ತುಮಕೂರು

ತುರುವೇಕೆರೆ ತಾಪಂನಲ್ಲಿ ಮಹಿಳಾ ದರ್ಬಾರ್

Published On :

ತುರುವೇಕೆರೆ: ಕಳೆದೊಂದು ತಿಂಗಳಿನಿಂದ ಗೊಂದಲದ ಗೂಡಾಗಿದ್ದ ತಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಯಾವುದೇ ಗೊಂದಲವಿಲ್ಲದೇ ಮುಗಿದಿದೆ. ನಿರೀಕ್ಷೆಯಂತೆ ತಾಪಂ ಅಧ್ಯಕ್ಷೆಯಾಗಿ ದಂಡಿನಶಿವರ ಕ್ಷೇತ್ರದ ಸದಸ್ಯೆ ಕಾವ್ಯಾ ರಾಜಕುಮಾರ್, ಉಪಾಧ್ಯಕ್ಷೆಯಾಗಿ ಸೊರವನಹಳ್ಳಿಯ ಸೌಭಾಗ್ಯ ನಿಂಗರಾಜು ಅವಿರೋಧವಾಗಿ ಆಯ್ಕೆಯಾದರು.
ಶಾಸಕರ ಸೂಚನೆಯಂತೆ ತಾಪಂ ಅಧ್ಯಕ್ಷ ಸ್ಥಾನಕ್ಕೆ ಕಾವ್ಯಾ ರಾಜಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೌಭಾಗ್ಯ ನಿಂಗರಾಜು ಮಾತ್ರವೇ ನಾಮಪತ್ರ ಸಲ್ಲಿಸಿದ್ದರು. ಆದರೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಭಿನ್ನಮತೀಯರಾಗಿದ್ದ ಕುಮಾರಿ ಕಾಂತರಾಜು ಅಂತಿಮ ಗಳಿಗೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಯಾವುದೇ ತಕರಾರಿಲ್ಲದಾಯಿತು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸುವುದರೊಂದಿಗೆ ಪುನಃ ಗೊಂದಲ ನಿರ್ಮಾಣವಾಯಿತು. ಅಂತಿಮವಾಗಿ ಶಾಸಕ ಎಂ.ಟಿ.ಕೃಷ್ಣಪ್ಪನವರೇ ಕುಮಾರಿ ಕಾಂತರಾಜು ಅವರೊಂದಿಗೆ ಮಾತನಾಡಿ ಮುಂಬರುವ ದಿನಗಳಲ್ಲಿ ನಿಮಗೂ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡುವುದರೊಂದಿಗೆ ಮುಸಿಕಿನೊಳಗಿದ್ದ ಭಿನ್ನಮತವನ್ನು ನಿವಾರಿಸಿದರು. ಹಾಗಾಗಿ ಕುಮಾರಿ ಕಾಂತರಾಜು ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದುಕೊಳ್ಳುವ ಮೂಲಕ ಉಪಾಧ್ಯಕ್ಷ ಸ್ಥಾನಕ್ಕೆ ಇದ್ದ ತೊಡಕು ನಿವಾರಣೆಯಾಯಿತು. ಅಂತಿಮವಾಗಿ ಅಧ್ಯಕ್ಷ ಸ್ಥಾನ ಕಾವ್ಯಾ ರಾಜಕುಮಾರ್ ಅವರಿಗೂ, ಉಪಾಧ್ಯಕ್ಷ ಸ್ಥಾನ ನಿರಾತಂಕವಾಗಿ ಸೌಭಾಗ್ಯ ನಿಂಗರಾಜ್ ಅವರ ಪಾಲಾಯಿತು.
ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಸಿಂಧೂ ಕರ್ತವ್ಯ ನಿರ್ವಹಿಸಿದರು. ಶಾಸಕ ಎಂ.ಟಿ.ಕೃಷ್ಣಪ್ಪ, ಜಿಪಂ ಸದಸ್ಯರಾದ ಎ.ಬಿ.ಜಗದೀಶ್, ತಾಪಂ ನಿಕಟಪೂರ್ವ ಪ್ರಭಾರ ಅಧ್ಯಕ್ಷ ವಿ.ಟಿ.ವೆಂಕಟರಾಮಯ್ಯ, ಸದಸ್ಯರಾದ ಎಂ.ಡಿ.ರಮೇಶ್‌ಗೌಡ, ಕೋಳಾಲ ಗಂಗಾಧರ್, ಶ್ರೀನಿವಾಸ್, ಮಲ್ಲೇಶ್, ಪದ್ಮಾವತಿ ವೆಂಕಟೇಶ್, ಪಾರ್ವತಮ್ಮ, ಲಕ್ಷ್ಮೀಕಾಂತ್, ರಾಮಚಂದ್ರಯ್ಯ, ರತ್ನಾಮಣಿ ವೆಂಕಟೇಗೌಡ, ಕುಮಾರಿ ಕಾಂತರಾಜು, ನಾಗಮಣಿ ಲಕ್ಷ್ಮಣಗೌಡ, ಭಾಗ್ಯಮ್ಮ ದೇವರಾಜು, ಪುಷ್ಪಲತಾ ಸೋಮಶೇಖರ್, ಶಬನಾಬಿ ಮುಕ್ತಿಯಾರ್, ಎಪಿಎಂಸಿ ಅಧ್ಯಕ್ಷ ಬಸವರಾಜು ಮೊದಲಾದವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.