ತುಮಕೂರು

ಆಪರೇಷನ್ ಮಂಕಿ ಸಕ್ಸಸ್: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Published On :

ತುರುವೇಕೆರೆ: ಪಟ್ಟಣಕ್ಕೆ ಹೊಂದಿಕೊಂಡಂತಿರುವ ರಾಘವೇಂದ್ರ ನಗರದಲ್ಲಿ  ಕೋತಿಯೊಂದು ವಿಪರೀತ ಕಿರಿ ಕಿರಿ ಮಾಡುತ್ತಿದ್ದು ಕೊನೆಗೂ ಅದನ್ನು ಹಿಡಿದು ಜನರಿಗೆ ನೆಮ್ಮದಿ ತಂದಿದೆ. ಆ ಕೋತಿ ಕಚ್ಚಿ ಹಲವರಿಗೆ ಗಾಯ ಮಾಡಿತ್ತು. ಇದರಿಂದ ರೋಸಿ ಹೋದ ಗ್ರಾಮದ ಹಲವಾರು ಯುವಕರು ಅರಣ್ಯ ಇಲಾಖಾ ಸಿಬ್ಬಂದಿಯೊಂದಿಗೆ  ಮಾತಿನ ಚಕಮಕಿ ಮಾಡಿ ಸ್ಥಳಕ್ಕೆ ಆಗಮಿಸಲೇಬೇಕು ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖಾ ಸಿಬ್ಬಂದಿ ಚಿಕ್ಕಯ್ಯ, ಭೀಮೇಗೌಡ ಉಗ್ರಯ್ಯ ಇತರರು ಹಿಡಿಯಲು ಹರ ಸಾಹಸ ಮಾಡಿದರು. ಅಂತಿಮವಾಗಿ ಕೋತಿಗೆ ಪೂಸಿ ಮಾಡಿ ತಮ್ಮತ್ತ ಬರುವಂತೆ ಮಾಡಲು ಯಶಸ್ವಿಯಾದರು. ಕೂಡಲೇ ಗೋಣಿಚೀಲದ ಸಹಾಯದಿಂದ ಕೂಡಿ ಹಾಕಿ ಬೆಟ್ಟದ ಸಾಲಿಗೆ ಕೊಂಡೊಯ್ದು  ಬಿಟ್ಟರು. ಅಲ್ಲಿಗೆ ಕೋತಿ ನೀಡುತ್ತಿದ್ದ ಕಾಟದಿಂದ ರಾಘವೇಂದ್ರ ನಗರದ ವಾಸಿಗಳು ನಿಟ್ಟುಸಿರು ಬಿಡುವಂತಾಯಿತು.
ಬ್ಯಾಂಕ್ ಪರೀಕ್ಷೆಗೆ ಉಚಿತ ಕಾರ್ಯಾಗಾರ
ತುಮಕೂರು: ಇಲ್ಲಿನ ವಿಎಸ್‌ಇಟಿ ವತಿಯಿಂದ ಬ್ಯಾಂಕ್ ಪರೀಕ್ಷೆಗಾಗಿ ಉಚಿತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಇದೇ ತಿಂಗಳ 14 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಸಂಬಂಧ ವಿಎಸ್‌ಇಟಿ ವತಿಯಿಂದ ಜೂ.7,8, 14 ಮತ್ತು 15 ರಂದು ಉಚಿತ ಕಾರ್ಯಾಗಾರ ನಡೆಸಲಾಗುವುದು. ಆಸಕ್ತರು ತಮ್ಮ ಹೆಸರನ್ನು ವಿಎಸ್‌ಇಟಿ, ದೊಡ್ಡಮನೆ ನರ್ಸಿಂಗ್ ಹೋಂ ಹತ್ತಿರ, ಬಿ.ಎಚ್. ರಸ್ತೆ, ತುಮಕೂರು, ಫೋನ್ 98860 23459 ಸಂಪರ್ಕಿಸಬಹುದುಎಂದು ಜೆ. ಶ್ವೇತಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.