ವಿದ್ಯುತ್ ಅವಘಡ: ರಾಗಿ ಮೆದೆ ಭಸ್ಮ
ಕುಣಿಗಲ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ರೈತರ ಬೆಳೆ ಸುಟ್ಟು ಕರಕಲಾಗಿರುವ ಘಟನೆ ಹುಲಿಯೂರುದುರ್ಗ ಹೋಬಳಿಯ ಹೊಸಹಳ್ಳಿದೊಡ್ಡಿ ಸಮೀಪದ ಎಕೆ ದೊಡ್ಡಿ ಗ್ರಾಮದಲ್ಲಿ ಸಂಭವಿಸಿದೆ.
ಎಕೆದೊಡ್ಡಿ ಗ್ರಾಮದಲ್ಲಿನ ಜಯಮ್ಮ ಎಂಬಾಕೆ ಮೂರು ಎಕರೆ, ಪುಟ್ಟರಾಮಯ್ಯ ಒಂದು ಎಕರೆ ಮತ್ತು ಚಂದ್ರಯ್ಯ ಎಂಬುವರು ಎರಡು ಎಕರೆಯಲ್ಲಿ ಬೆಳೆದಿದ್ದ ರಾಗಿಬೆಳೆಯನ್ನು ಕಟಾವು ಮಾಡಿ ವಿದ್ಯುತ್ ವೈರ್ ಸಾಗಿರುವ ಮಾರ್ಗದ ಸಮೀಪದಲ್ಲೆ ಮೆದೆ ಹಾಕಿದ್ದರು. ಶನಿವಾರ ಬೆಳಗಿನ ಜಾವ ವಿದ್ಯುತ್ ಶಾಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಿಡಿ ಮೆದೆಗಳಿಗೆ ಸಿಡಿದ ಪರಿಣಾಮ ಆರು ಎಕರೆಯಲ್ಲಿ ಬೆಳೆಯಲಾಗಿದ್ದ ರಾಗಿಬೆಳೆಯ ಮೆದೆಗಳು ಸುಟ್ಟು ಕರಕಲಾದವು, ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರು ಹುಲಿಯೂರುದುರ್ಗ ಉಪ ತಹಸೀಲ್ದಾರ್ ಅವರಲ್ಲಿ ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಕಂದಾಯ ಅಧಿಕಾರಿಗಳು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

