ಭಕ್ತವೃಂದದ ನಡುವೆ ವೈಭವದ ವೆಂಕಟರಮಣ ಬ್ರಹ್ಮರಥೋತ್ಸವ
ಕೊರಟಗೆರೆ: ಏಕಾದಶಿ ಅಂಗವಾಗಿ ಪಟ್ಟಣದ ಕೋಟೆ ಬೀದಿಯಲ್ಲಿರುವ ಪುರಾಣ ಪ್ರಸಿದ್ಧ ಇತಿಹಾಸವಿರುವ ಕೋಟೆ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವವು ಜು. 9 ರಂದು ಅದ್ಧೂರಿಯಾಗಿ ನೆರವೇರಿತು. ಪಟ್ಟಣದ ಎಲ್ಲಾ ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆದು ಪುನೀತರಾದರು.
ಜಯನಾಮ ಸಂವತ್ಸರದ ಆಷಾಢ ಶುದ್ಧ ದ್ವಾದಶಿ ಶುಭ ಲಗ್ನದಲ್ಲಿ ಸರ್ಕಾರಿ ಸೇವೆಯಲ್ಲಿ ಮುಜರಾಯಿ ಇಲಾಖೆಯ ಶಿರಸ್ತೇದಾರ್ ಮುರಳಿ ನೇತೃತ್ವದಲ್ಲಿ ಬ್ರಹ್ಮರಥೋತ್ಸವ ನಡೆಯಿತು.
ಧೂಳೋತ್ಸವ: ಬ್ರಾಹ್ಮಣ ಸಂಘದವರಿಗೆ, ರಾಜು ಕ್ಷತ್ರಿ ಸಂಘದವರಿಗೆ ಮತ್ತು ಆರ್ಯವೈಶ್ಯ ಮಂಡಲಿಯವರಿಗೆ ಅನ್ನ ಸಂತರ್ಪಣೆ, ಸಂಜೆ ಅರ್ಚಕ ವೇದವ್ಯಾಸಾಚಾರ್ ನೇತೃತ್ವದಲ್ಲಿ ಡೋಲೋತ್ಸವ ಮತ್ತು ರಾತ್ರಿ ಧೂಳೋತ್ಸವ ನಡೆಯಿತು. ವಿದ್ಯುತ್ ದೀಪಾಲಂಕಾರ ನಡುವೆ ರಥೋತ್ಸವ ನಡೆಯಿತು. ಜು. 9ರಿಂದ 13ರವರೆಗೆ ಆಷಾಢ ಮಾಸದ ಅಂಗವಾಗಿ ಪ್ರತಿನಿತ್ಯ ಮೃಗಯಾತ್ರೋತ್ಸವ, ವಸಂತೋತ್ಸವ, ಶೇಷವಾಹನೋತ್ಸವ, ಅಭಿಷೇಕ ಶಯನೋತ್ಸವ ಸೇರಿದಂತೆ ಇನ್ನಿತರ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ರಥೋತ್ಸವ ಸಂದರ್ಭದಲ್ಲಿ ಗ್ರೇಡ್ ತಹಶೀಲ್ದಾರ್ ವಾಸುದೇವ ರಾಜು, ಚನ್ನವೀರಯ್ಯ, ಮಯೂರ ಗೋವಿಂದ ರಾಜು ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

