ತುಮಕೂರು

ಧಾರ್ಮಿಕ ಕ್ಷೇತ್ರಗಳು ಜನಪರ ಕಾರ್ಯ ರೂಪಿಸಲಿ: ಸ್ವಾಮೀಜಿ

Published On :

ಶಿರಾ:  ಧಾರ್ಮಿಕ ಕ್ಷೇತ್ರಗಳು ಕೇವಲ ಉತ್ಸವಕ್ಕೆ ಸಿಮೀತವಾಗದೆ,   ಗ್ರಾಮೀಣ ಪ್ರದೇಶದ  ಜನರಿಗೆ  ಅನುಕೂಲವಾಗುವಂತ ಜನಪರ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಿದಾಗ   ಶ್ರೀಕ್ಷೇತ್ರ ಪ್ರಸಿದ್ಧಿಯಾಗಲಿದೆ ಎಂದು  ಶ್ರೀಗುರುಗುಂಡಬ್ರಹ್ಮೇಶ್ವರ ಸ್ವಾಮಿ  ಮಠದ ಪೀಠಾಧ್ಯಕ್ಷ  ಶ್ರೀನಂಜಾವಧೂತಸ್ವಾಮೀಜಿ ಹೇಳಿದರು.
ಅವರು ಶಿರಾ ತಾಲೂಕಿನ ತೊಗರುಕುಂಟೆ ಗ್ರಾಮದ ಶ್ರೀಅಮ್ಮಾಜಮ್ಮ ದೇವಿಯ 8ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದರು.  ಶ್ರೀಮಂತರು ಸಹ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಸರಳ ಮದುವೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂದರು.
 ಈ ಧಾರ್ಮಿಕ  ಕ್ಷೇತ್ರ ಜಿಲ್ಲೆಯ ಪ್ರವಾಸಿಗರ  ಗಮನ ಸೆಳೆದಿದ್ದು  ಅತಿ ವೇಗವಾಗಿ ಪ್ರಸಿದ್ಧಿ ಹೊಂದುತ್ತಿದೆ. ಆದ್ದರಿಂದ  ಪ್ರವಾಸೋದ್ಯಮ ಇಲಾಖೆ  ಈ ಸ್ಥಳದ ಬಗ್ಗೆ ಸರ್ಕಾರದ ಗಮನ ಸೆಳೆದು  ಯಾತ್ರಾಸ್ಥಳ ಮಾಡಿ  ಆಭಿವೃದ್ಧಿ ಪಡಿಸುವಂತೆ ಸರ್ಕಾರವನ್ನು ಅಗ್ರಹಿಸಿದರು.  ನಾದೂರು ಜಿಲ್ಲಾ ಪಂಚಾಯತಿ ಸದಸ್ಯ ಸಿ.ಆರ್. ಉಮೇಶ್ ಮಾತನಾಡಿ  ಪರಸ್ವರ ನಂಬಿಕೆಯಿಂದ ದಂಪತಿ ಜೀವನ ನಡೆಸಿ, ಇತರರಿಗೆ ಮಾದರಿಯಾಗಬೇಕೆಂದರು. ಸಾಮೂಹಿಕ ವಿವಾಹದಲ್ಲಿ 6 ಜೋಡಿ ಮದುವೆ ನಡೆಯಿತು. ಮೇಲುಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪ ಲೋಕೇಶ್, ನಗರಸಭೆ ಸದಸ್ಯ ಆರ್.ಉಗ್ರೇಶ್,  ಮುಖಂಡ ದೊಡ್ಡೇಗೌಡ ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.