತನಾಡಿದರು.  ಸವಿತಾ ಕಲಾವಿದ ಸಂಘದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾಜ ಅಧ್ಯಕ್ಷ ಮುತ್ತುರಾಜ್, ಕಲಾವಿದರ ಸಂಘದ ಅಧ್ಯಕ್ಷ ರಾಮಲಿಗಂ, ತಾಲೂಕು ಪ್ರತಿನಿಧಿ ಗೋವಿಂದರಾಜು, ಮಹಿಳಾ ಸಂಘದ ಮುಖಂಡರಾದ ಜಯಮ್ಮ, ಅನುಸೂಯಮ್ಮ, ಭಾರತಿ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.