ಖಾಸಗಿ ಹಾಲಿನ ಮಾರಾಟ ನಿಯಂತ್ರಿಸಲು ಆದೇಶ
ತುಮಕೂರು: ತುಮಕೂರು ನಗರದಲ್ಲಿ ಇನ್ನು ಮುಂದೆ ಖಾಸಗಿ ಹಾಲನ್ನು ಮಾರಾಟ ಮಾಡುವಂತಿಲ್ಲ. ಖುದ್ದು ಜಿಲ್ಲಾಧಿಕಾರಿಗಳೇ ಖಾಸಗಿ ಹಾಲಿನ ಮಾರಾಟ ನಿಯಂತ್ರಿಸಲು ಆದೇಶಿಸಿದ್ದಾರೆ.
ಈ ಸಂಬಂಧ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ಮಾಡಿರುವ ಜಿಲ್ಲಾಧಿಕಾರಿ ಸತ್ಯಮೂರ್ತಿ ರೈತರ ಸಹಕಾರಿ ಸಂಸ್ಥೆಯಾದ ನಂದಿನಿ ಹಾಲು ಮತ್ತು ಉತ್ಪನ್ನಗಳನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುವಂತೆ ಕರೆ ನೀಡಿದರು.
ಅವರು ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಾಲು ದಿನಾಚರಣೆ ಮತ್ತು ನಂದಿನ ಸಿಟಿ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಹಾಲಿನಲ್ಲಿ ಹೈಡ್ರೋಜನ್ ಪೆರಾಕ್ಸೈಡ್, ಸಿಎಂಸಿ ಸ್ವಾರ್ಚ್, ಜಿಲೆಟಿನ್, ಗಂಧಕದ ಪುಡಿ, ಯೂರಿಯಾ ಮುಂತಾದವುಗಳನ್ನು ಕಲಬೆರಕೆ ಮಾಡುತ್ತಿದ್ದು ಕಲಬೆರೆಕೆಗೆ ಆಸ್ಪದವಿಲ್ಲದ ರೈತರಿಂದ ಸಂಗ್ರಹಿಸಿ ಹಾಲನ್ನು ಒಕ್ಕೂಟದ ಮೂಲಕ ಗ್ರಾಹಕರಿಗೆ ನೀಡುತ್ತಿರುವ ತುಮಕೂರು ಸಹಕಾರಿ ಹಾಲು ಒಕ್ಕೂಟದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಲನ್ನು ಪ್ರತಿನಿತ್ಯ ಉಪಯೋಗಿಸುವುದರಿಂದ ಚೈತನ್ಯ, ಸ್ಫೂರ್ತಿ ಮತ್ತು ಸೌಂದರ್ಯವರ್ಧಕ ಅಂಶಗಳು ಮೈಗೂಡುತ್ತವೆ ಎಂದು ವಿವರಿಸಿದರು.
ಅನಿವಾರ್ಯ: ಆರೋಗ್ಯವಂತ ಮನುಷ್ಯ ಪ್ರತಿನಿತ್ಯ ಕನಿಷ್ಠ 200 ಮಿಲಿ ಹಾಲನ್ನು ಉಪಯೋಗಿಸುವುದು ಅನಿವಾರ್ಯ. ಹಾಲು ಉಪಯೋಗಿಸುವಾಗ ಶುದ್ಧ ಹಾಗೂ ತಾಜಾ ನಂದಿನಿ ಹಾಲನ್ನು ಬಳಸುವಂತೆ ತಿಳಿಸಿದರು. ತಮ್ಮ ಆರೋಗ್ಯಕ್ಕೆ ಅನುಕೂಲವಾಗುವ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಉಪಯೋಗಿಸಬೇಕು ಎಂದರು. ಹಾಲು ಸಂಪೂರ್ಣ ಆಹಾರವೆಂದು ಮನುಷ್ಯನ ಶಾರೀರಿಕ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕಾಂಶಗಳು ಹಾಲಿನ ಉಪಯೋಗದಿಂದ ಲಭ್ಯವಾಗುವುದೆಂದು ಕಿವಿಮಾತು ಹೇಳಿದರು.
ಹಾಲು ಸಂಗ್ರಹ: ಅಧ್ಯಕ್ಷತೆ ವಹಿಸಿದ್ದ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಅವರು 5 ಸಾವಿರ ಲೀಟರ್ಗಳ ಶೇಖರಣೆಯಿಂದ ಆರಂಭವಾದ ತುಮಕೂರು ಹಾಲು ಒಕ್ಕೂಟ ಇಂದು ದಿನವೊಂದಕ್ಕೆ 5 ಲಕ್ಷ ಲೀಟರ್ ಗಿಂತಲೂ ಹೆಚ್ಚು ಹಾಲು ಸಂಗ್ರಹಿಸುತ್ತಿದೆ. ಗ್ರಾಮೀಣ ಪ್ರದೇಶದ ರೈತರ ಸಮೂಹಕ್ಕೆ ಪ್ರತಿ ವಾರ ಕರ್ನಾಟಕ ಸರ್ಕಾರದ ಪ್ರೋತ್ಸಾಹ ಧನ ಹಾಗೂ ಕ್ಷೀರಭಾಗ್ಯ ಯೋಜನೆಗಳಂತಹ ಮಹತ್ಕಾರ್ಯಗಳಿಂದಾಗಿ ರೈತರು ಅಪೌಷ್ಟಿಕತೆ ಹೊಂದಿದ್ದ ಶಾಲಾ ಮಕ್ಕಳು ಮತ್ತು ನಷ್ಟದ ಹಾದಿಯಲ್ಲಿದ್ದ ಹಾಲು ಒಕ್ಕೂಟಗಳು ಇಂದು ಲಾಭದಾಯಕವಾಗಿ ಮುಂದುವರೆಯಲು ಮುಖ್ಯಮಂತ್ರಿಗಳ ಸಹಾಯ ಮತ್ತು ದಿಟ್ಟ ಕ್ರಮದ ಬಗ್ಗೆ ಸ್ಮರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತುಮಕೂರು ಸಹಕಾರಿ ಹಾಲು ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎ.ಆರ್. ಚಂದ್ರಶೇಖರ್ ದೇಶದಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ ಎಂದರು.
ಒಕ್ಕೂಟದ ವ್ಯವಸ್ಥಾಪಕ ಜಿ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕ ವರ್ಗ ಹಾಗೂ ಸಾರ್ವಜನಿಕರಿಗೆ ನಂದಿನಿ ಸಿಹಿ ಹಾಲು ಮತ್ತು ಪೇಡಾವನ್ನು ವಿತರಿಸಿ ಆಚರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

