ತುಮಕೂರು

ವಿದ್ಯಾವಾರಿಧಿಯಲ್ಲಿ 17ರಂದು ವಸ್ತುಪ್ರದರ್ಶನ

Published On :

ಹುಳಿಯಾರು: ಪಟ್ಟಣದ ವಿಧ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ  ಕಿಡ್ಸ್‌ಕಲೈಡೊ ಸ್ಕೋಪ್ ವಾರ್ಷಿಕ ವಸ್ತುಪ್ರದರ್ಶನಕ್ಕೆ  ಶಾಲಾ ಮಕ್ಕಳಿಂದ ಭರದ ಸಿದ್ಧತೆ ಸಾಗಿದೆ. ಇದೇ  17ರ ಸೋಮವಾರ ಯು.ಕೆ.ಜಿ, ಎಲ್.ಕೆ.ಜಿ ಯಿಂದ ನಾಲ್ಕನೇ ತರಗತಿಯ ಮಕ್ಕಳಿಗಾಗಿ ಏರ್ಪಡಿಸಿರುವ  ವಸ್ತುಪ್ರದರ್ಶನದಲ್ಲಿ  ಪಾಲ್ಗೊಳ್ಳುವ ಮಕ್ಕಳು ತಮ್ಮ ಕೌಶಲ್ಯ ಪ್ರದರ್ಶಿಸುವ ನಿಟ್ಟಿನಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ವತಃ ತಾವೇ ಸಿದ್ಧತೆ ಮಾಡಿಕೊಳ್ಳುತ್ತಿದ್ದ ದೃಶ್ಯ ಭೇಟಿಯ ಸಂದರ್ಭದಲ್ಲಿ ಕಂಡುಬಂತು.
ಕಚ್ಚಾ ಸಾಮಗ್ರಿಗಳನ್ನು ತಂದು ಶಿಕ್ಷಕರ ಮಾರ್ಗದರ್ಶನದಲ್ಲಿ  ಗುಡಿಕೈಗಾರಿಕ ವಸ್ತುಗಳಾದ ಊದುಬತ್ತಿ  ಹೊಸೆಯುವುದು, ಮೇಣದಬತ್ತಿ ತಯಾರಿಸುವುದು, ನೈಲ್ ಪಾಲೀಷ್‌ನಿಂದ ಉಗುರುಗಳ ಮೇಲೆ ವಿವಿಧ ಬಗೆಯ ಚಿತ್ತಾರಗಳನ್ನು ಚಿತ್ರಿಸುವುದು, ಸ್ವಂಜ್ ಬಳಸಿ ಬೊಂಬೆಗಳನ್ನು ತಯಾರಿಸುವುದು, ಮಣಿಗಳನ್ನು  ಪೋಣಿಸಿ ಫ್ಯಾನ್ಸಿ ಬಳೆಗಳನ್ನು ಸಿದ್ಧ ಮಾಡುವುದು, ತೆಂಗಿನ ಗರಿಗಳಿಂದ ಚಾಪೆ ಸಿದ್ಧಪಡಿಸುವುದಲ್ಲದೆ ಇತರ ಕರಕುಶಲ ವಸ್ತುಗಳ ಪೂರ್ವ ತಯಾರಿಯಲ್ಲಿ  ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳು ಆಸಕ್ತಿಯಿಂದ ತೊಡಗಿಕೊಂಡಿದ್ದರು.
ಪ್ರತಿವರ್ಷ ನಮ್ಮ ಶಾಲೆಯಲ್ಲಿ ಹೈಸ್ಕೂಲ್ ಮಟ್ಟದ  ಮಕ್ಕಳಿಗೆ ವಸ್ತುಪ್ರದರ್ಶನ ಏರ್ಪಡಿಸುತ್ತಿದ್ದೆವು.   ಚಿಕ್ಕಮಕ್ಕಳು ಪ್ರತಿಭಾವಂತರಾಗಿದ್ದು ಅವರಲ್ಲಿಯೂ  ಸುಪ್ತ ಪ್ರತಿಭೆಯಿರುತ್ತದೆ. ಅವರೂ ಇತರಂತೆ ತಮ್ಮ ಕೈಲಾಗುವ ವಸ್ತುಗಳನ್ನು ಸಿದ್ಧಪಡಿಸುತ್ತಾರೆ ಎಂಬ ಆಶಾಭಾವನೆಯಿಂದ ಈ ಬಾರಿ ನಾಲ್ಕನೇ ತರಗತಿವರೆಗಿನ ಮಕ್ಕಳಿಗಾಗಿ ವಸ್ತುಪ್ರದರ್ಶನ ಏರ್ಪಡಿಸಿರುವುದಾಗಿ ಶಾಲೆಯ ಕಾರ್ಯದರ್ಶಿ ಕವಿತಾಕಿರಣ್ ಕುಮಾರ್ ತಿಳಿಸಿದರು.  ಗುಡಿಕೈಗಾರಿಕೆಯಲ್ಲದೆ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ  ಜಾಗೃತಿ ಮೂಡಿಸುವುದು, ಬಾಟ್ಲಿಂಗ್ ತಂಪು ಪಾನಿಯದಿಂದ ಆರೋಗ್ಯದ ಮೇಲಾಗುತ್ತಿರುವ ಅನಾಹುತದ ಬಗ್ಗೆ ಎಚ್ಚರಿಸುವುದಲ್ಲದೆ, ಆರೋಗ್ಯಕರ ಪಾನೀಯ ತಯಾರಿಕೆ ಬಗ್ಗೆ , ತರಕಾರಿ ಬೇಳೆಕಾಳುಗಳಲ್ಲಿನ ಪೌಷ್ಟಿಕಾಂಶದ ಬಗ್ಗೆ, ವಸ್ತುಪ್ರದರ್ಶನದಲ್ಲಿ ಅರಿವು ಮೂಡಿಸಲಾಗುವುದು.
ಮಕ್ಕಳಿಗೆ ಪಠ್ಯಪುಸ್ತಕದಲ್ಲಿನ ವಿಷಗಳನ್ನು ಬೋಧಿಸುವುದರ ಜೊತೆ ಜೊತೆಗೆ ಇಂತಹ ಕೌಶಲ್ಯಯುತ ಚಟುವಟಿಕೆಗೆಳನ್ನು ತೊಡಗಿಸಿಕೊಳ್ಳುವುದರ ಮೂಲಕ ಅವರಲ್ಲಿ ಹೊಸಚೈತನ್ಯ ಬೆಳೆಯುವಂತೆ ಮಾಡಬಹುದಲ್ಲದೆ,  ಹೆಚ್ಚಿನ ಅಭ್ಯಾಸಕ್ಕೆ ಇಂತಹ ಸಹಪಠ್ಯ ಚಟುವಟಿಕೆಗಳು ಪೂರಕವಾಗಲಿವೆ. ಮಕ್ಕಳು ಸಹ ಈ ಕಾರ್ಯದಲ್ಲಿ ಆಸಕ್ತಿಯಿಂದ  ಪಾಲ್ಗೊಂಡಿದ್ದು  ಸೋಮವಾರ ನಡೆಯಲಿರುವ ವಸ್ತುಪ್ರದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.