ತುಮಕೂರು

ಕುಣಿಗಲ್: ಪಡಿತರ ಸೀಮೆಎಣ್ಣೆ ವಿಳಂಬ: ತನಿಖೆಗೆ ಸೂಚನೆ

Published On :

ಕುಣಿಗಲ್: ತಾಲೂಕಿನ ಪಡಿತರ ಕಾರ್ಡ್‌ದಾರರ ವಿತರಣೆಗಾಗಿ ಎರಡು ಲೋಡ್ ಸೀಮೆಎಣ್ಣೆ ಮಂಜೂರಾಗಿದ್ದರೂ, ತಾಲೂಕಿಗೆ ಬಾರದೆ ಇರುವುದನ್ನು ಪತ್ತೆಹಚ್ಚಿದ ಆಹಾರ ಇಲಾಖೆ ಆಯುಕ್ತರು ಗುರುವಾರ ರಾತ್ರಿ ಪಟ್ಟಣಕ್ಕೆ ದಿಢೀರ್ ಭೇಟಿ ನೀಡಿ ವರದಿ ನೀಡುವಂತೆ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
2.ಎರಡು ಲಕ್ಷ ಮೂರು ಸಾವಿರ ಲೀಟರ್ ಸೀಮೆಎಣ್ಣೆ ವಿಕರಣೆಯಾಗಬೇಕಿದ್ದು, ಈ ಪೈಕಿ 48ಸಾವಿರ ಲೀಟರ್ 9ರಂದು ಸಗಟು ವಿತರಕರಿಂದ ಕಳಿಸಲಾಗಿತ್ತು. ಎರಡು ಲೋಡ್ ಮಾತ್ರ ಪಟ್ಟಣಕ್ಕೆ ಆಗಮಿಸಿದ್ದು ಉಳಿಕೆ ಎರಡು ಲೋಡ್ ನೆಲಮಂಗಲ ಬಳಿ ನಿಲ್ಲಿಸಿದ್ದರು. ಆಹಾರ ಇಲಾಖೆ ಆಯುಕ್ತ ಹರ್ಷಗುಪ್ತ, ಕಾರ್ಯನಿಮಿತ್ತ ಬರುವಾಗ ಗುರುವಾರ ಸಂಜೆ ನೆಲಮಂಗಲ ಬಳಿ ನಿಲ್ಲಿಸಿದ್ದ ಸೀಮೆಎಣ್ಣೆ ಲಾರಿಗಳನ್ನು ಪರಿಶೀಲಿಸಿದ್ದಾರೆ. ನಂತರ ಗುರುವಾರ ರಾತ್ರಿ ಪಟ್ಟಣದ ತಾಲೂಕು ಕಚೇರಿಯ ಆಹಾರ ಇಲಾಖೆ ವಿಭಾಗದಲ್ಲಿ ಕೆಲ ದಾಖಲೆಗಳನ್ನು ಪರಿಶೀಲಿಸಿ, ವಿವರಣೆ ಕೇಳಿದಾಗ ಅಹಾರ ಇಲಾಖೆ ಸಿಬ್ಬಂದಿ ನೀಡಿದ ಉತ್ತರದಿಂದ ತೃಪ್ತರಾಗದ ಆಯುಕ್ತರು, ಸಂಬಂಧಿತ ವಿವರ ನೀಡುವಂತೆ ಉಪವಿಭಾಗಾಧಿಕಾರಿ ಆನಂದ್, ತಹಸೀಲ್ದಾರ್ ಶಂಭುಲಿಂಗಯ್ಯರಿಗೆ ಸೂಚಿಸಿ ತೆರಳಿದರು.

ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಪ್ರದಾನ
ಮಧುಗಿರಿ: ಮಂಡ್ಯದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿಯನ್ನು ಮಧುಗಿರಿಯ ವಿಕಲಚೇತನ ಶಿಕ್ಷಕಿ ವಿಜಯಾ ಮೋಹನ್ ಅವರಿಗೆ ಸಾಹಿತಿ ಬೊಳುವಾರು ಮಹಮದ್ ಕುಂಇ ಪ್ರಧಾನ ಮಾಡಿದರು. ಕಥೆಗಾರ, ಹಿಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಮರೇಶ ನುಗಡೋಣೆ ಮಾತನಾಡಿ, ಜನಪರ ಸಮಾಜವಾದವನ್ನು ಪರಿಗಣಿಸದೇ ಸಾಹಿತ್ಯ ರಚನೆಯಾಗುತ್ತಿರುವುದು ವಿಷಾದದ ಸಂಗತಿ ಎಂದರು. ಜಾತಿ ಕಥಾ ಸಂಕಲನದ ಲೇಖಕಿ ವಿಜಯಾ ಮೋಹನ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ ಸಾಹಿತಿ ಬೋಳುವಾರು ಮಹಮದ್ ಕುಂಇ ಮಾತನಾಡಿ, ಕಥೆಗಾರರು ತಮಗೆ ತಾವು ಅಪ್ರಮಾಣಿಕವಾಗಿದ್ದರೂ ಸಮಾಜಕ್ಕೆ ಪ್ರಮಾಣಿಕವಾಗಿರಬೇಕು ಎಂದರು. ಪ್ರಶಸ್ತಿ ಪುರಸ್ಕೃತೆ ವಿಜಯಾ ಮೋಹನ್ ಮಾತನಾಡಿ, ಸಮಾಜಮುಖಿ ಚಿಂತನೆ ಜತೆಗೆ ಆಶಾವಾದದ ನೆಲೆಗಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಂಡು ಸಾಹಿತ್ಯ ರಚನೆಗೆ ಮುಂದಾಗುತ್ತೇನೆ ಎಂದರು. ತೀರ್ಪುಗಾರರ ಪರ ಪ್ರಾಧ್ಯಾಪಕಿ ಡಾ. ಸಬಿತಾಬನ್ನಾಡಿ ಕಥಾಸಂಕಲನ ಕುರಿತು ಮಾತನಾಡಿದರು.ಪ್ರತಿಷ್ಠಾನದ ಬಿ.ಆರ್. ರವಿಕಾಂತೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.