ತುಮಕೂರು

ಪೊಲೀಸ್ ಠಾಣೆಯಲ್ಲಿ ದಲಿತ ಸಮಿತಿ ಸಭೆ

Published On :

ಚಿಕ್ಕನಾಯಕನಹಳ್ಳಿ: ಕೆಲವೊಮ್ಮ ನಾವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಸಿಲುಕಿ, ಅಸಹಾಯಕರಾಗುತ್ತೇವೆ ಎಂದು ಚಿ.ನಾ. ಹಳ್ಳಿ ಠಾಣಾಧಿಕಾರಿ ಮಹಾಲಕ್ಷ್ಮಮ್ಮ ಹೇಳಿದರು.
ಬುಧವಾರ ತಮ್ಮ ಠಾಣೆಯಲ್ಲಿ ಕರೆದಿದ್ದ ದಲಿತ ಸಮಿತಿ ಸಭೆಯಲ್ಲಿ ಮಾತನಾಡಿದರು. ಇದಕ್ಕು ಮುನ್ನ ದಲಿತ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ, ಸಿಡ್ಲಯ್ಯ, ದೇವರಾಜು, ಶಂಕರಯ್ಯ ಮತ್ತಿತರರು ಪಟ್ಟಣದಲ್ಲಿ ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳನ್ನು ಬೆನ್ನತ್ತುವ ಪೋಲಿಗಳ ಕಾಟ ಹೆಚ್ಚಾಗಿದೆ. ಇಂತಹವರನ್ನು ನಿಯಂತ್ರಿಸಲು ಪೊಲೀಸ್ ಗಸ್ತು ಹೆಚ್ಚಿಸಬೇಕಾಗಿದೆ. ಖಾಸಗಿ ಬಸ್‌ನಿಲ್ದಾಣದಲ್ಲಿ ಹಳ್ಳಿಗಳಿಂದ ಬಂದ ಜನರಿಗೆ ಕೂರಲು ಸ್ಥಳ ಇಲ್ಲದಂತಾಗಿದೆ. ಅಲ್ಲಿ ಅಂಗಡಿ ಇಟ್ಟಿರುವವರನ್ನು ತೆರವುಗೊಳಿಸಲು ಪುರಸಭೆಗೆ ದೂರುನೀಡಿದರೆ ಪ್ರಯೋಜನವಾಗಿಲ್ಲ. ಆದ್ದರಿಂದ ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದರು.ಸಭೆಯಲ್ಲಿ ಬಂದ ದೂರುಗಳ ಬಗ್ಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಬಹುಮುಖ್ಯ. ಅಂಗಡಿಗಳನ್ನು ತೆರವುಗೊಳಿಸಲು ಕಾರ್ಯಪ್ರವೃತ್ತರಾದರೆ, ಪ್ರಭಾವಿಗಳು ತಡೆಯೊಡ್ಡುತ್ತಾರೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಟ್ಟರೆ ಕಾನೂನು ರಕ್ಷಣೆ ಮಾಡಲು ತೊಂದರೆಯಿಲ್ಲವೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.