ಅಕ್ರಮ ಹಾಪ್ಕಾಮ್ಸ್ ಅಂಗಡಿ ತೆರವು
ಶಿರಾ: ನಗರದ ಸರ್ಕಾರಿ ಪ್ರವಾಸಿ ಮಂದಿರದ ಸರ್ಕಲ್ ಹತ್ತಿರವಿದ್ದ ಕನಕದಾಸರ ಉದ್ಯಾನವನದೊಳಗೆ ರಾತ್ರೋರಾತ್ರಿ ಅಕ್ರಮವಾಗಿ ತಂದಿಟ್ಟ ಹಾಪ್ಕಾಮ್ಸ್ ಅಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ, ಕನಕ ಯುವ ಸಮಿತಿ, ಸಾರ್ವಜನಿಕರು ಹಾಗೂ ಕೆಲವು ನಗರಸಭಾ ಸದಸ್ಯರು ಅಂಗಡಿ ಮುಂದೆಯೇ ಪ್ರತಿಭಟನೆ ನಡೆಸಿದರು.
ರಾತ್ರಿ ಸಮಯದಲ್ಲಿ ಉದ್ಯಾನವನದ ಕಬ್ಬಿಣದ ಕಂಬಿಗಳನ್ನು ಮುರಿದು ಹಾಪ್ಕಾಮ್ಸ್ ಅಂಗಡಿಯನ್ನು ತಂದಿಟ್ಟಿರುವುದನ್ನು ತಿಳಿದ ವಿವಿಧ ಸಂಘಟನೆಗಳು, ಸಾರ್ವಜನಿಕರು ನಗರಸಭೆ ಆಯುಕ್ತರು ಹಾಗೂ ಸಿಬ್ಬಂದಿಯ ಮೇಲೆ ಕಿಡಿಕಾರತೊಡಗಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತ ಈರಾನಾಯ್ಕ ಅವರನ್ನು ಜನರು ತರಾಟೆಗೆ ತೆಗೆದುಕೊಂಡರು. ಕೊನೆಗೆ ಕುಪಿತಗೊಂಡ ಜನರನ್ನು ಸಮಾದಾನ ಪಡಿಸಿದ ಪೊಲೀಸರು ಮುಂದೆ ನಿಂತು. ನಗರಸಭೆ ಕ್ರೈನ್ ಮೂಲಕ ಪೆಟ್ಟಿಗೆ ಅಂಗಡಿಯನ್ನು ತೆರವು ಗೊಳಿಸಿದಾಗ ಪರಿಸ್ಥಿತಿ ಶಾಂತವಾಯಿತು.
ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಶಿವಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಓಬಿಸಿ) ಬಾನು ಪ್ರಕಾಶ್, ಟಿ.ಸುರೇಶ್, ಆರ್.ಉಗ್ರೇಶ್, ರಾಜಣ್ಣ, ಸರಿತಾ ರವಿ, ಮಂಜುನಾಥ್, ಬಿ.ಜಿ.ಕರಿಯಪ್ಪ ಮುಂತಾದವರು ಪ್ರತಿಭಟನೆಯ ಸಮಯದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

