ತುಮಕೂರು: ಚಿನ್ಮಯಿ ಚಿಂತನ ಕೇಂದ್ರದ ವಾರ್ಷಿಕೋತ್ಸವ
ತುಮಕೂರು: ಜಗತ್ತು ತನ್ನದೆಂದು ಭಾವಿಸುವ ಯೋಗ್ಯತೆ ಮಾನವನಿಗೆ ಮಾತ್ರ ಇದೆ. ಅವನ ಉದ್ಧಾರಕ್ಕೆ ತನ್ನ ಜೀವನವನ್ನು ಗೌರವಿಸುವ ಹಾಗು ಚೈತನ್ಯ ಶಕ್ತಿಯನ್ನು ಆದರಿಸಿದಾಗ ಮಾತ್ರ ಆತ್ಮೋನ್ನತಿ ಸಾಧ್ಯ ಎಂದು ರಾಜ್ಯ ಆರೋಗ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕೆ.ಎಚ್. ಗೋಪಾಲಕೃಷ್ಣೇಗೌಡ ಅಭಿಪ್ರಾಯಪಟ್ಟರು.
ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿನ್ಮಯಿ ಚಿಂತನ ಕೇಂದ್ರದ 13 ನೇ ವಾರ್ಷಿಕೋತ್ಸವಉದ್ಘಾಟಿಸಿ ಮಾತನಾಡಿ, ಜೀವನವು ಜಂಜಾಟವೆಂದೆನಿಸಿದರೂ ಬದುಕಿನ ಯಶಸ್ಸಿಗೆ ಮಾನವನಿಗೆ ಧನ್ಯತಾ ಭಾವನೆ, ಗುರುಕೃಪೆ ಹಾಗು ದೈವಕೃಪೆಗಳು ಅನಿವಾರ್ಯ. ನಾವು ವೈಯಕ್ತಿಕ ಆವಶ್ಯಕತೆಗಳನ್ನು ಕಾಯ್ದಿರಿಸಿಕೊಂಡು ಕಿಂಚಿತ್ತನ್ನು ಸಮಾಜಕ್ಕೆ ದಾನ ಮಾಡಿದರೆ ಕುಟುಂಬದಲ್ಲಿನ ತಾಯಿ ತನ್ನದುದನ್ನು ಬಹುತೇಕ ತ್ಯಾಗ ಮಾಡಿ ತಾನು ಕಿಂಚಿತ್ತನ್ನು ಸ್ವೀಕರಿಸುತ್ತಾಳೆ. ಇದನ್ನು ನಾವು ಗೌರವಿಸಬೇಕು ಎಂದರು.
ಆಶ್ರಮದ ಸ್ವಾಮಿಧೀರಾನಂದಜೀರವರು ಮಾತನಾಡಿ, ಬದುಕಿನ ಯಶಸ್ಸಿಗೆ ಆತ್ಮವಿಶ್ವಾಸ ಬೇಕು. ಸ್ವಪ್ರಯತ್ನ ಬೇಕು. ತೀವ್ರವಾದ ಹಂಬಲದೊಂದಿಗೆ ಹಂತಹಂತವಾಗಿ ಯಶಸ್ಸನ್ನು ಸಾಧಿಸುತ್ತಾ ಮುಂದುವರೆಯಬೇಕು. ಯಾವುದೇ ಸೋಲಿಗೆ ಎದೆಗುಂದಬಾರದು. ಯಾವುದೇ ಗೆಲುವಿಗೆ ತೃಪ್ತರಾಗಿ ನಮ್ಮ ಪ್ರಯತ್ನವನ್ನು ಸ್ಥಗಿತಗೊಳಿಸಿ ಬದುಕನ್ನು ನಿಂತ ನೀರಾಗಿಸಿ ಕೊಳ್ಳಬಾರದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರಿನ ರಾಮಕೃಷ್ಣ - ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ವೀರೇಶಾನಂದರು, ಜನ್ಮಗತ ಹಾಗು ಅರ್ಥಗತ ಅಸಮಾನತೆಗಳು ಅಪರಾಧ ಎಂದೆನಿಸುತ್ತದೆ. ಮಾನವರು ಬಹಿರಂಗದಲ್ಲಿ ವಿಭಿನ್ನರಾಗಿ ಕಂಡರೂ ಆಂತರ್ಯದಲ್ಲಿ ಅಭೇದವಾದ ದಿವ್ಯತೆಯೇ ಇದೆ ಎಂದರು. ಚಿಂತನ ಕೇಂದ್ರದ ನಿರ್ದೇಶಕಿ ಸ್ವರ್ಣಶಿವಶಂಕರ್ ಸ್ವಾಗತಿಸಿದರು. ಸರಳ ವಂದಿಸಿದರು. ಆರ್ಯವೈಶ್ಯ ಮಂಡಳಿ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಶಿಕ್ಷಣ ತಜ್ಞ ಬಿ.ಜಿ. ಶಿವಶಂಕರ್ ವೇದಿಕೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

