ನೀರಿಗಾಗಿ ಪಂಚಾಯ್ತಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಹುಳಿಯಾರು: ಕಳೆದ ಒಂದು ತಿಂಗಳಿಂದ ಸರಿಯಾಗಿ ಕುಡಿಯುವ ನೀರು ಬೀಡುತ್ತಿಲ್ಲ, ನೀರುಗಂಟಿಯನ್ನು ಕೇಳಿದರೆ ಬರಿ ಸಬೂಬು ಹೇಳುತ್ತಿದ್ದು, ಗ್ರಾ.ಪಂ.ಸದಸ್ಯರಾಗಲಿ, ಅಧ್ಯಕ್ಷರಾಗಲಿ ಈ ಬಗ್ಗೆ ಗಮನ ಕೊಡದೆ ಮೌನವಹಿಸಿದ್ದಾರೆಂದು ಆರೋಪಿಸಿ ಕೆಂಕೆರೆ ಗ್ರಾಮ ಪಂಚಾಯ್ತಿಯ ಕೆಲ ಗ್ರಾಮಸ್ಥರು ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಗುರುವಾರ ನಡೆಯಿತು.
ಪಂಚಾಯ್ತಿಗೆ ಮುತ್ತಿಗೆಹಾಕಿದ ಜನರು ನಮಗೆ ಕಳೆದ ಒಂದು ತಿಂಗಳಿಂದ ಕುಡಿಯಲು ನೀರು ಬಿಡದೆ ಮೋಟರ್ ಸರಿಯಿಲ್ಲ, ಬೋರಲ್ಲಿ ನೀರಿಲ್ಲ ಎಂಬ ಸಬೂಬು ಹೇಳುತ್ತಾ, ನೀರು ಬಿಡದಿರುವುದರಿಂದ ದಿನನಿತ್ಯ ಕುಡಿಯುವ ಹಾಗೂ ಬಳಕೆ ನೀರಿಗಾಗಿ ಪರಿತಪಿಸುವಂತಾಗಿದೆ.
ಗ್ರಾಮಪಂಚಾಯ್ತಿಗೆ ಬರುವ ಅನುದಾನವನ್ನು ಸರಿಯಾಗಿ ಬಳಕೆ ಮಾಡದೆ ತಮಗೆ ಇಷ್ಟಬಂದ ರೀತಿಯಲ್ಲಿ ಬಳಸುತ್ತಿದ್ದಾರೆ. ಓಟು ಕೇಳುವಾಗ ಮಾತ್ರ ಮನೆ ಬಾಗಿಲಿಗೆ ಬರುವ ಸದಸ್ಯರುಗಳು ಈಗ ನಮಸ್ಯೆಗೆ ಸ್ಪಂದಿಸದೇ ಎಲ್ಲೊ ಕುಳಿತ್ತಿದ್ದಾರೆ ಎಂದು ದೂರಿದರು.
ವಿಷಯ ತಿಳಿದು ಪಂಚಾಯ್ತಿಗೆ ಬಂದ ಅಧ್ಯಕ್ಷೆ ಪೂರ್ಣಿಮಾ, ಪಿಡಿಓ ಶಿವಕುಮಾರ್ ಅವರ ಮುಂದೆ ಗ್ರಾಮಸ್ಥರು ಸಮಸ್ಯೆಗಳ ಸರಮಾಲೆಯನ್ನು ತೆರೆದಿಟ್ಟು, ನಮಗೆ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಪಟ್ಟು ಹಿಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು ಇನ್ನೂ ಒಂದು ವಾರದೊಳಗಾಗಿ ಸಮರ್ಪಕವಾಗಿ ನೀರು ಬಿಡಿಸುವುದಾಗಿ ತಿಳಿಸಿ ಪ್ರತಿಭಟನಾಕಾರರನ್ನು ಸಮಧಾನಪಡಿಸಿದರು. ಸದಸ್ಯ ಬಸವರಾಜು, ಮಹೇಶ್, ಭದ್ರೇಶ್, ಲೋಕೇಶ್, ಗೋವಿಂದ್, ಚನ್ನಬಸವಯ್ಯ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

