ಅರಣ್ಯ ಹಕ್ಕು ಕಾಯಿದೆ ಅನುಷ್ಠಾನಕ್ಕೆ ಸಂಪುಟ ತೀರ್ಮಾನ: ಶಿವರಾಜೇಗೌಡ ಸಂತಸ
ಕನಕಪುರ: ರಾಜ್ಯಸರ್ಕಾರ ಗಿರಿಜನರ ಜೀವನದಲ್ಲಿ ನವೋತ್ಸಾಹ ತುಂಬುವ ಐತಿಹಾಸಿಕ ಅರಣ್ಯ ಹಕ್ಕು ಅಧಿನಿಯಮ 2006 ಕಾಯಿದೆಯನ್ನು ಯಥಾವತ್ ಅನುಷ್ಠಾನಗೊಳಿಸಲು ಮಹತ್ವದ ಸಂಪುಟ ತೀರ್ಮಾನ ಕೈಗೊಂಡಿರುವುದು ಸಂತೋಷದ ವಿಷಯ ಎಂದು ಸಮೃದ್ಧಿ ಗಿರಿಜನ ಕ್ಷೇಮಾಭಿವೃದ್ಧಿ ಸಂಘದ ಕಾರ್ಯನಿರ್ವಾಹಕ ಸಂಚಾಲಕ ಶಿವರಾಜೇಗೌಡ ಹೇಳಿದ್ದಾರೆ.
ಅರಣ್ಯ ಹಕ್ಕು ಅಧಿನಿಯಮ ರಾಜ್ಯದಲ್ಲಿ ಅನುಷ್ಠಾನಗೊಳ್ಳಲು ಶ್ರಮಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ರಾಮನಗರ ಜಿಲ್ಲೆಯಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿ ಗಿರಿಜನರಿಗೆ ಸರ್ಕಾರದ ಸವಲತ್ತುಗಳು ತಲುಪಲು ಕಾರಣರಾದ ಸಂಸದ ಡಿ.ಕೆ.ಸುರೇಶ್ಗೆ ಸಂಘದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರಸರ್ಕಾರ ಏಳು ವರ್ಷಗಳ ಹಿಂದೆ ಜಾರಿಗೊಳಿಸಿದ ಕಾನೂನು ಗಿರಿಜನರಿಗೆ ಅರಣ್ಯದಲ್ಲಿ ವಾಸಿಸುವ,ಅರಣ್ಯವನ್ನು ಸಂರಕ್ಷಿಸುವ ಉಪಉತ್ಪನ್ನಗಳನ್ನು ಅನುಭವಿಸುವ ಹಾಗೂ ಪಾರಂಪಾರಿಕ ಕೃಷಿಯನ್ನು ಕೈಗೊಳ್ಳುವ ಅಧಿಕಾರವನ್ನು ನೀಡಿದೆ. ನೂತನ ಕಾಯಿದೆ ಬಗ್ಗೆ ಅರಿವಿರದ ಅರಣ್ಯ ಅಧಿಕಾರಿಗಳು ಕಾಡಿನ ಪ್ರದೇಶದಿಂದ ಗಿರಿಜನರನ್ನು ಒಕ್ಕಲೆಬ್ಬಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ದೈನಂದಿನ ಕಾರ್ಯಗಳಿಗೆ,ಜಾನುವಾರುಗಳನ್ನು ಮೇಯಿಸಲು,ಕಟ್ಟಿಗೆ ಸಂಗ್ರಹಿಸಲು ಅರಣ್ಯಕ್ಕೆ ತೆರಳದಂತೆ ಒತ್ತಡ ಹೇರುತ್ತಿದ್ದಾರೆ,ಗ್ರಾಮಗಳಲ್ಲಿ ತಮಟೆ ಬಾರಿಸಿ ಅರಣ್ಯಕ್ಕೆ ತೆರಳದಂತೆ ಸೂಚಿಸಿದ್ದಾರೆ, ಅರಣ್ಯ ಅಧಿಕಾರಿಗಳ ದೌರ್ಜನ್ಯ ತಕ್ಷಣವೇ ನಿಲ್ಲಬೇಕು, ಎಂದು ಸೋಲಿಗೇರಿ ಗಿರಿಮಾದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

