'ಕೇಂದ್ರದಲ್ಲಿ ನಮಗೆ ಅಧಿಕಾರ ಕೊಡಿ'
ಶಿರಾ: ಕೇಂದ್ರದಲ್ಲಿ ನಮಗೆ ಅಧಿಕಾರ ಕೊಡಿ. ಸಿದ್ದರಾಮಯ್ಯ ಅವರನ್ನು ಶೀಘ್ರ ಮನೆಗೆ ಕಳುಹಿಸುತ್ತೇವೆ ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ, ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ. ಕೃಷ್ಣಪ್ಪ ನುಡಿದರು.
ಅವರು ನಗರದ ಶ್ರೀ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಮಾತನಾಡುತ್ತಿದ್ದರು.
ಎಚ್.ಡಿ.ದೇವೇಗೌಡರು ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಕಿಂಗ್ ಮೇಕರ್ ಆಗುತ್ತಾರೆ ಎಂದ ಅವರು, ಹಗರಣಗಳಿಲ್ಲದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ ವ್ಯಕ್ತಿ ಎಚ್.ಡಿ.ದೇವೇಗೌಡರು ಎಂದರು. ಬಿಜೆಪಿ ವಿರುದ್ಧ ಹರಿಹಾಯ್ದ ಎ.ಕೃಷ್ಣಪ್ಪ ಅವರು ರಾಜ್ಯದಲ್ಲಿ ಜನತೆ ಬಿಜೆಪಿ ಅಧಿಕಾರ ಕೊಟ್ಟರೆ ಅವರು ಆಡಳಿತ ನಡೆಸುವ ಬದಲು ಆಲಿಬಾಬ 40 ಜನ ಕಳ್ಳರು ಎಂಬಂತೆ ವರ್ತಿಸಿದರು. ಇವರ ಅಧಿಕಾರಾವಧಿಯಲ್ಲಿ ಬರಿ ಜೈಲು-ಬೇಲು ಅದರಲ್ಲೇ ಮುಗಿದು ಹೋಯಿತು ಆಡಳಿತ ಎಂದರು.
ಚಿತ್ರದುರ್ಗ ಕ್ಷೇತ್ರದಲ್ಲಿ ಗೂಳಿಹಟ್ಟಿ ಶೇಖರ್ ಅವರನ್ನು, ತುಮಕೂರಿನಲ್ಲಿ ನನ್ನನ್ನು ಬೆಂಬಲಿಸಿ ಆಶೀರ್ವದಿಸಿ ನಮಗೆ ಶಕ್ತಿ ಕೊಡಿ ಎಂದರು.
ಸಾಮರ್ಥ್ಯ ಕಳೆದುಕೊಂಡಿದೆ: ನಂತರ ಮಾತನಾಡಿದ ಮಾಜಿ ಸಚಿವ ಬಿ. ಸತ್ಯನಾರಾಯಣ ಅವರು ಕಾಂಗ್ರೆಸ್ ಸ್ವತಂತ್ರವಾಗಿ ಸರಕಾರ ರಚಿಸುವ ಸಾಮರ್ಥ್ಯ ಕಳೆದುಕೊಂಡ ಮೇಲೆ, ಹಲವು ಪಕ್ಷಗಳ ಮೈತ್ರಿ ಸರಕಾರ ದೇಶಕ್ಕೆ ಅನಿವಾರ್ಯವಾಗಿದೆ. ಇದಕ್ಕೆ ಪ್ರಾದೇಶಿಕ ಪಕ್ಷಗಳ ಬೆಂಬಲ ಬೇಕಿದ್ದು, ಪ್ರಾದೇಶಿಕ ಪಕ್ಷಗಳ ಪ್ರಬಲಗೊಳ್ಳುತ್ತಿವೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಕೆ.ಬಡೀರಣ್ಣ ಮಾತನಾಡಿ, ಉಸ್ತುವಾರಿ ಸಚಿವರ ನಿರ್ಲಕ್ಷ್ಯದಿಂದ ತಾಲೂಕು ಕಚೇರಿ, ತಾಲೂಕು ಪಂಚಾಯಿತಿ ಮುಂದೆ ಒಂದಲ್ಲೊಂದು ಧರಣಿ ನಡೆಯುವಂತಾಗಿದ್ದು, ಸಚಿವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಮತ ಯಾಚಿಸುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದರು.
ಜಿಲ್ಲಾ ಯುವಜನತಾದಳ ಅಧ್ಯಕ್ಷ ಬೆಳ್ಳಿಲೋಕೇಶ್ ಮಾತನಾಡಿ ಯುವಕರು ಮೊದಲು ಸೇವಕರಾಗಿ ಪಕ್ಷದ ಗೆಲವಿಗೆ ದುಡಿಯುವುದನ್ನು ಕಲಿಯಬೇಕು. ಮುಂದೆ ಮುಖಂಡರಾಗುವ ಅವಕಾಶ ದೊರೆಯಲಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು. ಜಿ.ಪಂ.ಸದಸ್ಯ ಸಿ.ಆರ್.ಉಮೇಶ್, ತುಮಕೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಎಸ್.ಆರ್.ಗೌಡ, ಗೋವಿಂದರಾಜ್ ಮಾತನಾಡಿದರು. ಮುಖಂಡರಾದ ಪ್ರಕಾಶ ಗೌಡ, ಲಲಿತಮ್ಮ, ಚಂಪಕಮಾಲಾ, ಮುದಿಮಡು ರಂಗಶಾಮಣ್ಣ, ನಗರಸಭೆ ಸದಸ್ಯ ಉಗ್ರೇಶ್, ವಾಜಿದ್ ಅಹ್ಮದ್, ರಾಮು, ತಿಪ್ಪೇಸ್ವಾಮಿ, ಅರೇಹಳ್ಳಿ ಕಾಮಣ್ಣ, ಸುಧಾಕರಗೌಡ, ನಗರಸಭಾ ಸದಸ್ಯರಾದ ಪುಟ್ಟರಾಜು, ಅಂಜಿನಪ್ಪ, ಮಂಜುನಾಥ್, ರೇಣುಕಮ್ಮ, ತಾ.ಪಂ.ಅಧ್ಯಕ್ಷೆ ತಿಮ್ಮರಾಜಮ್ಮ, ಉಪಾಧ್ಯಕ್ಷ ಉದಯಶಂಕರ್, ಸದಸ್ಯರಾದ ಟಿ.ವಿನಯ್, ವಕ್ತಾರ ಬಾಂಬೆ ರಾಜಣ್ಣ, ಸತ್ಯಪ್ರಕಾಶ್, ರಾಘವೇಂದ್ರ, ಶ್ರೀನಿವಾಸ್ ಮೊದಲಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

