ತುಮಕೂರು

ಜ್ಞಾನದ ಚಿಲುಮೆ ಉಕ್ಕಿ ಹರಿಸಿ

Published On :

ಕನ್ನಡಪ್ರಭ ವಾರ್ತೆ  ತುಮಕೂರು   ಜು.1
ನಿರಂತರ ಕಲಿಕೆಯ ಜತೆಗೆ ವಿದ್ಯಾರ್ಥಿಗಳಿಗೆ ಜ್ಞಾನದ ಚಿಲುಮೆಯನ್ನು ಉಕ್ಕಿ ಹರಿಸಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಡಾ.ಎನ್.ಬಿ. ನಡುವಿನಮನಿ ಪ್ರಾಧ್ಯಾಪಕರಿಗೆ ಕರೆ ನೀಡಿದರು.
ತುಮಕೂರಿನ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿತ್ವ, ಪಾಂಡಿತ್ಯ ಹೆಚ್ಚು ಅಭಿವೃದ್ಧಿಯಾಗಬೇಕು. ಮಕ್ಕಳಿಗೆ ಪ್ರೀತಿಯಿಂದ ಪಾಠ ಪ್ರವಚನವನ್ನು ಭೋಧಿಸಿದಾಗ ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಯಾಗುತ್ತಾರೆ ಎಂದರು.
ಅತ್ಮವಿಶ್ವಾಸ ತುಂಬಿ: ಪ್ರತಿದಿನ ಹೆಚ್ಚು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿ, ಪಾಠ ಕೇಳುವಂತೆ ಮಾಡಬೇಕು. ಐಎಎಸ್, ಐಎಫ್‌ಎಸ್, ಕೆಎಎಸ್ ಮತ್ತಿತರ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರಿಸುವಂತೆ ಅತ್ಮವಿಶ್ವಾಸ ತುಂಬಬೇಕು ಎಂದು ನಡುವಿನಮನಿ ಪ್ರಾಧ್ಯಾಪಕರಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಬಿ.ಎಸ್. ಮಲ್ಲೇಶಪ್ಪ ಅವರು ಮಾತನಾಡಿ, ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾದ ಭೋಧನೆ ಮಾಡುವ ಮೂಲಕ ಕಾಲೇಜು, ಸಮಾಜ, ದೇಶದ ಅಭಿವೃದ್ಧಿಗೆ ಸಹಕಾರಿಯಾಗಿ ಎಂದರು.
ನಿರಂತರ ಕಲಿಕೆ: ನಿವೃತ್ತ ಪ್ರಾಂಶುಪಾಲ ಡಾ.ನಾಗಭೂಷಣ್ ಮಾತನಾಡಿ ಭಾಷೆ, ಸಂಶೋಧನೆ, ನಾಯಕತ್ವ ಗುಣ ಸೇರಿದಂತೆ ಇತರೆ ಕ್ಷೇತ್ರಗಳಲ್ಲೂ ಪ್ರಾಧ್ಯಾಪಕರು ಜೀವನ ಪೂರ್ತಿ ನಿರಂತರವಾಗಿ ಕಲಿಯುವುದರಿಂದ ವಿದ್ಯಾರ್ಥಿಗಳಿಗೆ ಲಾಭವಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಬಿ. ಸದಾಶಿವಯ್ಯ, ಪ್ರೊ.ಐ.ಎಂ. ಶಿವಕುಮಾರ್ ಮತ್ತು ಪ್ರೊ.ಎನ್.ಇ. ಪ್ರತಾಪ್ ಇಂಗ್ಲೀಷ್ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ದಾಕ್ಷಿಯಣಿ ಪ್ರಕಾಶ್, ಪ್ರೊ.ಎಂ. ಅನಿಲ್ ಕುಮಾರ್, ಪ್ರೊ.ಎಸ್.ವಿ. ರುದ್ರಮುನಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.  ಪುನಶ್ಚೇತನ ಕಾರ್ಯಾಗಾರದ ಸಂಚಾಲಕ ಪ್ರೊ.ಟಿ.ಎಸ್. ಶಶಿಧರ್ ಸ್ವಾಗತಿಸಿದರು. ಪ್ರೊ.ಕೆ. ಸಿದ್ದಪ್ಪ ಪ್ರಾರ್ಥಿಸಿದರು. ಪ್ರೊ.ಎಚ್.ಜಿ. ಸರ್ವಮಂಗಳ ನಿರೂಪಿಸಿದರು. ಪ್ರೊ.ಸಿ.ಎಸ್. ಸೋಮಶೇಖರಯ್ಯ ವಂದಿಸಿದರು. ಕಾರ್ಯಾಗಾರದಲ್ಲಿ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.