ತುಮಕೂರು

ಕೃಷಿ ಪತ್ತಿನ ಸಂಘಕ್ಕೆ 10 ಲಕ್ಷ ಲಾಭ

Published On :

ತುರುವೇಕೆರೆ: ತಾಲೂಕಿನ ಅರಮಲ್ಲೇನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ವರ್ಷದಲ್ಲಿ 10 ಲಕ್ಷ ಲಾಭಗಳಿಸಿದೆ ಎಂದು ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿ.ವಿ.ನರಸಿಂಹಮೂರ್ತಿ ಹೇಳಿದರು.
ಅರಮಲ್ಲೇನಹಳ್ಳಿ ಗ್ರಾಮದಲ್ಲಿ 8 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಟ್ಟಡ, ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾಮಾನ್ಯವಾಗಿ ಸಹಕಾರ ಸಂಘಗಳ ಮೂಲಕ ಸಾಲ ಪಡೆದಿರುವ ಮಹಿಳಾ ಸಂಘಗಳ ಕಾರ್ಯಕರ್ತರು ತಾವು ಪಡೆದಿರುವ ಸಾಲವನ್ನು ಶೇ.100ರಷ್ಟು ಮರುಪಾವತಿ ಮಾಡಿದ್ದಾರೆ. ಅವರು ಪಡೆದು ಸಾಲವನ್ನೂ ಸಹ ಸದುಪಯೋಗ ಪಡಿಸಿಕೊಂಡು ತಮ್ಮ ಹಾಗೂ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರ ಬ್ಯಾಂಕ್ನಲ್ಲಿ ಈಗ ಕೃಷಿಕರಲ್ಲದವರಿಗೂ ಸಹ ವೈಯಕ್ತಿಕ ಸಾಲವನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಕೇಂದ್ರ ಬ್ಯಾಂಕ್ ನ ನಿರ್ದೇಶಕ ಬಿ.ಎಸ್.ದೇವರಾಜು ಹೇಳಿದರು.
ಸಂಘದ ಅಧ್ಯಕ್ಷ ಕೃಷ್ಣೇಗೌಡ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಕಾಶ್, ಬಸವಯ್ಯ, ಜಯರಾಂ, ಪಾರ್ಥ, ಪ್ರಭುಸ್ವಾಮಿ, ಪರಮೇಶ್ವರ್, ಮಲ್ಲೇಶಯ್ಯ, ಶಿವಾನಂದ್, ಮಂಜುನಾಥ್, ಡಿ.ಪಿ.ರಾಜು, ಕುಬೇರ ನಾಯಕ್, ಧರ್ಮರಾಜು, ಪರಪ್ಪ, ಬೋರೇಗೌಡ, ಚನ್ನಮಲ್ಲಿಕಾರ್ಜುನಯ್ಯ. ರಾಮೇಗೌಡ, ಕಪನೀಗೌಡ, ಲಕ್ಷ್ಮಣಗೌಡ, ಎಸ್.ವಿ.ಪುಟ್ಟೇಗೌಡ, ತಿಮ್ಮೇಗೌಡ, ಮಂಜುಳಾ, ಎನ್.ಗೋವಿಂದಯ್ಯ ಇದ್ದರು. ಈ ಬ್ಯಾಂಕ್ ವ್ಯಾಪ್ತಿಗೆ ಬರುವ  9 ಸ್ತ್ರೀ ಶಕ್ತಿ ಸಂಘಕ್ಕೆ 3 ಲಕ್ಷಗಳಂತೆ 27 ಲಕ್ಷ ಸಾಲ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.