ಫುಟ್‌ಪಾತ್ ವ್ಯಾಪಾರಿಗಳ ಹಿತ ಕಾಯಲು ಒತ್ತಾಯ
ತುಮಕೂರು: ಬೀದಿ ಬದಿ ವ್ಯಾಪಾರಿಗಳ ಹಿತ ಕಾಪಾಡುವಂತೆ ಒತ್ತಾಯಿಸಿ ಸಿಐಟಿಯು ವತಿಯಿಂದ ತುಮಕೂರಿನಲ್ಲಿ ಪ್ರತಿಭಟನೆ ನಡೆಸಿ ಮೇಯರ್, ಆಯುಕ್ತರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬೀದಿ ಬದಿ ಮಾರಾಟಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಕಾಯ್ದೆಗೆ ನಿಯಾಮಾವಳಿ ರಚಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಯನ್ನು ನೀಡುವುದು, ಸ್ಥಳೀಯ ವೆಂಡಿಂಗ್ ಕಮಿಟಿ ರಚನೆ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ತುಮಕೂರು ನಗರದ ಟೌನ್‌ಹಾಲ್ ವೃತ್ತದಲ್ಲಿ ಸಮಾವೇಶಗೊಂಡು ಸಿಐಟಿಯು ನೇತೃತ್ವದಲ್ಲಿ ಪುಟ್‌ಪಾತ್ ವ್ಯಾಪಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಹಾಗೂ ಬೀದಿ ಬದಿ ಮಾರಾಟಗಾರರ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಸೈಯದ್ ಮುಜೀಬ್ ಮಾತನಾಡಿ, ಸಿಐಟಿಯು ನಡೆಸಿದ ಹಲವಾರು ಹೋರಾಟಗಳ ಫಲವಾಗಿ ಈ ಹಿಂದಿನ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೀದಿ ಬದಿ ಮಾರಾಟಗಾರರ ಸಂರಕ್ಷಣಾ ಕಾಯ್ದೆ ಪೂರಕವಾಗಿ ನಿಯಾಮಾವಳಿಯನ್ನು ರೂಪಿಸಲಿಲ್ಲ. ಈಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೀಘ್ರವಾಗಿ ನಿಯಾಮಾವಳಿಗಳನ್ನು ರೂಪಿಸಬೇಕು ಎಂದರು.
ವೆಂಡಿಂಗ್ ಕಮಿಟಿ: ಸರ್ಕಾರಕ್ಕೆ ಲಾಭವಾಗುವ ವಿಷಯಗಳಲ್ಲಿ ರಾತ್ರೋ ರಾತ್ರಿ ಆದೇಶಗಳು ಜಾರಿಯಾಗುತ್ತವೆ. ಆದರೆ ಕಾಯ್ದೆ ಬಂದು 6 ತಿಂಗಳು ಕಳೆದರೂ ನಿಯಾಮಾವಳಿ ರೂಪಿಸಲು ಸರ್ಕಾರ ಮುಂದಾಗಿಲ್ಲ ಎಂದರು. ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎ. ನರಸಿಂಹಮೂರ್ತಿ ಮಾತನಾಡಿ, ಮಹಾನಗರ ಪಾಲಿಕೆಗಳಲ್ಲಿ ರಚಿಸುವ ವೆಂಡಿಂಗ್ ಕಮಿಟಿಗಳಲ್ಲಿ ನೈಜ ಪುಟ್‌ಪಾತ್ ವ್ಯಾಪಾರಿಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದರು.
ಲೈಸೆನ್ಸ್ ನೀಡಬೇಕು: ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ ಹಾಲಿ ಪುಟ್‌ಪಾತ್ ವ್ಯಾಪಾರಿಗಳಿಂದು ಮಹಾನಗರಪಾಲಿಕೆಯು ಪ್ರತಿ ಪುಟ್‌ಪಾತ್ ವ್ಯಾಪಾರಿಗಳಿಂದ ವಾರ್ಷಿಕ ವಂತಿಗೆ ಪಡೆದು ಗುರುತಿನ ಚೀಟಿ(ಲೈಸನ್ಸ್) ನೀಡಬೇಕು ಎಂದರು. ವೆಂಡಿಂಗ್ ಕಮಿಟಿಗಳನ್ನು ರಚಿಸಬೇಕು. ಮುನಿಸಿಪಾಲಿಟಿ ಕಿರುಕುಳವನ್ನು ತಪ್ಪಿಸಬೇಕು. ಬೀದಿ ಬದಿ ಮಾರಾಟಗಾರರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಜಾರಿಗೊಳಿಸಬೇಕು. ಆರ್‌ಎಸ್‌ಬಿವೈ ರು. 30,000 ಮಿತಿಯನ್ನು 1 ಲಕ್ಷ ಹೆಚ್ಚಿಸುವಂತೆ ಒತ್ತಾಯಿಸಿದರು. ಕೊಳಗೇರಿ ನಿವಾಸಿಗಳ ಸಂಘದ ಸೈಯದ್ ಆಲ್ತಾಫ್ ಮಾತನಾಡಿದರು.
ಭರವಸೆ: ಮನವಿ ಸ್ವೀಕರಿಸಿದ ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಮಹಾಪೌರರು, ಉಪಮಹಾಪೌರರು ಮಹಾನಗರಪಾಲಿಕೆಯು ಪುಟ್‌ಪಾತ್ ವ್ಯಾಪಾರಿಗಳಿಗೆ ಮುಂದಿನ ದಿನಗಳಲ್ಲಿ ವೆಂಡಿಂಗ್ ಕಮಿಟಿ ಸಭೆ ಕರೆದು ಅದರಲ್ಲಿ ಸಿಐಟಿಯು ಸಂಘಟನೆಗೆ ಪ್ರಾತಿನಿದ್ಯ ನೀಡುವುದಾಗಿ ಹಾಗೂ ಆ ಸಮಿತಿಯಲ್ಲಿ ಪುಟ್‌ಪಾತ್ ವ್ಯಾಪಾರಿಗಳ ಸಂಬಂಧ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು. ಮಹಾಪೌರ ಗೀತಾರುದ್ರೆಶ್ ಮಾತನಾಡಿ, ಪುಟ್‌ಪಾತ್ ವ್ಯಾಪಾರಿಗಳಿಗೆ ನೆರವಿನ ಭರವಸೆ ನೀಡಿದರು. ಉಪಮಹಾಪೌರರು ಉಪಸ್ಥಿತರಿದ್ದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪಯ್ಯ ಮನವಿ ಸ್ವೀಕರಿಸಿ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಉಪಾಧ್ಯಕ್ಷ ಇಬ್ರಾಹಿಂ, ರೇವಣ್ಣ, ಖಜಾಂಚಿ ಲಕ್ಷ್ಮ್ಮಮ್ಮ ಸಹ ಕಾರ್ಯದರ್ಶಿ ಗಂಗಾಧರ್, ವೆಂಕಟೇಶ್, ಶ್ರೀನಿವಾಸ್, ಜೀಯಾಉಲ್ಲಾ, ರಾಮಣ್ಣ, ಜಾಕೀರ್, ನಾರಾಯಣ್, ರಾಜು, ಶಂಶುದ್ದಿನ್, ಪ್ರಕಾಶ್ , ಮುಂತಾದವರು ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

