ಪ್ರತಿಭೆ ಹೊರ ತರಲು ಉತ್ಸವ ಸಹಕಾರಿ: ಮ.ಲ.ನ.ಮೂರ್ತಿ
ಮಧುಗಿರಿ: ಜನಮನದ ಸಂವೇದನೆಗಳ ಕಲಾತ್ಮಕ ಅಭಿವ್ಯಕ್ತಿಗೆ ಉತ್ಸವಗಳು ವೇದಿಕೆ ಆಗಬೇಕು. ಎಲ್ಲ ವರ್ಗದವರಲ್ಲಿ ವಯೋವಾನ ಲಿಂಗ ಭೇದವಿಲ್ಲದೆ ಅಡಗಿರುವ ಕಲಾ ಪ್ರತಿಭೆ ಹೊರ ತರಲು ಉತ್ಸವ ಉತ್ಸಾಹ ತುಂಬತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಅಭಿಪ್ರಾಯಪಟ್ಟರು ಅವರು, ಇಲ್ಲಿನ ಮಾಲೀಮರಿಯಪ್ಪ ರಂಗಮಂದಿರದಲ್ಲಿ ತಾ.ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಶ್ರೀ ಶುಭೋದಯ ಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಧುಗಿರಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ಉತ್ಸವಗಳಿಂದ ಜನರಲ್ಲಿ ಪ್ರೀತಿ, ವಿಶ್ವಾಸ ಮೂಡಿ ಮನುಷ್ಯ ಸಂಬಂಧಗಳು ಗಟ್ಟಿಗೊಳ್ಳಲು ಸಹಕಾರಿ ಎಂದರು.
ಪುರಸಭೆ ಕಿರಿಯ ಅಭಿಂತರ ಅಧಿಕಾರಿ ಬಿ.ವನಿತಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಮಹತ್ತರವಾದುದು. ಇಂತಹ ಕಲಾ ಪ್ರದರ್ಶನಗಳಿಂದ ಮೂಲೆ ಗುಂಪಾಗುತ್ತಿದ್ದ ಕಲೆಗಳು ಪುನಶ್ಚೇತನ ಪಡೆಯುತ್ತವೆ. ಪುರುಷರು, ಸ್ತ್ರೀಯರ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಾರಂಗದ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಇಂತಹ ಉತ್ಸವಗಳು ಆಗಾಗ ಆಯೋಜಿಸುವುದರಿಂದ ಜನರಿಗೆ ಮನರಂಜನೆ ಮತ್ತು ಸಂದೇಶಗಳು ಏಕಕಾಲದಲ್ಲಿ ತಲುಪತ್ತವೆ ಎಂದರು.
ಶ್ರೀಶುಭೋದಯ ಕಲ್ಚರಲ್ ಅಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಕಾರ್ಯದರ್ಶಿ ನಟರಾಜ ಪ್ರಾಸ್ತಾವಿಕ ನುಡಿಗಳನ್ನಾಡಿ ಗ್ರಾಮೀಣ ಪ್ರದೇಶದಲ್ಲಿ ಕೊನೆಕೊಂಡಿಯಾಗಿ ಉಳಿದಿರುವ ಜನಪದ ಕಲೆಗಳನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ಶಿಕ್ಷಕ ನಿರಂಜನ್ ಸ್ವಾಗತಿಸಿ ವಂದಿಸಿದರು. ವಿವಿಧ ಸಂಘ ಸಂಸ್ಥೆಗಳು ಮತ್ತು ಕಲಾ ತಂಡಗಳಿಂದ ಕಲೆಗಳು ಪ್ರದರ್ಶಗೊಂಡವು. ಸಿರಿಗೆಜ್ಜೆ ಕಲಾ ತಂಡದವರ ಮಾರ್ಗದರ್ಶನದಲ್ಲಿ ಕೋಲಾಟ ಜನಾಕರ್ಷಣೆ ಪಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

