ಚಾಮುಂಡಿ ಹಬ್ಬ ಆಚರಿಸದಂತೆ ಆದೇಶ
ಶ್ರೀರಂಗಪಟ್ಟಣ: ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಕೋಮುಗಲಭೆ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದಂದು ನಡೆಯುತ್ತಿದ್ದ ಚಾಮುಂಡೇಶ್ವರಿ ಹಬ್ಬವನ್ನು ಆಚರಿಸದಂತೆ ಮಾ.30 ರಿಂದ ಏಪ್ರಿಲ್ 1ರ ತನಕ ಮೂರು ದಿನಗಳ ಕಾಲ 144 ಕಾಯಿದೆಯ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಮಲ್ಲಿಕಾರ್ಜುನ ಆದೇಶ ಹೊರಡಿಸಿದ್ದಾರೆ.
2004ರಲ್ಲಿ ಯುಗಾದಿ ಹಬ್ಬದ ದಿನ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ವಿಚಾರದಲ್ಲಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣಿಯರಿಗೂ ಗಲಭೆ ನಡೆದು ಎರಡು ಕಡೆ ಜನಾಂಗದವರು ಬಡಿದಾಡಿಕೊಂಡು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನಿಂದ ಗಲಾಟೆ ತಡೆಗಟ್ಟಲು ಪೊಲೀಸರು ಹಬ್ಬವನ್ನು ಗ್ರಾಮದಲ್ಲಿ ಆಚರಿಸದಂತೆ ಶಾಂತಿ ವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಗೊಳಿಸಿದ್ದರು.
ಮತ್ತೆ 2008 ರಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಎರಡು ಕೋಮಿನ ಜನರು ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವಂತೆ ತಿಳಿಸಿ ಮತ್ತೆ ಹಬ್ಬವನ್ನು ಚಾಲನೆಗೊಳಿಸಿದರಾದರೂ, ಮತ್ತೆ ಗ್ರಾಮಸ್ಥರು ಹಳೆಯದನ್ನೇ ಕ್ಯಾತೆ ತೆಗೆದು ಎರಡೂ ಕೋಮಿನವರಿಗೂ ಗಲಾಟೆ ನಡೆದಿದ್ದರಿಂದ ಪೊಲೀಸರ ವರದಿಯ ಮೇರೆಗೆ ಗ್ರಾಮದಲ್ಲಿ ಅಂದಿನಿಂದ ಹಬ್ಬ ಆಚರಿಸಿದಂತೆ ತಹಶೀಲ್ದಾರ್, ಪರಿಸ್ಥಿತಿ ಪರಿಗಣಿಸಿ ಈ ಹಬ್ಬ ಆಚರಿಸಿದಂತೆ ನಿಷೇಧಾಜ್ಞೆ ಹೊರಡಿಸಿದ್ದರು.
ಪ್ರತಿ ವರ್ಷದಂತೆ ಈ ಬಾರಿಯೂ ಈ ಹಬ್ಬದಲ್ಲಿ ಕೋಮುಗಲಬೆ ಉಂಟಾಗಬಾರದು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಗ್ರಾಮದ ಸುತ್ತ 2 ಕಿಮೀ ವ್ಯಾಪ್ತಿಯ ವರೆಗೆ 144 ಕಾಯ್ದೆಯನ್ನು ಜಾರಿಗೊಳಿಸಿ ತಹಶೀಲ್ದಾರ್ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಮಾರಮ್ಮನ ವಿಗ್ರಹ ಪ್ರತಿಷ್ಠಾಪನೆ
ಶ್ರೀರಂಗಪಟ್ಟಣ: ತಾಲೂಕಿನ ಹಂಗರಹಳ್ಳಿ ಗ್ರಾಮದಲ್ಲಿ ಶ್ರೀ ಮಾರಮ್ಮನ ವಿಗ್ರಹ ಪ್ರತಿಷ್ಠಾಪನಾ ಪೂಜಾ ಕೈಂಕರ್ಯ ನಡೆಯಿತು. ನೂತನವಾಗಿ ನಿರ್ಮಿಸಿರುವ ದೇವಾಲಯದ ಆವರಣದಲ್ಲಿ ಬೆಂಗಳೂರಿನ ಖ್ಯಾತ ಅರ್ಚಕ ರಾಜೇಶ್ ತಂಡದಿಂದ ಗಣಪತಿಹೋಮ, ನವಗ್ರಹ ಪೂಜೆ, ಲಕ್ಷ್ಮೀ ಪೂಜೆ, ಮಂಗಳ ಹೋಮ, ಕಳಸಾ ಹೋಮ, ಮಹಾಪುಣ್ಯಾಹಿತಿ ಪೂಜೆ, ಅಗ್ನಿ ಹೋಮ ಸೇರಿದಂತೆ ಇನ್ನಿತರೆ ಪೂಜಾ ಕೈಂಕರ್ಯಗಳು ಜರುಗಿದವು.
ಇಲ್ಲಿನ ಕಾವೇರಿ ನದಿಯಲ್ಲಿ ಕಳಸದಿಂದ ಗಂಗೆಯನ್ನು ಹೊತ್ತು ಮೆರವಣಿಗೆ ನಡೆಸಿ ತಂದ ಗ್ರಾಮಸ್ಥರು, ದೇವಿಗೆ ತೆಂಬಿಟ್ಟಿನಾರತಿ ಬೆಳಗುವ ಮೂಲಕ ದೇವಿ ಕೃಪೆಗೆ ಪಾತ್ರರಾದರು. ಮೆರವಣಿಗೆ ವೇಳೆ ಸ್ಥಳೀಯ ಪೂಜಾ ಕುಣಿತ ತಂಡದ ಗ್ರಾಮದ ಹುಡುರು ತಮಟೆಯ ತಾಳಕ್ಕೆ ಹೆಜ್ಜೆ ಹಾಕುವ ಮೂಲಕ ಗೆಜ್ಜೆ ಗಮನ ಸೆಳೆಯಿತು.
ದೊಡ್ಡಪಾಳ್ಯ, ಚಿಕ್ಕಪಾಳ್ಯ, ಮಹದೇವಪುರ, ಸೇರಿದಂತೆ ತಾಲೂಕಿನ ಇತರೆ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಧನ್ಯರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

