ತುಮಕೂರು

ದಲಿತರಿಗೆ ಇನ್ನೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ: ವೆಂಕಟಗಿರಿಯಯ್ಯ

Published On :

ಶಿರಾ: ಈ ದೇಶದ ಮೂಲ ನಿವಾಸಿಗಳಾಗಿ ಸಿಂಧೂ ನಾಗರಿಕತೆಯ ಮೊಮ್ಮಕ್ಕಳಾಗಿರುವ ನಮಗೆ 21ನೇ ಶತಮಾನ ಕಳೆದರೂ ದಲಿತರಿಗೆ ಇನ್ನೂ ಸಾಮಾಜಿಕ ಸಮಾನತೆ ನ್ಯಾಯ ದೊರಕದಿರುವುದು ವಿಷಾದನೀಯ ಸಂಗತಿ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಸಂಚಾಲಕ ವೆಂಕಟಗಿರಿಯಯ್ಯ ಹೇಳಿದರು. ಶಿರಾ ನಗರದ ಕೋಟೆ ಕೆರೆಹಿಂದಲಹಟ್ಟಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ನಗರ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಅವ್ವ ಸಂಸ್ಕೃತಿ ದಲಿತರದ್ದು. ಅವ್ವ ಸಂಸ್ಕೃತಿ ಎಂದರೆ ಸಮಾನವಾಗಿ ಹಂಚಿಕೊಂಡು ಬದುಕುವ ಸಂಸ್ಕೃತಿಯಾಗಿದೆ. ಆದರೆ ಇಷ್ಟು ವರ್ಷ ಸಮಾಜದ, ದೇಶದ ಸೇವೆ ಮಾಡುತ್ತಿರುವ ನಮಗೆ ಇನ್ನೂ ಸಮಾಜ ನಮ್ಮನ್ನು ನೀವು ನಮ್ಮಂತೆಯೇ ಎಂದು ಹಂಚಿಕೊಂಡು ಬಾಳುತ್ತಿಲ್ಲ ಎಂದು ಪ್ರಶ್ನಿಸಿದರು. ರಾಜ್ಯ ದಲಿತ ಮುಖಂಡ ಜೆ.ಎನ್.ರಾಜಸಿಂಹ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ದಸಂಸ ಸಂಚಾಲಕ ಟೈರ್ ರಂಗನಾಥ್ ವಹಿಸಿದ್ದರು. ಸರಿತಾ ರವಿಕುಮಾರ್, ಬೆಲ್ಲದಮಡು ಭರತ್‌ಕುಮಾರ್, ತಿಪ್ಪೇಸ್ವಾಮಿ, ಶೀಬಿ ರಂಗಯ್ಯ, ಕೆ.ಮಂಜುನಾಥ್, ರಾಜು, ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.