ತುಮಕೂರು

ರಾಜಕೀಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ

Published On :

ಮಹಿಳಾ ದಿನಾಚರಣೆಯಲ್ಲಿ ಮೇಯರ್ ಗೀತಾ ರುದ್ರೇಶ್ ಅಭಿಮತ
ಕನ್ನಡಪ್ರಭ ವಾರ್ತೆ ತುಮಕೂರು ಮಾ.10
ರಾಜಕೀಯ ರಂಗದಲ್ಲಿ ಮಹಿಳೆಗೆ ಪ್ರೋತ್ಸಾಹದ ಅವಶ್ಯಕತೆಯಿದೆ ಎಂದು ಮೇಯರ್ ಗೀತಾ ರುದ್ರೇಶ್ ಅಭಿಪ್ರಾಯಪಟ್ಟರು.
ಅವರು ಸೋಮವಾರ ವರದಕ್ಷಿಣಿ ವಿರೋಧಿ ವೇದಿಕೆ ವತಿಯಿಂದ ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಪರಿವರ್ತನೆಗೆ ಪ್ರೇರಣೆ ಘೋಷವಾಕ್ಯದಡಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸ್ವಾವಲಂಬನೆ ಸಾಧಿಸುವುದರೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕೌಟುಂಬಿಕ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಕೆಲಸಕ್ಕೂ ಹೋಗುವ ಮಹಿಳೆಯರಿಗೆ ಪುರುಷರ, ಕುಟುಂಬದ ಹಿರಿಯರ ಬೆಂಬಲ ಅಗತ್ಯವಾಗಿದೆಯೆಂದರು.
ಲೇಖಕಿ ಬಾ.ಹ.ರಮಾಕುಮಾರಿ ಆಶಯ ನುಡಿಗಳನ್ನಾಡಿದರೆ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ನೂತನ ಎಂ. ದೋಶೆಟ್ಟಿ ಪ್ರಧಾನ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಸಂಸತ್, ಶಾಸನಸಭೆಗಳಲ್ಲಿ ಮಹಿಳಾ ಮೀಸಲು  ವಿಧೇಯಕ ಜಾರಿಗೊಳ್ಳದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಶಸ್ತಿ: ಇದೇ ವೇಳೆ ಮಹಿಳಾ ಸಾಧಕಿಯರಾದ ಚಿಕ್ಕನಾಯಕನಹಳ್ಳಿ ತಾಲೂಕು ಸಿದ್ಧನಕಟ್ಟೆಯ ಸಾವಯವ ಕೃಷಿ ತಜ್ಞೆ ಪಂಕಜ ಚಂದ್ರಶೇಖರಯ್ಯ ಅವರಿಗೆ ಗಂಗಮಾಳಮ್ಮ, ಗಂಗಾಧರಯ್ಯ ಸ್ಮಾರಕ ಮಹಿಳಾ ಚೇತನಾ ಪ್ರಶಸ್ತಿ, ತಿಪಟೂರು ತಾಲೂಕಿನ  ಹೊಗೆಯಾಡದ ಒಲೆ ಅನ್ವೇಷಕಿ ಲಲಿತಾಬಾಯಿಗೆ ಚನ್ನಮ್ಮ ಚನ್ನರಾಯಪ್ಪ ಸ್ಮಾರಕ ಮಹಿಳಾ ಸಾಧಕಿ ಪ್ರಶಸ್ತಿ, ಸಂಕಾಪುರ ಗ್ರಾ.ಪಂ ಸದಸ್ಯೆ ಹೋರಾಟಗಾರ್ತಿ ನಾಗರತ್ನ ಕೃಷ್ಣಯ್ಯ ಅವರಿಗೆ ಸರೋಜಮ್ಮ ರೇವಣ್ಣ ಸ್ಮಾರಕ ಶ್ರಮಜ್ಯೋತಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಥಾ ಸ್ಪರ್ಧೆ ಬಹುಮಾನ: ಸಮಾರಂಭದಲ್ಲಿ ದಿ.ಮೀನಾಕುಮಾರಿ ಬಸವಲಿಂಗಪ್ಪ ಸ್ಮಾರಕ 12 ನೇ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ವಿಜೇತರಾದ  ಹುಲಿಯೂರುದುರ್ಗದ ಸೋಮಶೇಖರ್, ಕೊರಟಗೆರೆಯ ಚಿ.ಕೆ.ಚಿಕ್ಕಪ್ಪಯ್ಯ ಹಾಗೂ ತುಮಕೂರಿನ ಜಿ.ಇಂದ್ರಕುಮಾರ್ ಅವರಿಗೆ ಕೆ.ಜಿ.ಬಸವಲಿಂಗಪ್ಪ ಬಹುಮಾನ ವಿತರಿಸಿದರು.  
ಇದೇ ವೇಳೆ ಸಿಘ್ನ ಯುವ ಸಂವಾದ ಕೇಂದ್ರದವರು ಮಹಿಳಾ ಜಾಗೃತಿ ನಾಟಕವನ್ನು ಪ್ರದರ್ಶಿಸಿದರೆ, ಹಸಿರು ಬಳಗದವರು ಹೋರಾಟದ ಹಾಡು ಹಾಡಿದರು.
ವೇದಿಕೆಯ ಎಂ.ಸಿ. ಲಲಿತಾ, ಸಿ.ಎಲ್. ಸುನಂದಮ್ಮ, ಜೀವರತ್ನ, ಮಲ್ಲಿಕಾಬಸವರಾಜು, ಅಕ್ಕಮ್ಮ,  ಪಾರ್ವತಮ್ಮ ರಾಜ್‌ಕುಮಾರ್, ಅಂಬುಜಾ, ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಸಾ.ಚಿ.ರಾಜ್‌ಕುಮಾರ್ ಇತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.