ತುಮಕೂರು

'ಶರಣರ ತತ್ವ ಸಮಾಜದಲ್ಲಿ ನೆಮ್ಮದಿ ಮೂಡಿಸುತ್ತದೆ'

Published On :

ಗುಬ್ಬಿ: ಕಾಯಕ ಹಾಗೂ ದಾಸೋಹ ಎಂಬ ಶರಣರ ತತ್ವಗಳು ಸಮಾಜದಲ್ಲಿ ನೆಮ್ಮದಿ ಮೂಡಿಸುತ್ತದೆ ಎಂದು ಬೆಟ್ಟದಹಳ್ಳಿ ಗವಿಮಠಾಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು. ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಪುರ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ದಾಸೋಹ ನಿಲಯ ಉದ್ಘಾಟಿಸಿ ಮಾತನಾಡಿದ ಅವರು ದ್ವೇಷ, ಅಸೂಯೆಗಳಿಂದ ಪತನದ ಹಾದಿ ತುಳಿದ ಸಮಾಜಕ್ಕೆ ಶಾಂತಿ ತರುವ ಧಾರ್ಮಿಕ ಆಚರಣೆಗಳು ಅನಿವಾರ್ಯವಾಗಿದೆ ಎಂದರು.
ತಾತ್ವಿಕ ಅರ್ಥ ಗಳಿಸಿದ ಧರ್ಮಾಚರಣೆಯಲ್ಲಿ ಎಲ್ಲಾ ಆಯಾಮಗಳಿಗೂ ಅರ್ಥಪೂರ್ಣ ಮಹತ್ವ ತುಂಬಲಾಗಿದೆ. ಧಾರ್ಮಿಕ ಸ್ಥಳಗಳು, ದೇವಾಲಯಗಳು, ಗುರುಪೀಠಗಳು ನೆಮ್ಮದಿಯ ತಾಣಗಳಾಗಿ ಬಿಂಬಿಸಿಕೊಂಡಿರುವ ಹಿನ್ನೆಲೆಯಲ್ಲಿ ಧಾರ್ಮಿಕ ನೆಲೆಗಟ್ಟು ಕಾರಣವಾಗಿದೆ. ಇಂದಿನ ಯುವ ಜನಾಂಗ ಆಚರಣೆಗೆ ಗೌರವ ನೀಡಬೇಕಿದೆ. ಹಿರಿಯರ ಮಾರ್ಗದರ್ಶನ ಪಡೆಯುವುದು ಅವಶ್ಯವಿದೆ. ನಮ್ಮ ಪರಂಪರೆ, ಸಂಸ್ಕತಿಯಲ್ಲಿ ಮನುಷ್ಯನ  ಬದುಕು ತಿದ್ದುವ ಮಹತ್ತರ ಅಂಶಗಳಿದೆ. ಅದರ ಪಾಲನೆಗೆ ಬೆಲೆ ನೀಡುವಂತೆ ಕರೆ ನೀಡಿದರು.
ದಾಸೋಹ ನಿಲಯ ನಿರ್ಮಾಣ ಸಮಿತಿ ಅಧ್ಯಕ್ಷ ಪಿ.ಬಿ. ಚಂದ್ರಶೇಖರಬಾಬು ಮಾತನಾಡಿ ಐತಿಹಾಸಿಕ  ಹಿನ್ನೆಲೆಯ ಕಲ್ಲೇಶ್ವರ ದೇವಾಲಯಕ್ಕೆ ಬರುವ ಭಕ್ತ ಸಮೂಹಕ್ಕೆ ದಾಸೋಹ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ 12 ಲಕ್ಷ ರು. ವೆಚ್ಚದ ದಾಸೋಹ ನಿಲಯವನ್ನು ಭಕ್ತರ ದೇಣಿಗೆಯಲ್ಲಿ ನಿರ್ಮಿಸಲಾಗಿದೆ. ಇದರ ಸದ್ಬಳಕೆಗೆ ಭಕ್ತರ ಸಹಕಾರ ಅಗತ್ಯವಿದೆ ಎಂದರು.
ತಾಪಂ ಇಒ ಪುಟ್ಟಸ್ವಾಮಿ, ಸಿಪಿಐ ಎಲ್. ಕುಮಾರಪ್ಪ, ಉಪ ತಹಸೀಲ್ದಾರ್ ನರಸಿಂಹಮೂರ್ತಿ, ಲೊಕೋಪಯೋಗಿ ಇಲಾಖೆ ಎಇಇ ತಿಮ್ಮೇಗೌಡ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸೋಮಶೇಖರ್, ಬೆಸ್ಕಾಂ ಎಇಇ ಕರಿಯಪ್ಪ, ಪಿಡಿಒ ದೇವಕಿ, ಎಚ್.ಸಿ.ಪ್ರಭಾಕರ್, ಗಿರೀಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.