'ವ್ಯಕ್ತಿತ್ವ ವಿಕಸನಕ್ಕೆ ಎನ್ಎಸ್ಎಸ್ ಸಹಕಾರಿ'
ಮಧುಗಿರಿ: ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಸೌಹಾರ್ದ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸೋವಾ ಯೋಜನಾ ಶಿಬಿರ ನೆರವಾಗುತ್ತದೆ ಎಂದು ಪ್ರೊ.ಎಲ್. ಮಣಿಗಯ್ಯ ತಿಳಿಸಿದರು.
ಮಧುಗಿರಿ ಟಿ.ವಿ.ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕಸಬಾ ಬಿಜವರ ಗ್ರಾಮದಲ್ಲಿ 7 ದಿನಗಳ ಕಾಲ ನಡೆದ ಎನ್ಎಸ್ಎಸ್ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಎನ್ಎಸ್ಎಸ್ ಶಿಬಿರದಲ್ಲಿ ಭಾಗವಹಿಸುವುದರಿಂದ ನಾಯಕತ್ವದ ಗುಣ ಬೆಳೆಸಿಕೊಳ್ಳುವ ಜೊತೆಗೆ ಗೌರವ ಮೂಡಿಸಿ ಸೇವಾ ಮನೋಭಾವ ವೃದ್ಧಿಯಾಗಲಿದೆ ಎಂದರು.
ಪ್ರಾಂಶುಪಾಲ ಪಿ. ಹನುಮಂತರಾಯ ಭಾರತವು ಕರ್ಮ ಭೂಮಿ, ನಾವು ಮಾಡುವ ಸೇವೆಗೆ ಅನುಗುಣವಾಗಿ ಫಲ ಲಬಿಸುತ್ತದೆ. ಶಿಲ್ಪ, ಕಿರಣ್ ಅವರನ್ನು ಅತ್ಯುತ್ತಮ ಶಿಬಿರಾರ್ಥಿಗಳು ಎಂದು ಘೋಷಿಸಿದರು. ಹಿರಿಯ ಸಾಹಿತಿ ಪ್ರೊ.ಮ.ಲ.ನ. ಮೂರ್ತಿ ಮಾತನಾಡಿ ಎನ್ಎಸ್ಎಸ್ ಎಲ್ಲರಿಗಾಗಿ ಎಂಬ ವಿಶ್ವ ಮಾನವ ಭಾವನೆ ಬೆಳಸಲು ಸಹಕಾರಿ ಎಂದರು.
ಸಂಪನ್ಮೂಲ ವ್ಯಕ್ತಿ ಪ್ರೊ.ಸಿ.ಕೃಷ್ಣಪ್ಪ ಕತ್ತಲಿಂದ ಬೆಳಕಿನಡಗೆ ಕೊಂಡೊಯ್ಯುವುದೇ ಎನ್ಎಸ್ಎಸ್ ಗುರಿ ಎಂದರು. ಶಿಬಿರಾಧಿಕಾರಿ ಬಿ.ಎಸ್.ರಾಜಣ್ಣ ಶಿಸ್ತು, ಸಂಯಮ ಯಶಸ್ಸಿಗೆ ಕಾರಣ ಎಂದರು.
ಶಿಬಿರಾರ್ಥಿಗಳಾದ ರಮ್ಯ, ಪ್ರಸನ್ನ, ಕಿರಣ್, ನವೀನ್ ಶಿಬಿರದ ಅನುಭವ ಹಂಚಿಕೊಂಡರು. ಆಡಳಿತಾಧಿಕಾರಿ ಬಿ.ಎಂ. ಪ್ರೇಮನಾಥ್ ಅಧ್ಯಕ್ಷತೆ ವಹಿಸಿದ್ದರು. ಬಿಇಓ ವೈ.ಎನ್.ರಾಮಕೃಷ್ಣಯ್ಯ, ಗ್ರಾಮದ ಬಸವರಾಜು,ನರಸಿಂಹಯ್ಯ, ಮೂರ್ತಿ ಇದ್ದರು. ರಂಗಮ್ಮ ಪ್ರಾರ್ಥಿಸಿ, ರಮ್ಯ ಸ್ವಾಗತಿಸಿ, ವೀಣಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

