ತುಮಕೂರು

'ಸಿದ್ಧಾಂತ ಒಪ್ಪುವವರನ್ನು ಪಕ್ಷ ಗುರುತಿಸುತ್ತದೆ'

Published On :

ಕ.ಪ್ರ. ವಾರ್ತೆ ತುಮಕೂರು ಮಾ.3
ಪಕ್ಷದ ಸಿದ್ಧಾಂತಗಳನ್ನು, ತತ್ವಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಆಗಮಿಸುವ ಎಲ್ಲರನ್ನೂ ಜೆಡಿಎಸ್ ಪಕ್ಷ ಗುರುತಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ತಿಳಿಸಿದರು.
ಅವರು ಪಕ್ಷದ ಕಚೇರಿಯಲ್ಲಿ ನಗರ ಮಹಿಳಾ ಘಟಕದ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕರ್ತರು ಚಟುವಟಿಕೆಯಿಂದ ಪಕ್ಷದ ಪರವಾಗಿ ಕೆಲಸ ಮಾಡುತ್ತಾ ಪಕ್ಷದ ಗೆಲುವಿಗೆ ಶ್ರಮಿಸಿದ್ದೇ ಆದರೆ ಇದರಿಂದ ಪಕ್ಷಕ್ಕೆ, ಪಕ್ಷದ ಮುಖಂಡರಿಗೆ, ಎಲ್ಲ ಕಾರ್ಯಕರ್ತರಿಗೂ ಅನುಕೂಲವಾಗುತ್ತದೆ ಎಂದರು. ಅದರ ಮೂಲಕ ನಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು, ಈ ನಿಟ್ಟಿನಲ್ಲಿ ಮಹಿಳಾ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕೆಂದು  ತಿಳಿಸಿದರು.
ನಗರಾಧ್ಯಕ್ಷೆ ರಾಣಿಚಂದ್ರಶೇಖರ್ ಅವರು ಸಂಘಟನಾ ಕೌಶಲ್ಯ ಹೊಂದಿರುವ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲೂ ತೊಡಗಿಕೊಂಡು ಉತ್ತಮ ಸರ್ಕಾರವನ್ನು ತರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನಂದ ಸ್ವಾಗತಿಸಿದರು. ರಂಗಮಣಿ ಕಾಮೇಶ್ ವಂದಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕುಸುಮ ಜಗನ್ನಾಥ್ ಉಪಸ್ಥಿತರಿದ್ದರು. ಹಾಗೂ ನಗರ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಪದಾಧಿಕಾರಿಗಳು: ಹಿರಿಯ ಉಪಾಧ್ಯಕ್ಷೆ- ತ್ರಿವೇಣಿ ಲಲಿತೇಶ್ವರ, ಉಪಾಧ್ಯಕ್ಷರು-ಸುಮಿತ್ರರಂಗೇಗೌಡ, ಕುಸುಮದಯಾನಂದ್, ಪ್ರಧಾನ ಕಾರ್ಯದರ್ಶಿ-ಸುಮಶಿವಕುಮಾರ್, ಸಂಘಟನಾ ಕಾರ್ಯದರ್ಶಿ-ಮಹಾಲಕ್ಷ್ಮಿ, ಆಶಾ ಶ್ರೀನಿವಾಸ್, ಭಾರತಿ (ವಕೀಲರು), ಕಾರ್ಯದರ್ಶಿಗಳು -ದೇವಿಕ ಲಕ್ಕೇಗೌಡ, ಮಂಗಳ ಶ್ರೀಧರ್, ಪುಷ್ಪ, ಸುಮಾ ಕಾಂತರಾಜು, ನೇತ್ರಾವತಿ, ಶ್ವೇತ ಜಿ, ಪದ್ಮಾ, ನಾಗಲಕ್ಷ್ಮಿ, ಪುಷ್ಪಲತಾ, ಹಾಗೂ 24 ನೇ ವಾರ್ಡ್ ಅಧ್ಯಕ್ಷರಾಗಿ ಶಬಾನ ಅಜ್ಮಿ ಪದಗ್ರಹಣ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.