ತುಮಕೂರು

ನಗರಸಭೆಗೆ ಬಿಜೆಪಿಯ ಗೀತಾ ದಿಲೀಪ್ ಅಧ್ಯಕ್ಷೆ, ಶಶಿಕಲಾ ಉಪಾಧ್ಯಕ್ಷರಾಗಿ ಆಯ್ಕೆ

Published On :

ತಿಪಟೂರು: ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ತಿಪಟೂರು ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಸೋಮವಾರ ಚುನಾವಣಾ ನಡೆದು ಅಧ್ಯಕ್ಷರಾಗಿ 22ನೇ ವಾರ್ಡನ ಬಿಜೆಪಿ ಗೀತಾದಿಲೀಪ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶಶಿಕಲಾ ಆಯ್ಕೆಯಾಗುವ ಮೂಲಕ ಪ್ರಕ್ರಿಯೆಗೆ ತೆರೆ ಬಿದ್ದಂತಾಗಿದೆ.
ಒಟ್ಟು 31ಸದಸ್ಯ ಬಲ ಹೊಂದಿರುವ ಇಲ್ಲಿನ ನಗರಸಭೆಗೆ ಬಿಜೆಪಿ 10, ಕೆಜೆಪಿ 7, ಕಾಂಗ್ರೆಸ್ 7, ಜೆಡಿಎಸ್ 3 ಮತ್ತು ಪಕ್ಷೇತರರಾಗಿ 4 ಸದಸ್ಯರು ಆಯ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಸಂಸದ ಬಸವರಾಜು ಮತ್ತು ಶಾಸಕ ಕೆ. ಷಡಕ್ಷರಿಯವರ 2 ಮತಗಳು ಸೇರಿ ಚುನಾವಣೆಗೆ 33 ಮತಗಳಿದ್ದವು. ಅಧ್ಯಕ್ಷ ಚುನಾವಣೆಗೆ ಮೂವರು ನಾಮಪತ್ರ ಸಲ್ಲಿಸಿದ್ದು ಅಂತಿಮವಾಗಿ ಬಿಜೆಪಿ ಗೀತಾದಿಲೀಪ್ ಮತ್ತು ಕಾಂಗ್ರೆಸ್‌ನ ಅನ್ನಪೂರ್ಣಮ್ಮನವರು ಸ್ಪರ್ಧೆಯಲ್ಲಿದ್ದರು.
ಬಿಜೆಪಿ ಅಭ್ಯರ್ಥಿ ಗೀತಾ ದಿಲೀಪ್ ಅವರಿಗೆ ಬಿಜೆಪಿಯ 17 (ಬಿಜೆಪಿ 10 ಮತ್ತು ಕೆಜೆಪಿ7), ಸಂಸದ ಬಸವರಾಜು 1, ಜೆಡಿಎಸ್‌ನ ಕೋಟೆ ಪ್ರಭು ಮತ್ತು ರೇಖಾ ಅನೂಪ್ ಅವರ 2 ಮತ ಸೇರಿ 21 ಮತಗಳು ಲಭಿಸುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅನ್ನಪೂರ್ಣಮ್ಮನವರಿಗೆ ಕಾಂಗ್ರೆಸ್‌ನ 7, ಶಾಸಕರ 1, ಜೆಡಿಎಸ್‌ನ ಸೊಪ್ಪುಗಣೇಶ್ ಅವರ 1ಮತ್ತು ಪಕ್ಷೇತರರ 2 ಮತಗಳು ಬಂದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದರಿಂದ ಒಬ್ಬರೆ ಸದಸ್ಯೆ ಆಯ್ಕೆಯಾಗಿದ್ದ ಶಶಿಕಲಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಟೆನಿಸ್‌ಬಾಲ್ ಕ್ರಿಕೆಟ್ ಟೂರ್ನಿ
ಹುಳಿಯಾರು: ಹೋಬಳಿಯ ಕಲ್ಲೇನಹಳ್ಳಿಯಲ್ಲಿ ಮಾ.22 ಹಾಗೂ ಮಾ 23 ರಂದು ಎರಡು ದಿನಗಳ ಕಾಲದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಕೆ.ಸಿ.ಸಿ ಕ್ಲಬ್ ವತಿಯಿಂದ ಆಯೋಜಿಸಲಾಗಿದೆ. ಪ್ರಥಮ ಬಹುಮಾನ 5001ರು. ಹಾಗೂ ದ್ವಿತೀಯ ಬಹುಮಾನ 3001 ರು. ಮತ್ತು ತೃತೀಯ ಬಹುಮಾನವಾಗಿ 1001 ರು.ಗಳನ್ನು ನೀಡಲಾಗುವುದಲ್ಲದೇ ಆಕರ್ಶಕ ಟ್ರೋಫಿ, ಸರಣಿ ಶ್ರೇಷ್ಠ, ಪಂದ್ಯ ಶ್ರೇಷ್ಠ, ಪಂದ್ಯ ಪುರುಶೋತ್ತಮ ಬಹುಮಾನಗಳನ್ನೂ  ನೀಡಲಾಗುವುದು. ಪ್ರತಿ ತಂಡಕ್ಕೆ ಪ್ರವೇಶ ಶುಲ್ಕ 250 ರು. ನಿಗದಿಪಡಿಸಿದ್ದು ಹೆಚ್ಚಿನ ಮಾಹಿತಿಗಾಗಿ 9141798949, 9591694088, 8711914693 ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.