ರತ್ನಾಂಗಿ ಆಭರಣ ಅವ್ಯವಹಾರ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ
ಮೇಲುಕೋಟೆ: ಇಲ್ಲಿನ ಶ್ರೀಚೆಲುವ ನಾರಾಯಣಸ್ವಾಮಿ ದೇವಾಲಯದ ರತ್ನಾಂಗಿ ಆಭರಣ ಅವ್ಯವಹಾರದಲ್ಲಿ ಆರೋಪಿ ಅರ್ಚಕ ನರಸರಾಜಭಟ್ ಅವರನ್ನು ದೋಷಮುಕ್ತ ಎಂದು ಪೊಲೀಸರು ಸಲ್ಲಿಸಿರುವ ಬಿ. ರಿಪೋರ್ಟ್ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಪಾಂಡವಪುರ ಜೆಎಂಎಫ್ಸಿ ನ್ಯಾಯಾಲಯ ಪುರಸ್ಕರಿಸಿ ಪ್ರಕರಣದ ವಿಚಾರಣೆಯನ್ನು ಮೇ 23 ಕ್ಕೆ ಮುಂದೂಡಿದೆ.
ವಿಶ್ವಹಿಂದೂ ಧರ್ಮ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ ನರಸಿಂಹನ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ, ಬಿ. ರಿಪೋರ್ಟ್ ವಿರುದ್ಧ ಹಾಜರಾಗಿದ್ದ ವಕೀಲ ಪ್ರೇಮ್ ಹೈಕೋರ್ಟ್ ನೀಡಿರುವ ಆದೇಶ ಕಡೆಗಣಿಸಿ ಪೊಲೀಸರು ನ್ಯಾಯಾಂಗಕ್ಕೆ ಅಗೌರವ ತೋರುವ ಮಾದರಿಯಲ್ಲಿ ಏಕಪಕ್ಷಿಯವಾಗಿ ತನಿಖೆ ಮಾಡಿ ಪ್ರಮುಖ ಆರೋಪಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಆರೋಪಿ ಮಾಡಿರುವ ಕಾನೂನಿಗೆ ವಿರುದ್ಧವಾಗಿರುವ ಯಾವುದೇ ಅಂಶಗಳನ್ನು ಗಣನೆಗೆ ತೆಗೆದುಕೊಡಿಲ್ಲ. ಹೀಗಾಗಿ ಬಿ. ರಿಪೋರ್ಟ್ ವಜಾ ಮಾಡುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಎಲ್ಲಾ ಸಿದ್ಧತೆಯೊಂದಿಗೆ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

