'ಮಗಳ ದಿನ' ಆಚರಣೆ
ತುಮಕೂರು: ನಗರದ ಆರ್.ವಿ. ಅಧ್ಯಯನ ಕೇಂದ್ರದಲ್ಲಿ ಭಾರತೀಯ ಖಗೋಳ ವಿಜ್ಞಾನಿ ದಿ. ಕಲ್ಪನಾ ಚಾವ್ಲಾರವರ ಹುಟ್ಟಿದ ದಿನದ ಪ್ರಯುಕ್ತ “ÈÚßVÚ×Ú ¦«Ú’ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಜಿ. ಹನುಮಂತಯ್ಯ, ವಿದ್ಯಾರ್ಥಿನಿಯರು ವಿದ್ಯೆ ಕಲಿಯಲು ಹಿಂಜರಿಯಬಾರದು. ಹಾಗೆಯೇ ಹೆಣ್ಣು ಮಕ್ಕಳು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಕಲ್ಪನಾ ಚಾವ್ಲಾ ನಿಮಗೆ ಮಾದರಿ ಆಗಬೇಕು ಎಂದರು. ಈ ಸಂದರ್ಭದಲ್ಲಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಡಾ. ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆ ಪುಸ್ತಕ ನೀಡಿ ಅಭಿನಂದಿಸಲಾಯಿತು. ಸಿದ್ದಗಂಗಾ ಕಾಲೇಜಿನ ಉಪನ್ಯಾಸಕಿ ರೇಣುಕ ಮಾತನಾಡಿ, ವಿದ್ಯಾರ್ಥಿನಿಯರು ಎಷ್ಟೆ ಬಡ ಕುಟುಂಬದಿಂದ ಬಂದರೂ ದೃತಿಗೆಡದೆ ಓದಬೇಕು ಎಂದರು. ಉಪನ್ಯಾಸಕ ಗುರುಪ್ರಸಾದ್, ಆರ್.ವಿ. ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಬೋರಯ್ಯ, ವಕೀಲ ಕೃಷ್ಣಮೂರ್ತಿ ಇದ್ದರು.
ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ಶಿರಾ: ತಾಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಜು.7ರೊಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ದೊರೆಯುವ ನಿಗದಿತ ಅರ್ಜಿಯಲ್ಲಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ನಿವೃತ್ತ ಪ್ರಾಂಶುಪಾಲರಿಗೆ ಬೀಳ್ಕೊಡುಗೆ
ಪಾವಗಡ: ಪ್ರಾಮಾಣಿಕ ಸೇವೆಯಿಂದ ವಿದ್ಯಾರ್ಥಿಗಳ ಪ್ರಗತಿಗೆ ಸಹಕರಿಸಿದ ಉಪ ಪ್ರಾಂಶುಪಾಲ ಎಎನ್ವಿ ಅವರ ಸೇವೆ ಶಿಕ್ಷಕರಿಗೆ ಮಾದರಿ ಎಂದು ಪ್ರೌಡಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಎಸ್. ವೆಂಕಟಾ ಚಲಪತಿ ಪ್ರಶಂಸಿಸಿದರು. ತಾಲೂಕಿನ ವೈ.ಎನ್. ಹೊಸಕೋಟೆಯ ರಾಷ್ಟ್ರೀಯ ವಿದ್ಯಾಪೀಠ ಸಂಯುಕ್ತ ಪ್ರೌಡಶಾಲೆಯ ಉಪ ಪ್ರಾಂಶುಪಾಲ ಎ.ಎನ್. ವೆಂಕಟರತ್ನಯ್ಯ ಅವರು ನಿವೃತ್ತರಾದ ಹಿನ್ನಲೆಯಲ್ಲಿ ಪ್ರೌಢಶಾಲೆ ಅವರಣದಲ್ಲಿ ಏರ್ಪಡಿಸಿದ್ದ ಬೀಳ್ಕೂಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿವೃತ್ತ ಉಪ ಪ್ರಾಂಶುಪಾಲ ಎನ್. ವೆಂಕಟರತ್ನಯ್ಯ ಮಾತನಾಡಿ, ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗುವುದು ಸಾರ್ಥಕವೆನ್ನಿಸಿದ್ದು, 31ವರ್ಷಗಳ ಕಾಲ ವಿಜ್ಞಾನ ಸಹ ಶಿಕ್ಷಕರಾಗಿ, 3ವರ್ಷಗಳ ಕಾಲ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ತ್ರಪ್ತಿ ಇದೆ ಎಂದರು. ಸಂಸ್ಥೆಯ ಅಧ್ಯಕ್ಷ ಟಿ.ವಿ. ಜಗನ್ನಾಥ್, ಕಾರ್ಯದರ್ಶಿ ಇ.ವಿ. ಶ್ರೀಧರ್, ಮುಖ್ಯ ಶಿಕ್ಷಕ ಕಾರನಾಗಪ್ಪ, ಸಾಧಿಕ್, ರಾಮಚಂದ್ರ ಇದ್ದರು.
ಸಿರಿಮಳಿಗೆ ಉದ್ಘಾಟನೆ
ಕುಣಿಗಲ್: ಆರ್ಥಿಕವಾಗಿ ಹಿಂದುಳಿದವರ ಆರ್ಥಿಕ ಸ್ವಾವಲಂಬನೆಗೆ ಪರಿಣಾಮಕಾರಿ ಕಾರ್ಯಕ್ರಮ ರೂಪಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ ಪ್ರಶಂಸನೀಯ ಎಂದು ತಾಪಂ ಪ್ರಭಾರ ಅಧ್ಯಕ್ಷ ಜಗದೀಶ್ ತಿಳಿಸಿದರು. ಪಟ್ಟಣದ ಬಿಎಂ ರಸ್ತೆಯ ನ್ಯಾಯಾಲಯ ಮುಂಭಾಗದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯಸಂಘಗಳ ಸದಸ್ಯರು ಉತ್ಪಾದಿಸಿರುವ ವಿವಿಧ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿ, ಅಧ್ಯಕ್ಷತೆವಹಿಸಿ ಮಾತನಾಡಿದ ಪುರಸಭಾಧ್ಯಕ್ಷ ಕೆ.ಎಲ್. ಹರೀಶ, ಸ್ವದೇಶಿ ತಂತ್ರಜ್ಞಾನದಿಂದ ಸ್ವಸಹಾಯ ಸಂಘಗಳು ಉತ್ಪಾದಿಸುವ ಉತ್ಪನ್ನಗಳನ್ನೇ ಸ್ಥಳೀಯರು ಹೆಚ್ಚು ಕೊಳ್ಳುವ ಮೂಲಕ ಸ್ವಸಹಾಯ ಸಂಘಗಳ ಆರ್ಥಿಕ ಸ್ವಾವಲಂಬನೆ ವೃದ್ಧಿಸಬಹುದಾಗಿದೆ ಎಂದರು. ಯೋಜನೆ ಜಿಲ್ಲಾ ನಿರ್ದೇಶಕ ಗಂಗಾಧರರೈ ಮಾತನಾಡಿದರು. ತಾಲೂಕು ನಿರ್ದೇಶಕಿ ಶಶಿರೇಖಾ, ಕುಣಿಗಲ್ ವಲಯ ಪ್ರಮುಖ ಪಾರ್ವತಿ, ಕಸಾಪ ಅಧ್ಯಕ್ಷ ದಿನೇಶಕುಮಾರ, ಲೋಕೇಶ್, ಜನಾರ್ಧನ್, ನಾಗರಾಜ ಇದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

