ತುಮಕೂರು

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಫೆಲೋಶಿಫ್‌ಗೆ ಆಹ್ವಾನ

Published On :

ತುಮಕೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿ 2014-15ನೇ ಸಾಲಿಗಾಗಿ 8 ಜನರಿಗೆ ತಲಾ 1ಲಕ್ಷದಂತೆ ಫೆಲೋಶಿಫ್ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಸಿ.ಎಚ್. ಭಾಗ್ಯ ತಿಳಿಸಿದ್ದಾರೆ. ಯಾವುದೇ ಪದವಿ ಹೊಂದಿದ ಪರಿಶಿಷ್ಟ ಜಾತಿಯ 20ರಿಂದ 50 ವಯೋವಾನದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರು ಪದವಿ ಪಡೆಯದಿದ್ದರೂ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ತಮ್ಮ ಅರ್ಜಿಯೊಂದಿಗೆ ದೃಡೀಕೃತ ಎಸ್‌ಎಸ್‌ಎಲ್‌ಸಿ ಹಾಗೂ ಪದವಿ ಅಂಕಪಟ್ಟಿಯನ್ನು ಲಗತ್ತಿಸಿ 2014, ಆ.15ರೊಳಗಾಗಿ ಸಲ್ಲಿಸಬೇಕು. ಅರ್ಜಿಯನ್ನು ಅಂಚೆ ಮೂಲಕ ಪಡೆಯಲಿಚ್ಛಿಸುವವರು ಸ್ವವಿಳಾಸವಿರುವ ಅಂಚೆ ಲಕೋಟೆಯನ್ನು ಅಕಾಡೆಮಿಗೆ ಕಳುಹಿಸಿ ಪಡೆಯಬಹುದು. ಅಭ್ಯರ್ಥಿಗಳು ನಿರ್ದಿಷ್ಟಪಡಿಸಿದ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು 4ರಿಂದ 5 ಪುಟಗಳ ಸಾರಲೇಖವನ್ನು ಸಿದ್ಧಪಡಿಸಿ ಅರ್ಜಿಯೊಂದಿಗೆ ಅಕಾಡೆಮಿಗೆ ಸಲ್ಲಿಸಬೇಕು. ಪಿ.ಎಚ್‌ಡಿ., ಎಂಫಿಲ್‌ಗೆ ಸಲ್ಲಿಸಿದ ಸಂಶೋಧನಾ ವಿಷಯವಾಗಿರಬಾರದು. ಕುಲದರ್ಶನ ಸಂಕಥನಗಳ ಅಧ್ಯಯನ, ದಲಿತ ಸಾಹಿತ್ಯದಲ್ಲಿ ಭಾಷಾಭಿವ್ಯಕ್ತಿ- ಸಾಂಸ್ಕೃತಿಕ ಅನನ್ಯತೆಯ ಸಾಧ್ಯತೆಗಳು, ದಲಿತರ ಸಾಂಸ್ಕೃತಿಕ ಚರಿತ್ರೆಯ ಹಿನ್ನೋಟಗಳ ಅಧ್ಯಯನ, ದಲಿತರ ಸಾಂಸ್ಕೃತಿಕ ಕಥನಗಳ ಅಧ್ಯಯನ, ದಲಿತ ಮಹಿಳಾ ಚಳವಳಿಯ ಅಧ್ಯಯನ, ತಳಸ್ತರ ವಚನಕಾರ್ತಿಯರ ವಚನಗಳ ಅಧ್ಯಯನ, ಗಣಿಗಾರಿಕೆ ಪ್ರದೇಶಗಳ ಜನಪದೀಯ ಅಧ್ಯಯನ, ಕರ್ನಾಟಕದ ಕುಶಲಕರ್ಮಿಗಳು, ಸ್ಥಳೀಯ ಕುಲ ಕಸುಬುಗಳು ಮತ್ತು ಜನಬದುಕು ಈ ವಿಷಯಗಳ ಮೇಲೆ ಸಿದ್ಧಪಡಿಸಿದ ಸಾರಲೇಖವನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.080-22211730, 22106460ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.