ಬಸವಣ್ಣನವರ ವಚನ ಎಂದೆಂದೂ ಪ್ರಸ್ತುತ
ಕನ್ನಡಪ್ರಭ ವಾರ್ತೆ, ತುಮಕೂರು, ಮೇ 5
ಬಸವಣ್ಣನವರ ವಚನಗಳು ಎಂದೆಂದೂ ಪ್ರಸ್ತುತ ಎಂದು ಲೇಖಕಿ ಮಲ್ಲಿಕಾ ಬಸವರಾಜು ಅಭಿಪ್ರಾಯಪಟ್ಟರು. ಅವರು ನಗರದ ಶೈನಾ ಅಧ್ಯಯನ ಸಂಸ್ಥೆಯಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಬವಸಣ್ಣನವರ ವಚನ-ನಿರ್ವಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜಾತಿಯ ಸ್ತರ ವಿನ್ಯಾಸವನ್ನು ಮುರಿದು ಸಮಾಜದ ಕಟ್ಟಕಡೆಯ ಮನುಷ್ಯನನ್ನು ತಲುಪಿದ ಅಂತಃಕರಣ ಬಸವಣ್ಣನವರದ್ದು. ಈ ಹೊತ್ತಿಗೂ ಅನಿವಾರ್ಯವಾದ ಸತ್ಯಗಳನ್ನು 12ನೇ ಶತಮಾನದಲ್ಲಿಯೇ ಜಗತ್ತಿಗೆ ಸಾರಿದರು ಎಂದರು.
ಮನುಷ್ಯ ಮಂಗಳ ಗ್ರಹಕ್ಕೆ ತಲುಪುತ್ತಿರುವ ಪ್ರಸ್ತುತದಲ್ಲಿಯೂ ಜಾತಿ ಗೋಡೆಯಾಗುತ್ತಿದೆ. ಬಸವ ತತ್ವದ ಮುಖೇನ ಶೈನಾ ಅಧ್ಯಯನ ಸಂಸ್ಥೆ ಮೂಲಕ ನಾವು ಕ್ರಿಯಾಶೀಲರಾಗಿ ಜಾತಿ ಗೋಡೆಯನ್ನು ಒಡೆಯಬೇಕಾಗಿದೆ ಎಂದರು.
ಸಂಪಿಗೆ ಸದಾಶಿವಯ್ಯ ಮಾತನಾಡಿ ವೈಚಾರಿಕ ದೃಷ್ಟಿಕೋನದಿಂದ ಬಸವ್ಣನವರನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಲೇಖಕಿ ನಾಗರತ್ನ ಚಂದ್ರಪ್ಪ ಮಾತನಾಡಿ ಬಸವಣ್ಣನವರು ನಡೆನುಡಿಗಳೊಂದಾಗಿ ಬದುಕಿದವರು ಎಂದರು.
ಲೇಖಕಿಯರ ಸಂಘದ ಅಧ್ಯಕ್ಷತೆ ಸಿ.ಎನ್. ಸುಗುಣಾದೇವಿ ಮಾತನಾಡಿ ಬಸವಣ್ಣನವರ ವಚನಗಳಲ್ಲಿನ ವೈಚಾರಿಕತೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ನಮ್ಮ ವ್ಯಕ್ತಿತ್ವದ ನ್ಯೂನತೆಗಳನ್ನು ತಿದ್ದಿಕೊಳ್ಳಬೇಕು ಎಂದರು.
ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆ ಲಲಿತಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬಿ.ಸಿ. ಶೈಲಾ ನಾಗರಾಜ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಕಾರಿ ತಜ್ಞ ಪಿ.ಎನ್. ಶಿವರುದ್ರಪ್ಪ,
ಡಾ. ಎಸ್.ಪಿ. ಪದ್ಮಪ್ರಸಾದ್, ನೆ.ನಂ.ಶಿ. ಉಷಾರಾಣಿ, ಚಂದ್ರಕಲಾ ಕುಮಾರಸ್ವಾಮಿ, ಶಾಂತಕುಮಾರಿ, ಎಂ. ಮನೋಜ್, ಗಂಗಮ್ಮ, ಸವಿತಾ, ಯಶೋದ, ಅಬೀದ, ಪ್ರವೀಣ, ಮಂಗಳ, ಪ್ರಮೀಳ ಉಪಸ್ಥಿತರಿದ್ದರು. ಗಾಯಕಿ ರಾಗಿಣಿ, ಸೌಭಾಗ್ಯ ಸಿದ್ದಪ್ಪ, ಮುತ್ಯಾಲಮ್ಮ ಬಸವಣ್ಣನವರ ವಚನಗಳನ್ನು ಹಾಡಿದರು. ರಂಗಮ್ಮ ಹೊದೇಕಲ್ ಸ್ವಾಗತಿಸಿ ದೊಂಬರನಹಳ್ಳಿ ನಾಗರಾಜ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

