ತುಮಕೂರು

ಸಂಗೀತ, ಸಾಹಿತ್ಯದಿಂದ ಮನಸ್ಸಿಗೆ ಆಹ್ಲಾದತೆ: ಪೂರ್ಣಿಮಾ ಅಭಿಮತ

Published On :

ತುಮಕೂರು: ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ಮನುಷ್ಯ ಒತ್ತಡದಲ್ಲಿ ಬದುಕನ್ನು ಸಾಗಿಸುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಮಾನವನ ಮನಸ್ಸನ್ನು ಆಹ್ಲಾದಗೊಳಿಸಲು ಕಲೆ, ಸಂಸ್ಕೃತಿ, ಸಂಗೀತ ಮತ್ತು ಸಾಹಿತ್ಯದಿಂದ ಸಾಧ್ಯವೆಂದು ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ  ನಡೆದ ಸಮಾರಂಭದಲ್ಲಿ ಪ್ರೀತಿಗಾಗಿ ರಾಗದ ಬೆನ್ನೇರಿ ಎಂಬ ಧ್ವನಿಸುರುಳಿ ಬಿಡುಗಡೆಗೊಳಿಸಿ ಮಾತನಾಡಿದರು.
ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಮಾನವ ತನ್ನ ಮನಸ್ಸನ್ನು ಸಂಪ್ರೀತಿಗೊಳಿಸಲು ಹಣದಿಂದ ಸಾಧ್ಯವಿಲ್ಲ. ಪರಿಶುದ್ಧ ಸಂಗೀತ ಆಲಿಸಿದಾಗ ಮಾತ್ರ ಮನಸ್ಸಿನ ಒತ್ತಡ ನಿವಾರಣೆ ಸಾಧ್ಯ. ಈ ನಿಟ್ಟಿನಲ್ಲಿ ಯುವಕರು ಮನಸ್ಸಿಗೆ ಹಿತ ನೀಡುವ ಗೀತೆಗಳನ್ನು ರಚಿಸಿ ಲೋಕಾರ್ಪಣೆ ಮಾಡುತ್ತಿರುವುದು  ಶ್ಲಾಘನೀಯವೆಂದರು.
ಕರವೇ ರಾಜ್ಯ ಉಪಾಧ್ಯಕ್ಷ ಆರ್. ಪುನೀತ್ ಮಾತನಾಡಿ, ಶಿಕ್ಷಣದ ಜೊತೆ ಜೊತೆಯಲ್ಲಿ ಯುವಕರು ತಮ್ಮಲ್ಲಿರುವ ಸಂಗೀತದ ಅಭಿರುಚಿಯನ್ನು ಧ್ವನಿ ಸುರುಳಿಯನ್ನಾಗಿ ರೂಪಿಸಿ ಹೊರ ತರುತ್ತಿರುವುದು ಸಂತಸದ ಸಂಗತಿ. ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಕರ್ನಾಟಕ ರಕ್ಷಣಾ ವೇದಿಕೆ ಸದಾ ಮುಂಚೂಣಿಯಲ್ಲಿರುತ್ತದೆ ಎಂದರು.
ಕರವೇ ಜಿಲ್ಲಾಧ್ಯಕ್ಷ ಟಿ.ಇ.ರಘುರಾಮ್, ಪ್ರದೇಶ ಯುವ ಕುರುಬರ ಸಂಘದ ಅಧ್ಯಕ್ಷ ಎ.ಮಹಾಲಿಂಗಯ್ಯ, ಸಂಗೀತ್ ಮ್ಯೂಸಿಕ್ಸ್ನ ಶ್ರೀನಿವಾಸ್, ಸುಗಮ ಸಂಗೀತ ಕಲಾವಿದ ಕೆಂಕೆರೆ ಮಲ್ಲಿಕಾರ್ಜುನ್, ಪ್ರೀತಿಗಾಗಿ ರಾಗದ ಬೆನ್ನೇರಿ ಧ್ವನಿ ಸುರುಳಿಯ ಸಾಹಿತ್ಯ, ಸಂಗೀತ, ನಿರ್ದೇಶಕ ಗುರುಮೂರ್ತಿ, ಉದಯೋನ್ಮುಖ ಚಿತ್ರ ನಿರ್ದೇಶಕ ಪ್ರವೀಣ್ ಭೂಷಣ್, ಸಂದೀಪ್ , ಉಪನ್ಯಾಸಕ ಕುಮಾರ್ ಮಾತನಾಡಿದರು.
ವೇದಿಕೆಯಲ್ಲಿ ಕರವೇ ಪ್ರೀತಮ್, ಚಂದನ್, ಗಗನ್, ಮಧುಸೂದನ್, ಅಮೂಲ್ಯ , ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು. ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಬ್ಬಿಗೆರೆ ಸ್ವಾಗತಿಸಿ, ಹೊನ್ನೇಶ್ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.