ತುಮಕೂರು

ಕಾಯ್ದೆಯನ್ನು ಸದ್ಬಳಕೆ ಮಾಡಿಕೊಳ್ಳಿ

Published On :

ಕ.ಪ್ರ. ವಾರ್ತೆ, ಕೊರಟಗೆರೆ, ಮೇ 7
ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಾಗಿರುವ ಕಾಯ್ದೆಯನ್ನು ಸದ್ಬಳಕೆ ಮಾಡಿಕೊಳ್ಳುವ ಜೊತೆಗೆ ಈ ಕಾಯ್ದೆ ಯಾವುದೇ ರೀತಿ ದುರ್ಬಳಕೆಯಾಗದಂತೆ ಮಹಿಳೆಯರು ಎಚ್ಚರ ವಹಿಸಬೇಕೆಂದು ಕೊರಟಗೆರೆ ಸಿವಿಲ್ ನ್ಯಾಯಾಧೀಶ ಡಿ. ರಾಘವೇಂದ್ರ ತಿಳಿಸಿದರು.
ಅವರು ಪಟ್ಟಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಬಗ್ಗೆ ಅಂದೋಲನ ಜಾಥಾ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿದರು.
ಪುರುಷ ಪ್ರಧಾನವದ ಸಮಾಜದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಮಹಿಳೆಯರ ಮೇಲೆ ನಿರಂತರವಾದ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಅತ್ಯಾಚಾರ ಹಾಗೂ ಮಕ್ಕಳ ಸಾಗಾಣಿಕೆ ನಡೆಯುತ್ತಿದ್ದು ಇದನ್ನು ತಪ್ಪಿಸಲು ಮಹಿಳಾ ದೌರ್ಜನ್ಯ ಕಾಯ್ದೆಯನ್ನು ಜಾರಿ ಮಾಡಲಾಗಿದೆ ಈ ಕಾಯ್ದೆ ಮಹಿಳೆಯರ ರಕ್ಷಣೆಗಾಗಿ ಅನುಷ್ಠಾನಗೊಂಡಿದೆ ಎಂದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಮಾತನಾಡಿ ಮಹಿಳೆಗೆ ಮಹಿಳೆಯೇ ವೈರಿಯಾಗಿದ್ದು ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಾಣಿಕೆಗೆ ಮಹಿಳೆಯರೇ ಸಹಾಯ ಮಾಡುತಿರುವುದು ಕಂಡು ಬರುತ್ತಿದು ಅಪರಿಚಿತ ಮಹಿಳೆಯರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
ತಕ್ಷಣ ಕ್ಷಣದ ಸಹಾಯ ಹಾಗೂ ತಾತ್ಕಾಲಿಕ ಆಶ್ರಯ, ಕೌನ್ಸೆಲಿಂಗ್ ಮತ್ತು ಮಾರ್ಗದರ್ಶನ, ಪೊಲೀಸ್ ರಕ್ಷಣೆ ಹಾಗೂ ನೆರವು, ಉಚಿತ ಕಾನೂನು ಸಲಹೆ ಹಾಗೂ ನೆರವು, ವಿವಿಧ ವೃತ್ತಿ ತರಬೇತಿ ಹಾಗೂ ನೆರವು ಮತ್ತು ಅನುಸರಣಾ ಸೇವೆಗಳು ಅರ್ಥಿಕ ನೆರವಿಗೆ ಶಿಫಾರಸು ಮಾಡಲಾಗುತ್ತದೆ ಎಂದು ತಿಳಿಸಿದರು. ಹಿರಿಯ ವಕೀಲ ಶಿವಣ್ಣ ಮಹಿಳಾ ಮತ್ತು ಮಕ್ಕಳ ರಕ್ಷಣೆ ಬಗ್ಗೆ ತಿಳಿಸಿದರು.  ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರ್. ವಿಶ್ವನಾಥ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎ. ಪುಟ್ಟರಾಜು, ಕಾರ್ಯದರ್ಶಿ ಜಿ.ಡಿ.ದೇವರಾಜು, ನಾಗರಾಜು, ಕೃಷ್ಣಮೂರ್ತಿ, ಮಮತಾಜ್ ಭೀ, ಸಿಆರ್ಪಿ ಹನುಮಂತರಾಜು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.




ಪುರುಷ ಪ್ರಧಾನವದ ಸಮಾಜದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಮಹಿಳೆಯರ ಮೇಲೆ ನಿರಂತರವಾದ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಅತ್ಯಾಚಾರ ಹಾಗೂ ಮಕ್ಕಳ ಸಾಗಾಣಿಕೆ ನಡೆಯುತ್ತಿದ್ದು ಇದನ್ನು ತಪ್ಪಿಸಲು ಮಹಿಳಾ ದೌರ್ಜನ್ಯ ಕಾಯ್ದೆಯನ್ನು ಜಾರಿ ಮಾಡಲಾಗಿದೆ ಈ ಕಾಯ್ದೆ ಮಹಿಳೆಯರ ರಕ್ಷಣೆಗಾಗಿ ಅನುಷ್ಠಾನಗೊಂಡಿದೆ
ಟಿ  ಡಿ. ರಾಘವೇಂದ್ರ
ಕೊರಟಗೆರೆ ಸಿವಿಲ್ ನ್ಯಾಯಾಧೀಶ




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.