ತುಮಕೂರು

ಪ್ರತಿ ವ್ಯಕ್ತಿಯೂ ಶುದ್ಧ ರಕ್ತ ಹೊಂದಿರಬೇಕು

Published On :

ತುಮಕೂರು: ಪ್ರತಿ ವ್ಯಕ್ತಿಯೂ ಶುದ್ಧ ರಕ್ತ ಕಣಗಳನ್ನು ಹೊಂದಿರಬೇಕು ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಡಾ. ಸಂಜಯನಾಯಕ್ ನುಡಿದರು.
ಕ್ರೇಜಿಸ್ಟಾರ್ ವಿಆರ್ಸಿ ಗ್ರೂಪ್, ಮಣಿಪಾಲ್ ಡಯಾಗ್ನಾಸ್ಟಿಕ್ ಸೆಂಟರ್ ಆಶ್ರಯದಲ್ಲಿ ಮೈದಾಳದ ಶಿವಶೈಕ್ಷಣಿಕ ಸೇವಾಶ್ರಮದ ಮಕ್ಕಳಿಗೆ ಹಮ್ಮಿಕೊಂಡಿದ್ದ ರಕ್ತ ಗುಂಪಿನ ತಪಾಸಣಾ ಶಿಬಿರ ಮತ್ತು ಶಿರಡಿ ಸಾಯಿಬಾಬಾ ವೃದ್ಧಾಶ್ರಮದ ವೃದ್ಧರಿಗೆ ರಕ್ತದೊತ್ತಡ, ಮಧುಮೇಹ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವಘಡಗಳು ಉಂಟಾದಾಗ ನಮ್ಮ ರಕ್ತವನ್ನು ಮತ್ತೊಬ್ಬರಿಗೆ ದಾನ ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಯಾವ ವ್ಯಕ್ತಿಗೆ ಎಂತಹ ರಕ್ತ ಬೇಕು ಎಂಬುದರ ಮಾಹಿತಿ ಇರಬೇಕು. ಆ ಕಾರಣಕ್ಕಾಗಿ ರಕ್ತದ ಗುಂಪು ತಿಳಿದುಕೂಳ್ಳುವ ಅವಶ್ಯಕತೆ ಇರುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ. ರಾಜಕುಮಾರ್, ಕ್ರೇಜಿಸ್ಟಾರ್ ವಿಆರ್ಸಿ ಗ್ರೂಪ್ ರಾಜ್ಯಾಧ್ಯಕ್ಷ ವಿಜಯಣ್ಣ, ಜಿಲ್ಲಾಧ್ಯಕ್ಷ ಕೆ. ರಮೇಶ್, ವಿ. ರಾಮಮೂರ್ತಿ, ಮಂಜುನಾಥ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಚೇತನ್ ರಾಮಕೃಷ್ಣ, ಎಲ್ಐಸಿ ನಾಗರಾಜು, ಸಂತೋಷ್ ಗೌಡ, ಸಂಘಟನಾ ಕಾರ್ಯದರ್ಶಿ ಜಿ.ಎಚ್. ಮಾರುತಿ, ಖಜಾಂಚಿ ಮೋಹನ್, ಕಾರ್ಯದರ್ಶಿ ಬಾಲಾಜಿ, ವೆಂಕಟೇಶ್, ಆಶ್ರಮದ ತಿಪ್ಪೇಸ್ವಾಮಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.