ಎ. ಕೃಷ್ಣಪ್ಪ ಗೆಲವು ಶತಃಸಿದ್ಧ
ತುರುವೇಕೆರೆ: ಜಿಲ್ಲೆಯ ಲೋಕಸಭಾ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜ್ಯ
ಜೆಡಿಎಸ್ ಅಧ್ಯಕ್ಷ ಎ.ಕೃಷ್ಣಪ್ಪನವರ ಗೆಲವು ಶತಸಿಧ್ಧ ಎಂದು ಸ್ಥಳೀಯ ಶಾಸಕ ಎಂ.ಟಿ. ಕೃಷ್ಣಪ್ಪ ಭವಿಷ್ಯ ನುಡಿದಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ. ಕಾಂಗ್ರೆಸ್ ನಾಲ್ಕು ಕಡೆ ಠೇವಣಿಯನ್ನೂ ಸಹ ಕಳೆದುಕೊಂಡಿದೆ. ಇನ್ನು ಬಿಜೆಪಿಯದು ಶೋಚನೀಯ ಸ್ಥಿತಿ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದ ಕರ್ಮಕಾಂಡಗಳನ್ನು ಜನತೆ ಮರೆತಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗದ ಯಶಸ್ಸಿನಿಂದ ಪುನಃ ಪ್ರಧಾನಿ ಮಂತ್ರಿ ಆದರೂ ಆಶ್ಚರ್ಯಪಡಬೇಕಿಲ್ಲ. ರಾಜ್ಯದಲ್ಲಿ ಕನಿಷ್ಠ 12 ಸ್ಥಾನಗಳಲ್ಲಿ ಜೆಡಿಎಸ್ ಗೆಲವು ಸಾಧಿಸಲಿದೆ ಎಂದು ಕೃಷ್ಣಪ್ಪ ಹೇಳಿದರು.
ಕ್ಷೇತ್ರದಲ್ಲಿ ಜೆಡಿಎಸ್ ಲೀಡ್: ಹಾಲಿ ಸಂಸದರಾಗಿರುವ ಜಿ.ಎಸ್.ಬಸವರಾಜು ಅವರು ಕ್ಷೇತ್ರದಲ್ಲಿ ಯಾವುದೇ ಅಭಿವೃಧ್ಧಿ ಮಾಡಿಲ್ಲ. ಅವರ ಸೇವೆ ಶೂನ್ಯ. ಹಾಗಾಗಿ ಮತದಾರ ಪ್ರಭು ಜಿ ಎಸ್.ಬಸವರಾಜು ಅವರನ್ನು ಬೆಂಬಲಿಸುವುದಿಲ್ಲ. ಕಾಂಗ್ರೆಸ್ ಬಗ್ಗೆ ಜನರಲ್ಲಿ ಭ್ರಮನಿರಸನವಾಗಿರುವುದರಿಂದ ಮುದ್ದಹನುಮೇಗೌಡರಿಗೂ ಜನರ ಬೆಂಬಲ ದೊರೆಯದು. ಎಚ್.ಡಿ.ದೇವೇಗೌಡರು ಹಿಂದುಳಿದ ವರ್ಗಗಳ ಜನಾಂಗಕ್ಕೆ ರಾಜಕೀಯವಾಗಿ ಬೆಂಬಲ ನೀಡಬೇಕು ಎಂಬ ಕಾರಣಕ್ಕೆ ಜಿಲ್ಲೆಯಿಂದ ಎ.ಕೃಷ್ಣಪ್ಪನವರಿಗೆ ನಮ್ಮ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಎ.ಕೃಷ್ಣಪ್ಪ ರಾಜ್ಯದ ಜೆಡಿಎಸ್ನ ಅಧ್ಯಕ್ಷರಾಗಿರುವುದರಿಂದ ಅವರು ಹೊರಗಿನವರು ಎಂಬ ಮಾತೇ ಬರದು ಎಂದರು.
ಪ್ರಧಾನಿ ಹುದ್ದೆ ಕನಸು ಕಾಣುತ್ತಿರುವ ಮೋದಿ
ತಾವು ಪ್ರಧಾನ ಮಂತ್ರಿ ಆಗಬೇಕೆಂದು ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿರುವ ನರೇಂದ್ರ ಮೋದಿ ತಮ್ಮ ಪಕ್ಷದ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಜಸ್ವಂತ್ ಸಿಂಗ್ ಹಾಗೂ ಇತರೆ ಪ್ರಮುಖ ನಾಯಕರನ್ನು ಮೂಲೆ ಗುಂಪು ಮಾಡುತ್ತಿದ್ದಾರೆ. ಅಲ್ಲದೆ ತಾವೊಬ್ಬ ಸರ್ವಾಧಿಕಾರಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಮೋದಿ ಪ್ರಧಾನಿ ಆಗುವುದು ಕನಸಿನ ಮಾತು. ಆಕಸ್ಮಾತ್ ಆದರೆ ಅದು ದೇಶದ ದುರಂತ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಬಣ್ಣಿಸಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ. ಮಹಲಿಂಗಯ್ಯ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಸಂಪಿಗೆ ರೇಣುಕಾರಾಧ್ಯ, ಬೀಚನಹಳ್ಳಿ ರಾಮಣ್ಣ, ಗುತ್ತಿಗೆದಾರ ತ್ಯಾಗರಾಜ್, ಬೀಚನಹಳ್ಳಿ ಬಾಬು ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

