8 ಕ್ಕೆ ವಿವೇಕಾನಂದ ವಿಚಾರ ವೇದಿಕೆ ಉದ್ಘಾಟನೆ
ತುಮಕೂರು: ಇಲ್ಲಿನ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಜೂ. 8 ರಂದು ಸಂಜೆ 5.30 ಕ್ಕೆ ವಿವೇಕಾನಂದ ವಿಚಾರ ವೇದಿಕೆಯ ಉದ್ಘಾಟನೆ ಮತ್ತು ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ಸಾನಿಧ್ಯವನ್ನು ಅಟವಿ ಶಿವಲಿಂಗ ಸ್ವಾಮೀಜಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಸಿ.ವಿ. ಮಹದೇವಯ್ಯ ನೆರವೇರಿಸುವರು. ಅಧ್ಯಕ್ಷತೆಯನ್ನು ಕವಿತಾಕೃಷ್ಣ ವಹಿಸಲಿದ್ದಾರೆ. ಭಾವಚಿತ್ರವನ್ನು ಎನ್.ಆರ್. ಜಯರಾಮ್ ಅನಾವರಣಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಎನ್ಎಸ್ ಶ್ರೀಧರ್ ಅವರನ್ನು ಕೆಜಿಎಲ್ ರವಿ ಸನ್ಮಾನಿಸುವರು.
ಹುಚ್ಚಯ್ಯಗೆ ಅಭಿನಂದನೆ
ತುಮಕೂರು: ತುಮಕೂರು ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದ ವೈ.ಎಚ್. ಹುಚ್ಚಯ್ಯನವರಿಗೆ ದಲಿತ ವಿಮೋಚನಾ ಸೇನೆ ಅಭಿನಂದನೆ ಸಲ್ಲಿಸಿದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ರಾಮಚಂದ್ರಯ್ಯ, ಮಹಿಳಾ ಜಿಲ್ಲಾಧ್ಯಕ್ಷೆ ಪಾರ್ವತಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕೆ.ಆರ್. ನಿವೃತ್ತ ಪಿಎಸ್ಐ ಗಂಗಣ್ಣ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮೊಕ್ತಿಯಾರ್ ಅಹಮದ್, ಅಲ್ಪಸಂಖ್ಯಾತರ ಘಟಕದ ಕಾರ್ಯಾಧ್ಯಕ್ಷ ಅಬ್ದುಲ್ ವಹಬ್ ಖಾನ್, ನಗರಾಧ್ಯಕ್ಷ ಕುಮಾರ್ ಹಾಗೂ ಸಂಘಟನೆಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಸಿದ್ಧ ಸಮಾಧಿ ಯೋಗ ಶಿಬಿರ
ತುಮಕೂರು: ಇಲ್ಲಿನ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ವತಿಯಿಂದ ಜೂ. 6 ರಂದು ಸಂಜೆ 6 ಗಂಟೆಗೆ ಚಿನ್ಮಯ ಋಷಿ ಕುಟೀರದಲ್ಲಿ ಸಿದ್ಧ ಸಮಾಧಿ ಯೋಗ ತರಗತಿ ಪರಿಚಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾರ್ವಜನಿಕರು ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ. ಆಸಕ್ತರು 9480692346 ಸಂಪರ್ಕಿಸಬಹುದು.
11 ರಂದು ಮಿನಿ ಉದ್ಯೋಗ ಮೇಳ
ತುಮಕೂರು: ಇಲ್ಲಿನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜೂ.11 ರಂದು ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಫಾರ್ಮಸಿಟಿಕಲ್ ಕಂಪನಿಯಲ್ಲಿ ಬಿಎಸ್ಸಿ, ಕೆಮಿಸ್ಟ್ರಿ, ಮೈಕ್ರೋಬಯಾಲಜಿ, ಬಿ. ಫಾರಂ, ಬಿಇ, ಐಟಿಐ ಅಭ್ಯರ್ಥಿಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ 9945687843 ಸಂಪರ್ಕಿಸಬಹುದು. ಸಂದರ್ಶನವು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ವಿವೇಕಾನಂದ ರಸ್ತೆ, ಸಿಂಧೂರ ಟೆಕ್ಸ್ಟೈಲ್ಸ್ ಪಕ್ಕ, ತುಮಕೂರು ಇಲ್ಲಿ ನಡೆಯಲಿದೆ.
ಹೋರಿಗಳ ಹರಾಜಿಗೆ ಆಗ್ರಹ
ತಿಪಟೂರು: ದೇಶದಲ್ಲೇ ಪ್ರಸಿದ್ಧವಾದ ಅಮೃತಮಹಲ್ ರಾಸುಗಳ ಹರಾಜನ್ನು ತಿಪಟೂರು ತಾಲೂಕಿನ
ಕೊನೇಹಳ್ಳಿಯ ಅಮೃತಮಹಲ್ ಕಾವಲು ಪ್ರದೇಶದಲ್ಲೇ ನಡೆಸಬೇಕು ಮತ್ತು ಕಳೆದ ವರ್ಷ ಹರಾಜಿನಲ್ಲಿ ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಪ್ರಕಟಿಸಬೇಕೆಂದು ಜಿಲ್ಲಾ ಅಮೃತ ಮಹಲ್ ಹೋರಾಟ ಸಮಿತಿಯ ಕಾರ್ಯದರ್ಶಿ ಮನೋಹರ್ ಸರ್ಕಾರವನ್ನು ಆಗ್ರಹಿಸಿದರು. ಪಟ್ಟಣದ ಎಪಿಎಂಸಿಯ ರೈತ ಭವನದಲ್ಲಿ ರೈತ ಸಂಘದ ಮುಖಂಡರೊಂದಿಗೆ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ನಡೆದ ರಾಸುಗಳ ಪ್ರಕರಣದಲ್ಲಿ ತಪಿತಸ್ಥ ಅಧಿಕಾರಿಗಳನ್ನು ಸರ್ಕಾರವೇ ರಕ್ಷಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಈ ವರ್ಷ ರಾಸುಗಳ ಹರಾಜನ್ನು ಈ ಪ್ರದೇಶದಲ್ಲಿ ನಡೆಸದೆ ಬೀರೂರು, ಅಜ್ಜಂಪುರ, ಬಾಸೂರು, ಚಿತ್ರದುರ್ಗ ಜಿಲ್ಲೆಯ ಚಿಕ್ಕಹೆಮ್ಮಿ, ಕೈನೋಡು ಮತ್ತು ಲಿಂಗದ ಹಳ್ಳಿಯಲ್ಲಿ ನಡೆಸಲು ಏರ್ಪಡಿಸಲಾಗಿದ್ದು, ಇದರ ಬಗ್ಗೆ ಯಾವುದೇ ಪತ್ರಿಕೆಗಳಲ್ಲಿ ಪ್ರಕಟಿಸದೆ ಗುಟ್ಟಿನಲ್ಲಿ ನಡೆಸಲಾಗುತ್ತಿದ್ದು ಇದರಲ್ಲೂ ಅವ್ಯವಹಾರ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಕಳೆದ ವರ್ಷ ಹರಾಜಿನಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ, ಅವ್ಯವಹಾರ ನಡೆದಿರುವುದು ದೃಢಪಡಿಸಿದರೂ ಸರ್ಕಾರ ಇದುವರೆಗೂ ಯಾವ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. 2013ರಲ್ಲಿ 1497 ರಾಸುಗಳು ಇಲಾಖೆಯಲ್ಲಿದ್ದು ನಂತರ 129 ಗಂಡುಕರು ಹಾಗೂ 115 ಹೆಣ್ಣುಕರು ಹಾಕಿದ್ದು, ಇದರಲ್ಲಿ 69 ಕರುಗಳು ಅಸುನೀಗಿವೆ. ಇಲಾಖೆ ಏನು ಕೆಲಸ ಮಾಡುತ್ತಿದೆ ಎಂದು ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

