ತುಮಕೂರು

ಗಿಡಕ್ಕೆ ಬೆಂಕಿ ಇಟ್ಟ ಸಿಬ್ಬಂದಿ

Published On :

ತಿಪಟೂರು: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ರಸ್ತೆಯ ಬದಿಯಲ್ಲಿದ್ದ ಮರಗಳಿಗೆ ಕೊಡಲಿ ತೋರಿಸಿದ ಅಧಿಕಾರಿಗಳು ಈವರೆಗೂ ರಸ್ತೆ ಬದಿಯಲ್ಲಿ ಗಿಡ ಬೆಳೆಸುವ ಕಾರ್ಯಕ್ರಮದ ರೂಪಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪಟ್ಟಣದ ರಸ್ತೆಯ ಬದಿಯೊಂದರಲ್ಲಿ ಕಳೆದ ವರ್ಷದ ಹಿಂದೆ ಕುಪ್ಪೂರು ಎಂಬ ಯುವಕ ಹೊಂಗೆ ಗಿಡವನ್ನು ನೆಟ್ಟು ಪೋಷಿಸುತ್ತಿದ್ದ. ಆದರೆ ನಗರಸಭಾ ಸಿಬ್ಬಂದಿ ಪಟ್ಟಣ ಸ್ವಚ್ಛತೆ ಮಾಡಿ, ಕಸಕ್ಕೆ ಬೆಂಕಿ ಇಡುವ ವೇಳೆ ಗಿಡವನ್ನು ಸೇರಿಸಿ ಬೆಂಕಿ ಹಚ್ಚಿದ್ದಾರೆ. ಗಿಡದ ಜೊತೆ ಕುಪ್ಪೂರನ ಮನಸ್ಸನ್ನು ಒಣಗುವಂತೆ ಮಾಡಿದ್ದಾರೆ. ಮರ ಬೆಳೆಸುವ ಜವಾಬ್ದಾರಿ ಮರೆತ ನಗರಾಡಳಿತ ಕನಿಷ್ಠ ಬೆಳೆಯುತ್ತಿರುವ ಗಿಡವನ್ನು ಸಹ ರಕ್ಷಣೆ ಮಾಡದೇ ಬೆಂಕಿ ಹಚ್ಚಿರುವುದು ಪರಿಸರ ಪ್ರೇಮಿಗಳಿಗೆ ಆಕ್ರೋಶವನ್ನು ಉಂಟುಮಾಡಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ಬದಿ ಗಿಡ ನಡೆಯುವ ಕೆಲಸಕ್ಕೆ ಕೈ ಹಾಕಿ ಪರಿಸರ ಸಂರಕ್ಷಣೆ ಮಾಡಬೇಕೆಂಬುದು ಇವರ ಆಗ್ರಹವಾಗಿದೆ.
ಚಿರತೆಗೆ ಹಸು-ಕರು ಬಲಿ
ಹೆಬ್ಬೂರು: ತುಮಕೂರು ಗ್ರಾಮಾಂತರದಲ್ಲಿ ಚಿರತೆಗೆ ಹಸು-ಕರು ಬಲಿಯಾಗಿರುವ ಘಟನೆ ಭಾನುವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ನಡೆದಿದೆ. ಹೆಬ್ಬೂರು ಹೋಬಳಿ ನಾಗವಲ್ಲಿ ಸಮೀಪ ಬಾಣಾವರ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಮೇಯುತ್ತಿದ್ದ ಹಸು-ಕರುವನ್ನು ಚಿರತೆ ತಿಂದು ಹಾಕಿದೆ. ಹಸು-ಕರು ಯಾರಿಗೆ ಸೇರಿದ್ದವೆಂದು ತಿಳಿದಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಬೀಡು ಬಿಟ್ಟಿದ್ದು, ಚಿರತೆ ಹಿಡಿಯಲು ಬೋನು ಇಟ್ಟಿದ್ದಾರೆ.
ಮದ್ಯದಂಗಡಿ ತೆರವಿಗೆ ಆಗ್ರಹ
ಗುಬ್ಬಿ: ತಾಲೂಕಿನ ವರ್ತೆಕಟ್ಟೆ ಗ್ರಾಮದಲ್ಲಿ ಅಕ್ರಮ ಮದ್ಯದಂಗಡಿ ತೆರೆಯಲಾಗಿದ್ದು, ಇದರಿಂದ ಗ್ರಾಮದ ಗಂಡಸರು ಅನ್ನಭಾಗ್ಯ ಯೋಜನೆಯ ಅಕ್ಕಿ, ಸೀಮೆಎಣ್ಣೆ ಮಾರಿ ಕುಡಿದು ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದಾರೆ. ಕೂಡಲೇ ಮದ್ಯ ನಿಷೇಧಿಸಿ, ಅಂಗಡಿಯನ್ನು ಮುಚ್ಚಿಸುವಂತೆ ಗ್ರಾಮದ ಮಾರಮ್ಮ ದೇವಿ, ಕೆಂಪಮ್ಮ, ಶಕ್ತಿ, ಶಾರದ ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ಮತ್ತು ಮಕ್ಕಳು ಪ್ರತಿಭಟನೆ ನಡೆಸಿದರು. ಈ ಗ್ರಾಮದಲ್ಲಿ ಎರಡು ಪೆಟ್ಟಿಗೆ ಅಂಗಡಿಗಳಲ್ಲಿ ಆಕ್ರಮವಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದು, ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ ಈ ಕೂಡಲೇ ಮದ್ಯದಂಗಡಿ ಮುಚ್ಚಿಸಬೇಕು ಎಂದರು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ಎಸ್ಐ ಮಲ್ಲಯ್ಯ, ಪ್ರತಿಭಟನಾನಿರತರನ್ನು ಮನವೂಲಿಸಿ ಮದ್ಯ ಮಾರಾಟದಂಗಡಿಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.  ಪ್ರತಿಭಟನೆಯಲ್ಲಿ ಸುರೇಶ್, ಭಾಗ್ಯಮ್ಮ, ತುಳಸಮ್ಮ, ಕೆಂಪಕ್ಕ, ಶಿವಮ್ಮ,ನಾಗಮಮ, ನಾಗರತ್ನಮ್ಮ, ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.