ತುಮಕೂರು

ನಿಯಮ ಮೀರಿದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

Published On :

ಕ.ಪ್ರ.ವಾರ್ತೆ ತುಮಕೂರು ಮೇ 10
ತುಮಕೂರಿನಲ್ಲಿ ಹೊಸದಾಗಿ ಪ್ರಾರಂಭವಾದ ಕೆಲ ಶಿಕ್ಷಣ ಸಂಸ್ಥೆಗಳು ನಿಯಮ ಮೀರಿ ಕೆಲಸ ಮಾಡುತ್ತಿದ್ದು ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಎಬಿವಿಪಿ ಪಿಯು ಡಿಡಿ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿತು.
ಎಸ್ಎಸ್ಎಲ್ಸಿ ಫಲಿತಾಂಶಕ್ಕೂ ಮುನ್ನಾ ಪದವಿಪೂರ್ವ ಕಾಲೇಜುಗಳು ಅನಧಿಕೃತ ದಾಖಲಾತಿ ಪ್ರಕ್ರಿಯೆಯಲ್ಲಿ ತೊಡಗಿರುವುದು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿಯಮ ಮೀರಿರುವ ಹಿನ್ನಲೆಯಲ್ಲಿ ರಾಜ್ಯ ಸಹ ಕಾರ್ಯದರ್ಶಿ  ಅಮರೇಶ್, ಜಿಲ್ಲಾ ಸಂಚಾಲಕ್ ಸುಬ್ರಮಣಿ, ಪ್ರಸನ್ನ, ತೇಜಮೂರ್ತಿ ಮುಂತಾದವರನ್ನೊಳಗೊಂಡ ಅಭಾವಿಪ ನಿಯೋಗ ಪದವಿಪೂರ್ವ ಉಪನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕಾಲೇಜುಗಳ ಸಂಖ್ಯೆ ಅಧಿಕವಾದ ಪರಿಣಾಮ ಸಂಸ್ಥೆಗಳ ನಡುವೆ ದಾಖಲಾತಿಗಾಗಿ ಸ್ಪರ್ಧೆ ನಡೆದಿದೆ. ಎಸ್ಎಸ್ಎಲ್ಸಿ ಫಲಿತಾಂಶಕ್ಕೂ ಮುನ್ನಾ ಪೋಷಕರನ್ನು ಸಂಪರ್ಕಿಸುತ್ತಿದ್ದಾರೆ. ಪೋಷಕರ ಮೇಲೆ ವಿದ್ಯಾರ್ಥಿಗಳನ್ನು ತಮ್ಮ ಕಾಲೇಜಿಗೆ ಸೇರಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಮಾತ್ರವಲ್ಲ 5 ರಿಂದ 10 ಸಾವಿರದ ವರೆಗೆ ಹಣ ನೀಡಿ ಅಡ್ವಾನ್ಸ್ ಬುಕಿಂಗ್ ಮಾಡಿಕೊಳ್ಳಲಾಗುತ್ತಿದೆ. ಇದು ಶಿಕ್ಷಣ ವ್ಯಾಪಾರಿಕರಣದ ಉತ್ತಮ ಉದಾಹರಣೆಯಾಗಿದೆ. ತಕ್ಷಣ ವ್ಯಾಪಾರಿಗಳನ್ನು ಪತ್ತೆ ಹಚ್ಚಿ ಶಿಕ್ಷಣದ ಅಂಗಡಿಗಳನ್ನು ಮುಚ್ಚಬೇಕು ಎಂದಿದ್ದಾರೆ.
ಸರ್ಕಾರ ನಿರ್ಧರಿಸಿರುವುದಕ್ಕಿಂತ ಹೆಚ್ಚು ಶುಲ್ಕ ಮತ್ತು ಡೊನೇಶನ್ ವಸೂಲಿ ಮಾಡಲಾಗುತ್ತಿದೆ. ಖಾಸಗಿ ಪಿಯು ಕಾಲೇಜುಗಳು ಯಾವ ರೀತಿ ಪ್ರವೇಶ ನೀತಿ ಪಾಲಿಸಬೇಕು ಮತ್ತು ಎಷ್ಟು ಶುಲ್ಕ ಹಾಗೂ ಡೊನೇಶನ್ ತೆಗೆದುಕೊಳ್ಳಬೇಕು ಎಂದು ಸರ್ಕಾರದ ನಿಯಮ ಇದೆ. ಆದರೆ ಈ ನಿಯಮವನ್ನು ಬಹುತೇಕ ಎಲ್ಲಾ ಕಾಲೇಜುಗಳು ಗಾಳಿಗೆ ತೂರಿವೆ ಎಂದಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪ್ರಾರಂಭವಾದ ಕೆಲವು ಕಾಲೆಜುಗಳಲ್ಲಿ ಮೂಲಬೂತ ಸೌಲಭ್ಯಗಳ ಕೊರತೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸ್ವಂತ ಕಟ್ಟಡವೆ ಇಲ್ಲದ ಕೆಲವು ಕಾಲೇಜುಗಳು ವಾಣಿಜ್ಯ ಕಟ್ಟಡಗಳಲ್ಲಿ, ಸಭಾಂಗಣಗಳಲ್ಲಿ ಪ್ರಾರಂಭಗೊಂಡಿದೆ. ನಗರದ ಕೆಲವು ಕಾಲೇಜುಗಳು ದಾಖಲಾತಿ ಹೆಚ್ಚಳಕ್ಕಾಗಿ ರಾಜ್ಯದ ಪ್ರತಿಷ್ಟಿತ ಸಂಸ್ಥೆಗಳ ಹೆಸರನ್ನು ಬಳಸಿಕೊಂಡಿದೆ. ಆದರೆ ಅಲ್ಲಿನ ಶೈಕ್ಷಣಿಕ ವಾತವರಣಕ್ಕೂ ಈ ಕಾಲೇಜುಗಳು ವಾತವಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದು ಪೋಷಕರ ವಂಚನೆಯ ಮತ್ತೊಂದು ಮುಖವಾಗಿದೆ ಎಂದಿದ್ದಾರೆ.
ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕಾಲೇಜು, ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಸರ್ಕಾರದ ವಿರುದ್ಧ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದಾಗಿ ಎಬಿವಿಪಿ ಎಚ್ಚರಿಸಿದೆ. ನಿಯೋಗದಲ್ಲಿ ರವಿಕುಮಾರ್, ಸುಬ್ರಮಣಿ, ಅಮರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.