ಬಿಜೆಪಿ ಗೆದ್ದರೆ ಏತ ನೀರಾವರಿ ಜಾರಿ
ಚೇಳೂರು: ರೈತರಿಗೆ ನೀರಾವರಿ ಯೋಜನೆಗಳು ಮುಖ್ಯವಾಗಿ ಬೇಕು ನಾನು ಸಂಸದನಾದ ಮೇಲೆ ಚೇಳೂರು ಮತ್ತು ಹಾಗಲವಾಡಿ ಭಾಗದ ಕೆರೆಗಳಿಗೆ ಹೇಮಾವತಿ ನೀರನ್ನು ಏತ ನೀರಾವರಿ ಮೂಲಕ ಜಾರಿಗೆ ತರಲು ಪ್ರತಿಯೊಂದು ಹಂತದಲ್ಲಿಯು ಹೋರಾಟ ಮಾಡಿದ್ದೇನೆ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಜಿ.ಎಸ್. ಬಸವರಾಜು ತಿಳಿಸಿದರು.
ಚೇಳೂರು ಹೋಬಳಿಯ ಜಾಲಗುಣಿಪಾಳ್ಯದ ಶ್ರೀ ಬಸವೇಶ್ವರ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಈ ಭಾಗದಲ್ಲಿ ರೈತರಿಗೆ ನೀರಿನ ಭವಣೆ ಇದ್ದು ಹಲವಾರು ವರ್ಷಗಳಿಂದ ರೈತರು ಆತಂಕದಲ್ಲಿದ್ದರೂ ಪದೇ ಪದೇ ನೀರಿನ ಬಗ್ಗೆ ಈ ಭಾಗದ ರೈತರು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದರು ನಾನು ಏನಾದರೂ ಮಾಡಿ ರೈತರ ಬವಣೆ ನೀಗಿಸಲು ಚೇಳೂರು ಮತ್ತು ಕೊಡಿಯಾಲ ಹಾಗೂ ಹಾಗಲವಾಡಿ ಭಾಗದ ಕೆರೆಗಳಿಗೆ ಹೇಮಾವತಿ ನಾಲೆಯಿಂದ ಏತ ನೀರಾವರಿ ಮಾಡಿಸಲು ನೀರಿನ ಅಲೋಕೇಶನ್ ಪಡೆದು ಹಣ ಬಿಡುಗಡೆ ಮಾಡಿಸಿ ಟೆಂಡರ್ ಪ್ರಕ್ರಿಯೆ ಚಾಲನೆಗೊಂಡು ಮೇ 15 ರಂದು ಟೆಂಡರ್ ಫಾರಂನ್ನು ಓಪನ್ ಮಾಡುವ ಹಂತದವರೆಗೆ ನಾನು ಹೋರಾಟ ಮಾಡಿದ್ದೇನೆ ಎಂದರು.
ನರೇಂದ್ರ ಮೋದಿಯವರು ಗುಜರಾತ್ನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಯುವಕರು ಮೋದಿಯ ಪರವಾಗಿದ್ದು ದೇಶದಲ್ಲಿ ಮೋದಿಯ ಅಲೆ ಎದ್ದಿದ್ದು ಇದರ ಜೊತೆಗೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲೇಬೇಕೆಂದು ತಮ್ಮಗಳ ಸಹಕಾರ ಬೇಕು, ಅಟಲ್ ಬಿಹಾರಿ ವಾಜಪೇಯಿರವರ ಕನಸಿನ ಕೂಸಾದ ನದಿ ಜೋಡಣೆ ಹಾಗಬೇಕು. ಅಂತಹ ಯೋಜನೆಗಳನ್ನು ಜಾರಿಗೆ ತರಬೇಕಾದರೆ ಪ್ರತಿಯೊಬ್ಬ ಭಾರತೀಯ ಪ್ರಜೆಯು ಮೋದಿಯವರ ಪರವಾಗಿ ಬಿಜೆಪಿಗೆ ಮತ ಹಾಕಿ ಗೆಲುವಿಗೆ ಸಹಕರಿಸಬೇಕು ಎಂದರು.
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾಡಿರುವ ಜನಪರ ಯೋಜನೆಗಳು ನಮಗೆ ಶ್ರೀ ರಕ್ಷೆಯಾಗಲಿವೆ ಈಗಾಗಲೇ ಎಲ್ಲಾ ಬಿ.ಜೆ.ಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ಬಿ.ಜೆ.ಪಿ ಗೆಲುವಿಗೆ ಪಣತೊಟ್ಟಿದ್ದಾರೆ ಎಂದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್.ಬಿ. ನಂದೀಶ್ ಮಾತನಾಡಿ, ನಮ್ಮ ಪಕ್ಷದ ವತಿಯಿಂದ ಪ್ರತಿ ಬೂತ್ ಮಟ್ಟದಲ್ಲಿಯು ಕಾರ್ಯಕರ್ತರನ್ನು ಸಧೃಢಗೊಳಿಸಿದ್ದೇವೆ. ಮತಪತ್ರ ಪರಿಷ್ಕರಣೆಯಿಂದ ಹಿಡಿದು ಯುವ ಮತದಾರರನ್ನು ಸೇರಿಸಿಕೊಳ್ಳುವಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಶ್ರಮ ಪಟ್ಟಿದ್ದಾರೆ. ದೇಶದಲ್ಲಿ ಯುವಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನರೇಂದ್ರ ಮೋದಿಯವರನ್ನೆ ಪ್ರಧಾನಿ ಮಾಡುವ ಮನಸ್ಸು ಮಾಡಿದ್ದಾರೆ ಅಂತಹ ಮತದಾರರಿಂದ ಬಿ.ಜೆ.ಪಿ.ಗೆ ಹೆಚ್ಚಿನ ಶಕ್ತಿ ಬರಲಿದೆ ಎಂದರು.
ಜಿಪಂ ಸದಸ್ಯ ಚಂದ್ರಶೇಖರ್ ಬಾಬು ಮಾತನಾಡಿದರು. ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಎಚ್.ಟಿ. ಭೈರಪ್ಪ, ಸಾಗರನಹಳ್ಳಿ ವಿಜಯ್ ಕುಮಾರ್, ನಂಜೇಗೌಡ, ಬೆಟ್ಟಸ್ವಾಮಿ, ನಟರಾಜು, ನಲ್ಲೂರು ಗ್ರಾಪಂ ಅಧ್ಯಕ್ಷ ಬಸವರಾಜು, ಚಿಕ್ಕಮ್ಮ, ಸಿರಿಯಪ್ಪ ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ನಾಗರತ್ನಮ್ಮ, ನಲ್ಲೂರು ಹಟ್ಟಿ ಮಧು, ಎಸ್.ಎಸ್. ಶಿವಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

