ತಪ್ಪು ಮಾಡಿದ್ದೇನೆ ಕ್ಷಮಿಸಿ
ಚಿಕ್ಕನಾಯಕನಹಳ್ಳಿ: ಅರಿಯದೆ ಮಾಡಿದ ತಪ್ಪಿನಿಂದ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ ದಯವಿಟ್ಟು ಕ್ಷಮಿಸಿ, ಇನ್ನು ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಪಕ್ಷದ ಸಭೆಯಲ್ಲಿ ಕ್ಷಮೆಯಾಚಿಸಿದರು.
ಮಾ.25ರಂದು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಸ್ಪೋಟಗೊಂಡ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದ ಅವರು ಕ್ಷಮೆಯಾಚಿಸಿದರು. ನನಗೀಗ 72 ವರ್ಷ ವಯೋವಾನದಿಂದಾಗಿ ಕಾರ್ಯಕರ್ತರನ್ನು ಗುರ್ತಿಸಲು ಸಾಧ್ಯವಾಗದೆ ನನ್ನಿಂದ ತಪ್ಪಾಗಿದೆ. ಅದಕ್ಕಾಗಿ ನಿಮ್ಮ ಮುಂದೆ ನಿಂತು ಮೋದಿಗಾಗಿ ಕ್ಷಮೆ ಕೇಳುತ್ತಿದ್ದೇನೆ. ನಂಬಿದವರನ್ನು ಕೈಬಿಡಬಾರದೆಂಬ ಕಾರಣಕ್ಕೆ ಪಕ್ಷ ತೊರೆದ ಯಡಿಯೂರಪ್ಪನವರ ಹಿಂದೆ ನಾನು ಹೋಗಬೇಕಾಯಿತು. ಆದರೂ ತಾಲೂಕಿಗೆ 102 ಕೋಟಿ ಕುಡಿಯುವ ನೀರಿನ ಯೋಜನೆ ಮಂಜೂರಾತಿಗಾಗಿ ಶ್ರಮಿಸಿದ್ದೇನೆ. ಕಾರ್ಯಕರ್ತರು ಹಳೆಯದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕಾಗಿದೆ. ದೇಶಕ್ಕೆ ಇಂದು ಮೋದಿ ಪ್ರಸ್ತುತ,1 0 ವರ್ಷಗಳ ಕಾಂಗ್ರೆಸ್ ದುರಾಡಳಿತದಿಂದ ದೇಶ ದಿವಾಳಿಯಾಗಿದೆ. ಗುಜರಾತ್ ಅಭಿವೃದ್ಧಿ ದೇಶಕ್ಕೇ ಮಾದರಿಯಾಗಿದೆ. ಮೋದಿಯವರ ನಾಯಕತ್ವದಲ್ಲಿ ದೇಶವನ್ನು ಜಗತ್ತಿನ ನಂಬರ್ ಒನ್ ರಾಷ್ಟ್ರವನ್ನಾಗಿ ಮಾಡುವ ಶಕ್ತಿ ಅವರಿಗಿದೆ. ನಾನು ನೂರಾರು ತಪ್ಪು ಮಾಡಿದ್ದರು ಮೋದಿಗಾಗಿ ಅವುಗಳನ್ನು ಮನ್ನಿಸಿ ನನ್ನನ್ನು ಕ್ಷಮಿಸಿ ಎಂದರು. ಜಿಲ್ಲಾಧ್ಯಕ್ಷ ಬಿ. ಸುರೇಶ್ಗೌಡ, ಮಾಜಿಶಾಕ ಕೆ.ಎಸ್. ಕಿರಣ್ಕುಮಾರ್, ಬಿ.ಸಿ. ನಾಗೇಶ್, ಎಂ.ಬಿ. ನಂದೀಶ್, ಲೋಕೇಶ್ವರ್, ಎಚ್.ಬಿ. ಪಂಚಾಕ್ಷರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

