ವರದಕ್ಷಿಣೆ ಕಿರುಕುಳಕ್ಕೆ ಮಗಳು ಬಲಿ: ತಂದೆ ಆರೋಪ, ಅಳಿಯ, ಅತ್ತೆ ಪೊಲೀಸರ ವಶಕ್ಕೆ
ಕುಣಿಗಲ್: ವರದಕ್ಷಿಣೆ ಕಿರುಕುಳ ನೀಡಿ ತನ್ನ ಮಗಳನ್ನು ಗಂಡ ಮತ್ತು ಅತ್ತೆ ಕೊಲೆ ಮಾಡಿದ್ದಾರೆಂದು ಮೃತಳ
ತಂದೆ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ವರದಿಯಾಗಿದೆ.
ಪಟ್ಟಣದ ಕೊಟೆ ಪ್ರದೇಶದಲ್ಲಿ ವಾಸವಾಗಿದ್ದ ನಟರಾಜು ಎಂಬುವವರ ಪತ್ನಿ ಅಂಬಿಕ, ಕಳೆದ ಬುಧವಾರದಂದು ಕೊಟೆ ಪ್ರದೇಶದಲ್ಲಿರುವ ಗಂಡನ ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಸುಟ್ಟಗಾಯಗಳಿಂದ ಬಳಲುತ್ತಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಕೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದರು.
ಘಟನೆಗೆ ಸಂಬಂಧಿಸಿದಂತೆ ಮೃತಳ ತಂದೆ ಶ್ರೀಶೈಲಮೂರ್ತಿ ಎಂಬುವವರು, ಗುರುವಾರ ತಡರಾತ್ರಿ
ಕುಣಿಗಲ್ ಠಾಣೆಗೆ, ಮಗಳು ಎಂ.ಎಸ್. ಅಂಬಿಕಾಳನ್ನು 2006ನೇ ಸಾಲಿನ ನವೆಂಬರ್ ತಿಂಗಳಲ್ಲಿ ಕುಣಿಗಲ್ ಟೌನ್ ವಾಸಿ ಸದಾಶಿವಯ್ಯ ಅವರ ಮಗ ನಟರಾಜ ಅವರಿಗೆ ಮದುವೆ ಮಾಡಿಕೊಟ್ಟಿದ್ದು, ಅಳಿಯ ನಟರಾಜನಿಗೆ ಕಂಡಕ್ಟರ್ ಹುದ್ದೆ ದೊರೆಯಿತು. ಅಳಿಯ ಮತ್ತು ಅವರ ತಾಯಿ ಸೇರಿಕೊಂಡು ನನ್ನ ಮಗನಿಗೆ ಸರ್ಕಾರಿ ಕೆಲಸ ಸಿಕ್ಕಿದೆ, ಮಗಳಿಗೆ ಇನ್ನೂ ಒಂದು ಲಕ್ಷ ವರದಕ್ಷಿಣೆಯನ್ನು ಕೊಡಬೇಕೆಂದು ಹಿಂಸೆ
ಕೊಡುತ್ತಿದ್ದರು. ಈ ಮಧ್ಯೆ ಮಗಳಿಗೆ ಇಬ್ಬರು ಮಕ್ಕಳಾದರೂ ವರದಕ್ಷಿಣೆ ಹಿಂಸೆ ನಿಲ್ಲಿಸಿರಲಿಲ್ಲ.
ದಿನಾಂಕ12-3-2014 ರಂದು ಸಂಜೆ ಮಗಳು ಅಂಬಿಕಳಿಗೆ ಅವರ ಅತ್ತೆ ಶಿವರುದ್ರಮ್ಮ ಹಾಗೂ ಆಕೆಯ ಗಂಡ ನಟರಾಜ ಇಬ್ಬರು ಸೇರಿಕೊಂಡು ಕುಣಿಗಲ್ನಲ್ಲಿರುವ ಅವರ ಮನೆಯಲ್ಲಿ ಕೂಡಿ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದು, ನಂತರ ಅಳಿಯ ನಟರಾಜ ಆಕೆಯನ್ನು ರಕ್ಷಿಸುವ ನಾಟಕವಾಡಿ ವಿಕ್ಟೋರಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದ ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಗಳು ಮೃತಪಟ್ಟಿರುತ್ತಾಳೆ. ಮಗಳನ್ನು ಬೆಂಕಿ ಹಚ್ಚಿ ಸಾಯಿಸಿರುವ ಅವಳ ಅತ್ತೆ ಶಿವರುದ್ರಮ್ಮ ಹಾಗೂ ಗಂಡ ನಟರಾಜನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ, ಅತ್ತೆ ಶಿವರುದ್ರಮ್ಮ, ಗಂಡ ನಟರಾಜುನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

