ತುಮಕೂರು

ಪೊಲೀಸ್ ಹುದ್ದೆಗೆ ಉಚಿತ ತರಬೇತಿ

Published On :

ಚಿಕ್ಕನಾಯಕನಹಳ್ಳಿ: ಖಾಲಿಯಿರುವ ಪೊಲೀಸ್ ಹುದ್ದೆಗಳನ್ನು ತುಂಬಲು ರಾಜ್ಯ ಸರ್ಕಾರ ಅರ್ಜಿ ಕರೆದಿದ್ದು, ಅರ್ಜಿ ಸಲ್ಲಿಸುವ ಯುವಕರಿಗೆ ಪೂರ್ವ ತರಬೇತಿ ನೀಡಲಾಗುವುದು ಎಂದು ಜನತಾ ಯುವ ಕ್ರೀಡಾ ಸಂಘ ತಿಳಿಸಿದೆ. ಈ ಸಂಬಂಧ ಹೇಳಿಕೆ ನೀಡಿರುವ ದೈಹಿಕ ಶಿಕ್ಷಕ ಕೆ.ಎಸ್. ಚಂದ್ರಮೌಳಿ, ತರಬೇತಿ ಅವಧಿ ಒಂದು ತಿಂಗಳಾಗಿದ್ದು, ಆಸಕ್ತರು ಶೆಟ್ಟೀಕೆರೆ ಜನತಾ ಪ್ರೌಢಶಾಲೆ ಆವರಣದಲ್ಲಿ ನಡೆಯುವ ತರಬೇತಿ ಶಿಬಿರದಲ್ಲಿ ಭಾಗವಹಿಸಬಹುದು. ಶಿಬಿರದಲ್ಲಿ ದೈಹಿಕ ಸಾಮರ್ಥ್ಯ ತರಬೇತಿ ನೀಡಲಾಗುವುದು. ವಿವರಗಳಿಗಾಗಿ ಫೊ-8453318842 ಮತ್ತು 9901115814 ಸಂಪರ್ಕಿಸಬಹುದು.





ಇಂದು-ನಾಳೆ ಅವಳ
ಅರಿವು ಕಾರ್ಯಕ್ರಮ
ತುಮಕೂರು: ತುಮಕೂರು ವಿವಿ ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹೆಣ್ತನದ ಅರಿವಿಗೆ ಕಣ್ತೆರೆಸುವ ಅವಳ ಅರಿವು ಕಾರ್ಯಕ್ರಮವನ್ನು ಮಾ.28-29 ರಂದು ಹಮ್ಮಿಕೊಳ್ಳಲಾಗಿದೆ. ಮಾ. 28 ರ ಬೆಳಗ್ಗೆ 10.30 ಕ್ಕೆ ಏರ್ಪಡಿಸಿರುವ ಕಾರ್ಯಕ್ರಮವನ್ನು ತುಮಕೂರು ವಿವಿ ಕುಲಪತಿ ಡಾ.ಎ.ಎಚ್. ರಾಜಾಸಾಬ್ ಉದ್ಘಾಟಿಸಲಿದ್ದಾರೆ. ರಾಜ್ಯದ ಹೆಸರಾಂತ ಲೇಖಕಿ, ವಕೀಲೆ ಬಾನುಮುಷ್ತಾಕ್ ಸಂವಾದದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿ ಕಲಾ ಕಾಲೇಜಿನ ವಿದ್ಯಾರ್ಥಿಗಳಿಂದ ವಿಪ್ಲವ ನಾಟಕ ಏರ್ಪಾಟಾಗಿದೆ. ಲಲಿತಾ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಭಾಗೀರಥಿ ನಾಟಕ ನಡೆಯಲಿದೆ. ವಿವಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಂದ ಕಂಸಾಳೆ ಜಾನಪದ ನೃತ್ಯ ನಡೆಯಲಿದೆ. ಮಾ. 29 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ರಂಗಕರ್ಮಿ, ಕವಯತ್ರಿ ದು. ಸರಸ್ವತಿ, ಕವಯತ್ರಿ ಲಲಿತಾ ಸಿದ್ದಬಸವಯ್ಯ ಪಾಲ್ಗೊಳ್ಳಲ್ಲಿದ್ದಾರೆ. ತುಮಕೂರು ವಿವಿ ವಿದ್ಯಾರ್ಥಿನಿಯರಿಂದ ಕಾವ್ಯಮೇಳ ಏರ್ಪಾಟಾಗಿದೆ. ಇದೇ ಸಂದರ್ಭದಲ್ಲಿ ತುಮಕೂರು ವಿವಿ ಕಲಾ ವಿಭಾಗದ ವಿದ್ಯಾರ್ಥಿಗಳ ಕಲಾಪ್ರದರ್ಶನ ವೀಕ್ಷಿಸಬಹುದಾಗಿದೆ.
ಇಂದು ಸ್ವಯಂಪ್ರೇರಿತ
ರಕ್ತದಾನ ಶಿಬಿರ
ತುಮಕೂರಿನ ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಮಾ. 28 ರಂದು ಬೆಳಗ್ಗೆ 10 ಗಂಟೆಗೆ ಕಾಲೇಜಿನ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಶಿಬಿರದ ಉದ್ಘಾಟನೆಯನ್ನು ಡಾ.ಕೆ.ಜಿ. ರಾಘವೇಂದ್ರ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಚ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ. ಸಂಜಯ್ ನಾಯಕ್ ಹಾಗೂ ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ಸಲಹಾ ಸಮಿತಿ ಸದಸ್ಯರಾದ ಶಾಮಸುಂದರ ಆಗಮಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ನಾಳೆ ಹೆಬ್ಬೂರಿನಲ್ಲಿ
ಸಂಪೂರ್ಣ ರಾಮಾಯಣ
ತುಮಕೂರು ಗ್ರಾಮಾಂತರದ ಹೆಬ್ಬೂರು ಹೋಬಳಿಯ ಆಂಜನೇಯಸ್ವಾಮಿ ಹಾಗೂ ಕಂಬದ ನರಸಿಂಹಸ್ವಾಮಿ ವಿಮಾನ ಗೋಪುರ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕ ಪೂಜಾ ಮಹೋತ್ಸವದ ಪ್ರಯುಕ್ತ ಮಾ. 29 ರಂದು ರಾತ್ರಿ 9 ಗಂಟೆಗೆ ಸಂಪೂರ್ಣ ರಾಮಾಯಣ ನಾಟಕ ಏರ್ಪಡಿಸಲಾಗಿದೆ. ನಾಟಕಕ್ಕೂ ಮುನ್ನ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಕೋಡಿ ಮುದ್ದನಹಳ್ಳಿಪಾಳ್ಯದ ಉಮೇಶ್ಗೌಡ, ರಾಜಾಪುರದ ತಿಮ್ಮಪ್ಪ, ಸಂಪತ್ ರಾಮಚಂದ್ರಯ್ಯ ಹಸುರವಳ್ಳಿ ನಾರನಹಳ್ಳಿ ಶ್ರೀನಿವಾಸಮೂರ್ತಿ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಪಟೇಲ್ ತಿಮ್ಮೇಗೌಡರು ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.