ತುಮಕೂರು

ಕನ್ನಡ ಭಾಷೆಗೆ ತನ್ನದೇ ಶಕ್ತಿ ಇದೆ: ದೊಡ್ಡರಂಗೇಗೌಡ

Published On :

ಕ.ಪ್ರ.ವಾರ್ತೆ ತುಮಕೂರು ಮೇ 10
ಸೂರ್ಯ-ಚಂದ್ರ, ಭೂಮಿ-ಬಾನು, ನದಿ-ದಡಕ್ಕೆ ಹೇಗೆ ಸಂಬಂಧ ಇರುವ ಸತ್ಯವೋ ಅದೇ ರೀತಿ ಕನ್ನಡ ಭಾಷೆಗೂ ತನ್ನದೆ ಆದ ಶಕ್ತಿ ಇರುವುದು ಸತ್ಯ ಎಂದು ಸಾಹಿತಿ ಡಾ. ದೊಡ್ಡರಂಗೇಗೌಡ ತಿಳಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಇತ್ತೀಚೆಗೆ ಸುಪ್ರಿಂಕೋರ್ಟ್ ನೀಡಿದ ಕನ್ನಡ ಭಾಷಾ ಮಾಧ್ಯಮಕ್ಕೆ ಸಂಬಂಧಿಸಿ ಮಾತನಾಡಿ, ಪ್ರಪಂಚದ ಎಲ್ಲಾ ಭಾಷೆಗೂ ಪುರಸ್ಕಾರ ನೀಡಿ, ಅದರೆ ಕನ್ನಡ ಭಾಷೆಗೆ ಮೊದಲ ಮಣೆಯಾಕಿ. ಮಾತೃಭಾಷೆಯಾದ ಕನ್ನಡದಲ್ಲಿಯೇ ಸಹಿ ಮಾಡಿ. ವಿಶ್ವದ ಎತ್ತರಕ್ಕೆ ಕನ್ನಡ ಭಾಷೆಯನ್ನು ತೆಗೆದುಕೊಂಡು ಹೋಗಿ ಎಂದು ತಿಳಿಸಿದರು.
ಮುಂದೆ ಏನಾಗಬೇಕು ಎಂಬುದನ್ನು ಪದವಿಯಲ್ಲಿಯೇ ವಿದ್ಯಾರ್ಥಿಗಳು ತೀರ್ಮಾನಿಸಬೇಕು. ಶ್ರದ್ಧೆಯೇ ಬದುಕಿನ ಗದ್ದೆ. ತಮ್ಮ ವಿದ್ಯಾಭ್ಯಾಸದಲ್ಲಿ ಕ್ರಮ ಬದ್ಧತೆ, ಕ್ರೀಯಾಶೀಲತೆ, ಶಿಸ್ತು ಕಲಿಯಿರಿ. ದೇಹಕ್ಕಿಂತ ಮನಸು ಬೆಳೆಸಲು ಶ್ರಮಪಡಿ. ಅದರೆ ಮನಸನ್ನು ಚಂಚಲಗೊಳಿಸದೇ ದೈರ್ಯದಿಂದ ಮುಂದೆ ಮುಂದೆ ಹೆಜ್ಜೆಯಾಕಿ ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸಾಹಿತಿ ಆರ್.ಜಿಹಳ್ಳಿ ನಾಗರಾಜ್ ಮಾತನಾಡಿ ಇಂದಿನ ಟಿವಿ ಮಾಧ್ಯಮದ ಪ್ರಭಾವದಿಂದ ಮಾನವನ ಬೌಧಿಕ ಆಲೋಚನ ಶಕ್ತಿ ಕಡಿಮೆಯಾಗುತ್ತಿದೆ. ಈ ಟಿವಿ ಮಾಧ್ಯಮ ಇರುವ ಮನೆಗೆ ಬಂದ ಅತಿಥಿಗಳಿಗೆ ಗೌರವ ಕಡಿಮೆಯಾಗುತ್ತಿದೆ. ಈ ಟಿವಿಗಳಲ್ಲಿನ ಕೆಲವು ಕಾರ್ಯಕ್ರಮಗಳು  ಸತ್ಯವನ್ನು ಮರೆಮಾಚಿ ಮಾನವರನ್ನು ದಾರಿ ತಪ್ಪಿಸುತ್ತಿವೆ ಎಂದು ದೂರಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎಲ್. ವೈದ್ಯೇಶ್ವರ ಅವರು ಮಾತನಾಡಿ, ಮುಂದೆ ಉನ್ನತ ವಿದ್ಯಾಭ್ಯಾಸ ಮತ್ತು ಒಳ್ಳೆಯ ವೃತ್ತಿ ಪಡೆದು ತಂದೆ-ತಾಯಿ ಹಾಗೂ ಕಾಲೇಜಿಗೆ ಒಳ್ಳೆಯ ಗೌರವ ತರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಂತಿಪ್ರಿಯ ಪ್ರಾರ್ಥಿಸಿದರು. ಸಹ ಪ್ರಾಧ್ಯಾಪಕ ಪ್ರೊ.ಆರ್.ಎಸ್. ಸುರೇಶ್ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ದಾಕ್ಷಾಯಿಣಿಪ್ರಕಾಶ್ ಕಾಲೇಜು ವರದಿ ಓದಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ. ಪದ್ಮಜಾ, ಪ್ರೊ. ಲಿಂಗದೇವರಪ್ಪ ಮತ್ತು ಕೆ.ಆರ್. ಪ್ರಕಾಶ್ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರೊ.ಎಸ್. ರಾಜೇಶ್ ವಂದಿಸಿದರು. ಪ್ರೊ. ಸತೀಶ್ ವರದೇವ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.