ತುಮಕೂರು

ಸಂವಿಧಾನದ ಸಮಾನತೆ ಆಶಯ ವಿಫಲ: ರಮೇಶ್

Published On :

ಕ.ಪ್ರ. ವಾರ್ತೆ    ತುಮಕೂರು    ಜ. 29
ಸಂವಿಧಾನದ ಸಮಾನತೆಯ ಆಶಯ ಈಡೇರಿಸುವಲ್ಲಿ ಭಾರತೀಯ ವ್ಯವಸ್ಥೆ ವಿಫಲವಾಗಿದೆ ಎಂದು ವಕೀಲ ಎಸ್. ರಮೇಶ್ ಅಭಿಪ್ರಾಯಪಟ್ಟರು.
ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸಮಾನ ಮಕ್ಕಳ ಮಂಟಪದಿಂದ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕುರಿತು ಸಂವಾದದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಪಡೆಯಲು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದಿಂದಾಗಿ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿತ್ತಾದರೂ ದೇಶವನ್ನು ಯಾವ ನಿಟ್ಟಿನಲ್ಲಿ ಕೊಂಡೊಯ್ಯಬೇಕೆಂಬ ಹಿನ್ನಲೆಯಲ್ಲಿ 1946 ರಲ್ಲಿ ಸಂವಿಧಾನ ರಚನಾ ಸಮಿತಿಯನ್ನು ರಚಿಸಿದ ಮೇಲೆ ವಿಶ್ವದ ಸಂವಿಧಾನಗಳನ್ನು ಅಧ್ಯಯನ ಮಾಡಿದ ಸಂವಿಧಾನ ಕರಡು ಸಮಿತಿ ಅಧ್ಯಕ್ಷ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಾಮಾಜಿಕ ಸಂದರ್ಭಕ್ಕೆ ಅನುಸಾರವಾಗಿ ಪ್ರತಿನಿಧಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನ ರಚಿಸಿದರು.
ಸುಮಾರು ನಾಲ್ಕು ವರ್ಷಗಳ ಪ್ರಾಂತ್ಯವಾರು ಚರ್ಚೆಗಳಲ್ಲಿ ಮತ್ತು ಸಂವಿಧಾನ ರಚನಾ ಸಮಿತಿಯ ಚರ್ಚೆಯಲ್ಲಿ ಪ್ರಮುಖವಾಗಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸೋದರತೆಯ ಆಧಾರದಲ್ಲಿ ಸಮಾಜವಾದಿ ರಾಷ್ಟ್ರ ನಿರ್ಮಾಣದ ಆಶಯವನ್ನು ಈ ದೇಶದ ಪ್ರಜೆಗಳಾದ ನಾವು ಪ್ರತಿಜ್ಞೆ ಮಾಡುವ ಮೂಲಕ ಜನವರಿ 26, 1950 ರಂದು ಅರ್ಪಿಸಿಕೊಂಡಿದ್ದೇವೆ ಎಂದರು.
ಸಂವಿಧಾನದ ಆಶಯದಂತೆ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಾನತೆಯನ್ನು ಜನರಿಗೆ ಖಾತ್ರಿಗೊಳಿಸಲು ಭಾರತದಲ್ಲಿರುವ ಸಾಮಾಜಿಕ ವ್ಯವಸ್ಥೆ ವಿಫಲವಾಗಿರುವ ಸಂಕೇತ ಮನುವಾದಿ ಮನಸ್ಥಿತಿಗಳಾಗಿವೆ. ಆದ್ದರಿಂದ ಪ್ರತಿ ದೇಶದಲ್ಲಿರುವ ಯುವಜನರು ಮತ್ತು ಮಕ್ಕಳು ಸಂವಿಧಾನವನ್ನು ಅರ್ಥೈಸಿಕೊಂಡು ಸಮಾಜವಾದಿ ರಾಷ್ಟ್ರಕಟ್ಟಲು ಕಂಕಣ ಬದ್ದರಾಗೋಣ ಇಲ್ಲವಾದಲ್ಲಿ ಸಂವಿಧಾನವಾದರೆ ದೇಶದಲ್ಲಿರುವ ಎಲ್ಲಾ ಜನರೂ ನಾಶವಾಗುತ್ತಾರೆ ಎಂದರು.
ಸಂವಾದದಲ್ಲಿ ವಿಷಯ ಮಂಡಿಸಿದ ಜಿಲ್ಲಾ ಕೊಳಗೇರಿ ಸಮಿತಿಯ ಅಧ್ಯಕ್ಷ ಎ. ನರಸಿಂಹಮೂರ್ತಿ ಬುದ್ಧನ ಕಾಲದಲ್ಲಿದ್ದ ಗಣ ಸಂಘಗಳ ಪ್ರಜಾಸತ್ತಾತ್ಮಕ ಗುಂಪುಗಳ ಪರಿಕಲ್ಪನೆಯೆ ಈಗೀನ ಭಾರತೀಯ ಒಕ್ಕೂಟ ವ್ಯವಸ್ಥೆಯ ಗಣರಾಜೋತ್ಸವಾಗಿ ಮಾರ್ಪಡುವಲ್ಲಿ ಅಂಬೇಡ್ಕರ್ ಅವರ ದೂರದೃಷ್ಟಿ ಗಣಸಂಘಗಳಲ್ಲಿನ ಸಮಾನತೆ ಮತ್ತು ಆಂತರಿಕ ಪ್ರಜಾಸತ್ತಾತ್ಮಕತೆಯ ಸತ್ವವನ್ನು ಸಂವಿಧಾನದಲ್ಲಿ ಅಳವಡಿಸಲು ಸಫಲರಾಗಿದ್ದಾರೆ ಎಂದರು.
ಸಂವಾದದಲ್ಲಿ ಸಮಾನ ಮಕ್ಕಳ ಮಂಟಪದ ಕಾರ್ಯಕರ್ತರಾದ ಶೆಟ್ಟಾಳಯ್ಯ, ರಾಮಯ್ಯ, ರಾಮಕ್ಕ, ರಘು, ಅರುಣ್, ಲತಾ, ಕೋಮಲ, ಗಾಯತ್ರಿ ಹಾಗು ಕೊಳಗೇರಿ ಸಮಿತಿಯ ಸೈಯದ್ ಅಲ್ತಾಫ್ ಮತ್ತು ಸಮಾನ ಮಕ್ಕಳ ಮಂಟಪದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.