ತುಮಕೂರು

ಮರಳೂರು ಕೆರೆಯಲ್ಲಿ ಕಂದಕಗಳ ನಿರ್ಮಾಣ

Published On :

ತುಮಕೂರು: ರೇಲ್ವೆ ದ್ವಿಪಥ ಮಾಡಲು ಮರಳೂರು ಕೆರೆಯ ಅಂಗಳದಲ್ಲಿ 20 ರಿಂದ 30 ಮೀಟರ್ ಆಳದವರೆಗೆ ಅವೈಜ್ಞಾನಿಕವಾಗಿ ಕಂದಕಗಳನ್ನು ಮಾಡಿ ಅಲ್ಲಿಂದ ಮಣ್ಣನ್ನು ತೆಗೆದು ಸಾಗಿಸುತ್ತಿರುವುದನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಖಂಡಿಸಿದೆ.
ಆದರೆ ಕೆರೆಯ ಅಂಗಳದ ಮೇಲ್ಭಾಗದ ಹೂಳನ್ನು ತೆಗೆಯದೆ ಎಲ್ಲೆಂದರಲ್ಲಿ ಕಂದಕಗಳನ್ನು ನಿರ್ಮಾಣ ಮಾಡಿ ಮಣ್ಣು ಸಾಗಿಸುತ್ತಿರುವುದರಿಂದ ಆ ಕಂದಕಗಳಲ್ಲಿ ನೀರು ಸಂಗ್ರಹಣೆಯಾದರೆ ಕೆರೆ ಹಿಂದಿನ ಜಮೀನುಗಳಲ್ಲಿ ನೀರು ಜಿನುಗಲು ಪ್ರಾರಂಭವಾಗಿ ಅದೆಲ್ಲವು ಜೌಗು ನೆಲವಾಗುತ್ತದೆ.
ಫಲವತ್ತಾದ ರೈತರ ನೀರಾವರಿ ಜಮೀನು ಹಾಳಾಗುತ್ತದೆ. ಆದ್ದರಿಂದ ಕೆರೆಯಂಗಳದಿಂದ ಮಣ್ಣು ತೆಗೆಯುವುದಿದ್ದರೆ ಕಂದಕಗಳನ್ನು ಸೃಷ್ಟಿಮಾಡದೆ ಸಮಾಂತರವಾಗಿ ಮಾತ್ರ ಮಣ್ಣು ತೆಗೆದಲ್ಲಿ ಕೆರೆಯ ನೀರು ಸಂಗ್ರಹಣೆ ಸಾಮರ್ಥ್ಯ ಹೆಚ್ಚುತ್ತದೆ ಹಾಗೂ ಜೌಗು ನೆಲವಾಗುವುದು ತಪ್ಪುತ್ತದೆ. ಈ ವಿಷಯದ ಬಗ್ಗೆ ಜಿಲ್ಲಾಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆಯವರು ವೈಜ್ಞಾನಿಕ ರೀತಿಯಲ್ಲಿ ಮಣ್ಣು ತೆಗೆಯಲು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಮನವಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.