ಸುದೀರ್ಘ ಅವಧಿಯ ಸೇವೆ ಸಲ್ಲಿಸಿ ನಿವೃತ್ತಿ ಕಷ್ಟ: ರವೀಂದ್ರ
ಕುಣಿಗಲ್: ಸದಾ ಒತ್ತಡ ಹಾಗೂ ಸಮಯ ಪರಿಪಾಲನೆಗೆ ಹೆಸರಾಗಿರುವ ಸಾರಿಗೆ ಸಂಸ್ಥೆಯಲ್ಲಿ, ಸುದೀರ್ಘ ಅವಧಿಯ ಸೇವೆ ಸಲ್ಲಿಸಿ ನಿವೃತ್ತರಾಗುವುದು ಕಷ್ಟವೆ ಸರಿ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕುಣಿಗಲ್ ಘಟಕದ ವ್ಯವಸ್ಥಾಪಕ ಕೆ.ಎಂ. ರವೀಂದ್ರ ಅಭಿಪ್ರಾಯಪಟ್ಟರು. ಶನಿವಾರ, ಕುಣಿಗಲ್ ಘಟಕದಲ್ಲಿ ಘಟಕದ ವಿವಿಧ ವಿಭಾಗಗಳ ಸಿಬ್ಬಂದಿಗಳು ಹಮ್ಮಿಕೊಂಡಿದ್ದ ನಿವೃತ್ತರಾದ ಸಿಬ್ಬಂದಿಗಳಿಗೆ ಬೀಳ್ಕೋಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾರಿಗೆ ಸಂಸ್ಥೆಯು ಸಾರ್ವಜನಿಕರ ಜನಜೀವನದಲ್ಲಿ ಅತ್ಯವಶ್ಯಕ ಮತ್ತು ಅವಿಭಾಜ್ಯ ಅಂಗವಾಗಿದೆ. ಸಾರಿಗೆ ಸಂಸ್ಥೆಯಲ್ಲಿನ ಎಲ್ಲಾ ವಿಭಾಗದ ಸಿಬ್ಬಂದಿಗಳು ಅದರಲ್ಲೂ ಪ್ರಮುಖವಾಗಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರಿಗೆ ಹೆಚ್ಚಿನ ಕೆಲಸದ ಒತ್ತಡ ಇದೆ ಎಂದರು. ಸಿಬ್ಬಂದಿಗೆ ತಮ್ಮ ಸಮಸ್ಯೆಗಳನ್ನು ಬದಿಗೊತ್ತಿ ಸಾಮಾನ್ಯ ಜನತೆಯ ಸೇವೆಗೆ ಮುಂದಾಗಿ, ಅವರ ಸೇವೆಯಲ್ಲಿ ತಮ್ಮ ನೋವುಗಳನ್ನು ಮರೆಯುತ್ತಿದ್ದಾರೆ. ಇಂತಹ ಸಿಬ್ಬಂದಿಗಳು ವಯೋ ನಿವೃತ್ತರಾದಾಗ ಮಾತ್ರವೇ ಅವರಿಗೆ ಸ್ವಲ್ಪ ಮಟ್ಟಿನ ಒತ್ತಡ ಕಡಿಮೆಯಾಗಲಿದೆ. ಆದರೂ ನಿವೃತ್ತರಾದ ನೌಕರರು, ತಮ್ಮ ಅನುಭವ ಹಾಗೂ ಸೇವಾ ದಕ್ಷತೆಯನ್ನು ಸಂಸ್ಥೆಯಲ್ಲಿನ ಯುವ ಪೀಳಿಗೆಯ ಸಿಬ್ಬಂದಿಗೆ ತಿಳಿ ಹೇಳುವ ಮೂಲಕ ಅವರೂ ಸಹ ಉತ್ತಮ ಸೇವೆ ಹೊಂದುವ ದಿಸೆಯಲ್ಲಿ ಸ್ಫೂರ್ತಿದಾಯಕರಾಗುವ ನಿಟ್ಟಿನಲ್ಲಿ ಮಾರ್ಗದರ್ಶಕರಾಗಬೇಕೆಂದರು.
ಕುವೆಂಪು ಶ್ರೀ ಪ್ರಶಸ್ತಿಗೆ ಅರ್ಜಿ
ಮೈಸೂರು: ವಿಶ್ವಮಾನವ ವಿದ್ಯಾರ್ಥಿ ವೇದಿಕೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಿರುವ ಕುವೆಂಪು ಶ್ರೀ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. 2013- 14ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶ್ವಮಾನವ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಈ ಎರಡು ಪರೀಕ್ಷೆಗಳಲ್ಲಿ ಕನಡದ ವಿಷಯದಲ್ಲಿ ಶೇ.100ಕ್ಕೆ 100 ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಕುವೆಂಪು ಶ್ರೀ ಪ್ರಶಸ್ತಿ ನೀಡಲಾಗುವುದು ಎಂದು ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಭುಜಗನಪುರ ತಿಳಿಸಿದ್ದಾರೆ. ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು 2 ಭಾವಚಿತ್ರ, ಕಾಲೇಜಿನ ವಿವರ ಹಾಗೂ ಅಂಕಪಟ್ಟಿಯ ನಕಲು ಪ್ರತಿಯೊಂದಿಗೆ ಅರ್ಜಿಯನು ಎಂ.ಜೆ. ಸುರೇಶ್ಗೌಡ, ಸಂಸ್ಥಾಪಕ ಅಧ್ಯಕ್ಷರು, ವಿಶ್ವಮಾನವ ವಿದ್ಯಾರ್ಥಿ ವೇದಿಕೆ, ನಂ.2618, ವಾಲ್ಮೀಕಿ ರಸ್ತೆ, ಒಂಟಿಕೊಪ್ಪಲ್, ಮೈಸೂರು -2 ಈ ವಿಳಾಸಕ್ಕೆ ಸಲ್ಲಿಸಬಹುದು. ಮೊ. 9986151966 ಸಂಪರ್ಕಿಸಬಹುದು.
ಅಪಘಾತದಲ್ಲಿ ಹೆಬ್ಬಾಕ ರಮೇಶ್ ನಿಧನ
ತುಮಕೂರು: ತುಮಕೂರು ಸಮೀಪದ ಹೆಗ್ಗೆರೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ದಲಿತ ಮುಖಂಡ ಹೆಬ್ಬಾಕ ರಮೇಶ್ (78) ಸಾವನಪ್ಪಿದ್ದಾರೆ. ಸರಕು ಸಾಗಣೆ ವಾಹನ ಟಾಟಾ ಏಸ್ ಹಾಗೂ ಲೂನಾ ನಡುವೆ ಭಾನುವಾರ ಮಧ್ಯಾಹ 3 ಗಂಟೆ ಸುಮಾರಿಗೆ ನಡೆದ ಅಪಘಾತದಲ್ಲಿ ರಮೇಶ್ ಸಾವನಪ್ಪಿದ್ದಾರೆ. ಹೆಬ್ಬಾಕ ರಮೇಶ್ ಹಾಲಿ ದಲಿತ ಸೇನೆಯ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ರಾ.ಹೆದ್ದಾರಿ ರಸ್ತೆ ಕಾಮಗಾರಿ ವಿಳಂಬ
ಮಧುಗಿರಿ: ಮಧುಗಿರಿ - ಶಿರಾ ನಡುವೆ ನಡೆಯುತ್ತಿರುವ 234 ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ವಿಳಂಬ ಮತ್ತು ನಿರ್ಲಕ್ಷ್ಯದಿಂದಾಗಿ ಸರಣಿ ಅಪಘಾತಗಳು ಸಂಭವಿಸುವ ಮೂಲಕ ಮೃತ್ಯು ಕೂಪವಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ರಸ್ತೆ ಕಾಮಗಾರಿ ಪ್ರಾರಂಭವಾದಂದಿನಿಂದ ಇಲ್ಲಿವರೆಗೆ ಒಟ್ಟು 13 ಜನರು ಬಹುತೇಕ ವಾಹನ ಅಪಘಾತ ಸಂಭವಿಸಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರ ಕುಟುಂಬಗಳಿಗೆ ಇಲ್ಲಿವರೆಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆ ಗುತ್ತಿಗೆ ಪಡೆದಿರುವ ಹೈದರಬಾದಿನ ಜೆಎಂಸಿ ಕನ್ಸ್ಸ್ಟ್ರಕ್ಷನ್ ಕಂಪನಿಯವರ ಮೃದು ಧೋರಣೆಯಿಂದಾಗಿ ಇಂತಹ ಅವಘಡಗಳು ಪ್ರತಿನಿತ್ಯ ನಡೆಯುತ್ತಿದ್ದರೂ ಕೂಡ ಕಾಮಗಾರಿ ತ್ವರಿತಗತಿಯಲ್ಲಿ ಮಾಡುತ್ತಿಲ್ಲ ಎಂದು ಗ್ರಾಮೀಣ ಜನರು ದೂರಿದ್ದಾರೆ. ಕಾಮಗಾರಿ 2013ಕ್ಕೆ ಮುಗಿಸಬೇಕು ಎಂಬ ಆದೇಶವಿದ್ದರೂ ಕೂಡ ಗುತ್ತಿಗೆದಾರರ ಬೇಜವಾಬ್ದಾರಿ ಮತ್ತು ನಿರ್ಲಕ್ಷದಿಂದಾಗಿ ಆಮೇಗತಿಯಲ್ಲಿ ಸಾಗುತ್ತಿರುವ ಪರಿಣಾಮ ಕಾಮಗಾರಿ ನೆನೆಗುದಿಗೆ ಬಿದ್ದಿದೆ.ನಿತ್ಯ ನೂರಾರು ವಾಹನಗಳು, ದ್ವಿಚಕ್ರ ವಾಹನ ಸವಾರರು ಮಧುಗಿರಿ ಉಪವಿಭಾಗ ಕೇಂದ್ರ ಪಟ್ಟಣಕ್ಕೆ ಬಂದು ಹೋಗುವವರ ಸಂಖ್ಯೆ ಅಧಿಕ, ರಸ್ತೆಯುದ್ದಕ್ಕೂ ಅಲ್ಲಲ್ಲಿ ಸೇತುವೆಗಳನ್ನು ಕಿತ್ತು ಹಾಕಿ ಕಟ್ಟುತ್ತಿದ್ದಾರೆ. ಇಂತಹ ಕಡೆ ಯಾವುದೇ ಎಚ್ಚರಿಕೆ ಸೂಚನ ಫಲಕಗಳಿಲ್ಲದೆ ಅತಿ ವೇಗವಾಗಿ ಬರುವ ದ್ವಿಚಕ್ರವಾಹನ ಸವಾರರು ಹಳ್ಳಕ್ಕೆ ಬಿದ್ದು ಕೈ.ಕಾಲು ಮುರಿದು ಕೊಂಡಿರುವ ಪ್ರಕರಣಗಳು ನಡೆದಿವೆ. ಈಚೆಗೆ ಜಯಕರ್ನಾಟಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಗುಂಡ್ಲಹಳ್ಳಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರೂ ಕೂಡ ಕಾಮಗಾರಿ ಮಾತ್ರ ಚುರುಕುಗೊಂಡಿಲ್ಲ ಎಂಬುದು ಸಾರ್ವಜನಿಕರು ಅಳಲು.
ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನ
ತಿಪಟೂರು: ತಾಲೂಕಿನಲ್ಲಿರುವ ಸಮಾಜದ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಮೆಟ್ರಿಕ್ಪೂರ್ವ ವಿದ್ಯಾರ್ಥಿ ನಿಲಯಗಳಿಗೆ 2014-15ನೇ ಸಾಲಿನಲ್ಲಿ ಸೇರಲು ಬಯಸುವ ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ವರ್ಗಗಳ 5ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂ.5 ಕೊನೆಯ ದಿನಾಂಕ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ತಿಪಟೂರು ನಗರ ಮತ್ತು ಹೊನ್ನವಳ್ಳಿ, ಬಾಲಕಿಯರ ವಿದ್ಯಾರ್ಥಿ ನಿಲಯ ನೊಣವಿನಕೆರೆ, ತಿಪಟೂರು ನಗರ ಇಲ್ಲಿಗೆ ಅರ್ಜಿಗಳನ್ನು ಸಲ್ಲಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

